ಜಿಲ್ಲಾ ವಿಭಜನೆಗೆ ಸ್ವಾಗತಾರ್ಹ ಭೌಗೋಳಿಕವಾಗಿ ಹಗರಿಬೊಮ್ಮನಹಳ್ಳಿ ಜಿಲ್ಲಾ ಕೇಂದ್ರಕ್ಕೆ ಸೂಕ್ತ :ಭೀಮನಾಯ್ಕ

ಹಗರಿಬೊಮ್ಮನಹಳ್ಳಿನ.೨೦ ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ವಿಜಯನಗರ ಜಿಲ್ಲೆ ಮಾಡಲು ಹೊರಟಿರುವ ಸರ್ಕಾರದ ಕೆಲಸಕ್ಕೆ ನಾನು ಸ್ವಾಗತಾರ್ಹ ಆದರೆ ಭೌಗೋಳಿಕವಾಗಿ ಹಗರಿಬೊಮ್ಮನಹಳ್ಳಿ ಜಿಲ್ಲಾ ಕೇಂದ್ರ ಮಾಡಿದರೆ ಸೂಕ್ತ ಎಂದು ಶಾಸಕ ಭೀಮ ನಾಯ್ಕ ಹೇಳಿದರು.
ಪಟ್ಟಣದ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ ಸರ್ಕಾರ ಯಾರನ್ನು ಮೆಚ್ಚಿಸಲು ತರಾತುರಿಯಲ್ಲಿ ಜಿಲ್ಲೆಯನ್ನು ಮಾಡಲು ಹೊರಟಿರುವುದು ಹಾಸ್ಯಾಸ್ಪದ. ಏಕೆಂದರೆ ನಂಜುಂಡಪ್ಪ ವರದಿ ಪ್ರಕಾರ ಪಶ್ಚಿಮ ತಾಲೂಕುಗಳಾದ ಕೂಡ್ಲಿಗಿ ಹಗರಿಬೊಮ್ಮನಹಳ್ಳಿ ಕೊಟ್ಟೂರು ಹರಪನಹಳ್ಳಿ ಹಡಗಲಿ ಎಲ್ಲಾ ತಾಲ್ಲೂಕುಗಳು ಸೇರಿ ಒಂದು ಜಿಲ್ಲಾ ಕೇಂದ್ರ ಮಾಡಬೇಕು ಎಂದು ಮುಖ್ಯಮಂತ್ರಿಗಳ ಬಳಿ ನಿಯೋಗ ಹೋಗಿ ಮನವಿ ಸಲ್ಲಿಸಿ ಬಂದಿದ್ದೆವು .ಆದರೆ ಸರ್ಕಾರ ಭೌಗೋಳಿಕ ಸಮೀಕ್ಷೆ ಮಾಡದೆ ಹೊಸಪೇಟೆ ಯನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಲು ಹೊರಟಿರುವುದು ಸಮಂಜಸವಲ್ಲ. ಜಿಲ್ಲಾ ವಿಭಜನೆ ಮಾಡಲಿ ಆದರೆ ಹಗರಿಬೊಮ್ಮನಹಳ್ಳಿ ಯನ್ನು ವಿಜಯನಗರ ಜಿಲ್ಲೆಯನ್ನಾಗಿ ಘೋಷಿಸಿದರೆ ಈ ಭಾಗದರೈತರಿಗೆ,ನೌಕರರಿ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಇದರ ಬಗ್ಗೆ ಯಾರೇ ಹೋರಾಟ ಮಾಡಿದರು ನಾನು ಬೆಂಬಲ ನೀಡುತ್ತೇನೆ ಎಂದರು.

ಮರಾಠ ನಿಗಮ ರಚನೆಗೆ ವಿರೋಧ:
ಬಿಜೆಪಿ ಸರ್ಕಾರ ಈಗ ಇರುವ ಆನೇಕ ನಿಗಮಗಳಿಗೆ ಒಂದು ಬಿಡಿಗಾಸು ಅನುದಾನ ನೀಡಿಲ್ಲ.ಇದರ ಮಧ್ಯೆ ಮರಾಠ ನಿಗಮ ಸ್ಥಾಪಿಸಿ ರಾಜಕೀಯವಾಗಿ ಮತ ಸೆಳೆಯುವ ಕೆಲಸ ಮಾಡುತ್ತಿರುವುದು ನೋಡಿದರೆ ಬಿಜೆಪಿ ಜಾತಿ ರಾಜಕೀಯ ಮಾಡುತ್ತದೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಎರಡು ಉಪ ಚುನಾವಣೆಗೆ ಸಲುವಾಗಿ ಬಿಜೆಪಿ ಸರ್ಕಾರ ನಿಗಮಗಳನ್ನು ಸ್ಥಾಪಿಸಿ ಅವರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿರುವುದು ನಾಚಿಕೆಗೇಡು ಎಂದರು.ಪರಸಭೆ ನೂತನ ಕಟ್ಟಡ ನಿರ್ಮಾಣ ಶೀಘ್ರವಾಗಿ ಕ್ರಮಕೈಗೊಳ್ಳಲಾಗುವುದು.ತಹಶೀಲ್ದಾರ್ ಕಚೇರಿ ಜಾಗದಲ್ಲಿ ಪರಸಭೆ ಕಚೇರಿ ನಿರ್ಮಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಕ್ಕಿ ತೋಟೇಶ್ ಹೆಗ್ಡಾಳ್ ರಾಮಣ್ಣ,ಮುಖಂಡರಾದ ಪವಾಡಿ ಹನುಮಂತ,ಹುಡೇದ್ ಗುರುಬಸವರಾಜ್, ಹಲ್ದಾಳ್ ವಿಜಯಕುಮಾರ್, ಕನ್ನಳ್ಳಿ ಚಂದ್ರು ದೇವೇಂದ್ರಪ್ಪಚಿಂತ್ರಪಳ್ಳಿ, ಡಿಶ್ ಮಂಜುನಾಥ್ ಎಂ.ಮರಿ ರಾಮಪ್ಪ, ಜಂದಿ ಸಾಬ್, ಸೋಗಿ ಕೊಟ್ರೇಶ್, ಗುತ್ತಿಗೆದಾರರಾದ ಕೇಶವರೆಡ್ಡಿ.ಆರ್, ಉಮಾಪತಿ ಹನಸಿ ಇತರರು ಇದ್ದರು