ಜಿಲ್ಲಾ ವರದಿಗಾರರ ಕೂಟದಲ್ಲಿ ಬಸವೇಶ್ವರ ಜಯಂತಿ ಆಚರಣೆ

ಸಂಜೆವಾಣಿ ವಾರ್ತೆ

ದಾವಣಗೆರೆ.ಮೇ.16; ಸಮ ಸಮಾಜ ನಿರ್ಮಾಣಕ್ಕಾಗಿ ಬಸವೇಶ್ವರರು ದೊಡ್ಡ ಕ್ರಾಂತಿಯನ್ನೆ ಮಾಡಿದ್ದರು ಎಂದು ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷರಾದ ಕೆ. ಏಕಾಂತಪ್ಪ ಅಭಿಪ್ರಾಯಿಸಿದರು..ದಾವಣಗೆರೆ ನಗರದ ಕೆಬಿ ಬಡಾವಣೆಯಲ್ಲಿರುವ ಜಿಲ್ಲಾ ವರದಿಗಾರರ ಕೂಟದಲ್ಲಿ ಹಮ್ಮಿಕೊಂಡಿದ್ದ ಬಸವೇಶ್ವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಸವೇಶ್ವರರು 12ನೇ ಶತಮಾನದಲ್ಲಿ ದೊಡ್ಡ ಕ್ರಾಂತಿಯನ್ನೆ ಮಾಡಿದವರು, ತಮ್ಮ ವಚನಗಳ ಮೂಲಕ ಸಾಮಾಜಿಕ ಕ್ರಾಂತಿಗೆ ಮುನ್ನಡೆ ಬರೆದವರು, ಅಂದೇ ಎಲ್ಲಾ ಜಾತಿ ಜನಾಂಗವನ್ನ ಜೊತೆಗೆ ಸೇರಿಸಿಕೊಂಡು ಸಂಸತ್ ಪರಿಕಲ್ಪನೆ ಮೂಡಿಸಿದವರು, ಜೀವನ ಮೌಲ್ಯವನ್ನು ಸಾರಿದ ಮಹಾ ಚೇತನ, ವಿಶ್ವಗುರು ಬಸವೇಶ್ವರರ ಸಾಮಾಜಿಕ ಪ್ರಜ್ಞೆ ಇಂದಿನ ಸಮಾಜಕ್ಕೆ ಅವಶ್ಯವಾಗಿದೆ ಎಂದು ತಿಳಿಸಿದರು.. ಈ ಸಂದರ್ಭದಲ್ಲಿ ಜಿಲ್ಲಾ ವರದಿಗಾರರ ಕೂಟದ ಪ್ರಧಾನ ಕಾರ್ಯದರ್ಶಿ ಡಾ. ಸಿ ವರದರಾಜ್, ಖಜಾಂಚಿ ಮಧುನಾಗರಾಜ್ ಕುಂದುವಾಡ, ಕಾನಿಪ ಪ್ರಧಾನ ಕಾರ್ಯದರ್ಶಿ ಫಕ್ರುದ್ದಿನ್, ಹಿರಿಯ ವರದಿಗಾರರಾದ ರವಿಬಾಬು, ನಾಗರಾಜ್ ಬಡದಾಳ್, ವಿನಾಯಕ್ ಪೂಜಾರ್, ರುದ್ರಮ್ಮ, ಸಂಜಯ್, ಪುನೀತ್, ಕಿರಣ್, ಲೋಕೇಶ್, ನೂರುಲ್ಲಾ ಸೇರಿದಂತೆ ಕೂಟದ ಪದಾಧಿಕಾರಿಗಳು, ಸದಸ್ಯರು ಇದ್ದರು.