ಜಿಲ್ಲಾ ವಕ್ಪ್ ಬೋರ್ಡ್ ನಲ್ಲಿ ನಾಮನಿರ್ದೇಶನ ಬಿಜೆಪಿ ಕಾರ್ಯಕರ್ತರಿಗೆ ಅನ್ಯಾಯ

ಬಾಗೇಪಲ್ಲಿ, ಆ.೪- ತಾಲ್ಲೂಕಿನ ಭಾರತೀಯ ಜನತಾ ಪಾರ್ಟಿಯಲ್ಲಿ ಸುಮಾರು ೧೫ ವರ್ಷಗಳಿಂದ ಸಕ್ರಿಯ ಸದಸ್ಯರಾಗಿ ,ಪಕ್ಷದ ಚಟುವಟಿಕೆಗಳಲ್ಲಿ, ಕಾರ್ಯಕ್ರಮಗಳಲ್ಲಿ ತಪ್ಪದೇ ಭಾಗವಹಿಸುತ್ತಿದ್ದೇನೆ ಆದರೆ ಬಾಗೇಪಲ್ಲಿ ತಾಲ್ಲೂಕಿನಲ್ಲಿ ಅಲ್ಪಸಂಖ್ಯಾತರಿಗೆ ,ಅದರಲ್ಲಿಯೂ ಮುಖ್ಯವಾಗಿ ಬಿಜೆಪಿ ಕಾರ್ಯಕರ್ತರಿಗೆ ಜಿಲ್ಲಾ ವಕ್ಪ್ ಬೋರ್ಡ್ ನಲ್ಲಿ ನಾಮನಿರ್ದೇಶನ ನೀಡದೇ ಅನ್ಯಪಕ್ಷದವರಿಗೆ ನಾಮನಿರ್ದೇಶನ ಮಾಡಲಾಗಿದೆ ಎಂದು ಅಲ್ಪಸಂಖ್ಯಾತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಅಮಿದುಲ್ಲಾ ಆರೋಪಿಸಿದ್ದಾರೆ.
ಈ ವೇಳೆ ಅವರು ಮಾತನಾಡಿ, ಬಾಗೇಪಲ್ಲಿ ತಾಲ್ಲೂಕಿನಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ವಕ್ಪ್ ಬೋರ್ಡ್ ಗೆ ಜಿಲ್ಲಾ ಉಪಾಧ್ಯಕ್ಷರಾಗಿ ಬಾಬಾ ಪಕೃದ್ದೀನ್, ಸದಸ್ಯರಾಗಿ ಮೆಹರಾ ಬಾಷಾ, ಷರೀಪ್, ರವರನ್ನು ಆಯಕೆ ಮಾಡಿರುವುದು ಅತ್ಯಂತ ಖಂಡನೀಯವಾಗಿದೆ. ಏಕೆಂದರೆ ಬಾಬಾ ಪಕೃದ್ದೀನ್ ರವರು ಈಗಾಗಲೇ ಆಶ್ರಯ ಸಮಿತಿಯ ಸದಸ್ಯರಾಗಿದ್ದರೂ ಅವರಿಗೆ ವಕ್ಪ್ ಬೋರ್ಡ್ ಜಿಲ್ಲಾ ಉಪಾಧ್ಯಕ್ಷರಾಗಿ ಆಯಕೆ ಮಾಡಿ, ಒಬ್ಬರಿಗೆ ಎರಡು ಸರ್ಕಾರದ ನಾಮನಿರ್ದೇಶನಗಳನ್ನು ನೀಡಲಾಗಿದೆ, ವಕ್ಪ್ ಬೋರ್ಡ್ ಸದಸ್ಯರಾಗಿ ಆಯಕೆಯಾಗಿರುವ ಮೆಹರಾ ಬಾಷ್ ಮತ್ತು ಷರೀಪ್ ರವರು ಬಿಜೆಪಿ ಪಕ್ಷ ಸದಸ್ಯರು ಅಲ್ಲ, ಬಿಜೆಪಿ ಪಕ್ಷದ ಬಾವುಟವನ್ನು ಒಮ್ಮೆಯೂ ಹಿಡಿದಿಲ್ಲ, ಬಿಜೆಪಿ ಪಕ್ಷ ದ ಕಾರ್ಯಕ್ರಮಗಳಲ್ಲಿ ಭಾಗವಹಿಸಿಯು ಇಲ್ಲ . ಇದರಿಂದಾಗಿ ನಿಷ್ಠಾವಂತ, ಸಕ್ರಿಯ ಬಿಜೆಪಿ ಕಾರ್ಯಕರ್ತರಿಗೆ ಅನ್ಯಾಯವಾಗಿದೆ. ಈ ಬಗ್ಗೆ ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ರಾಮಲಿಂಗಪ್ಪನವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿರುವುದಿಲ್ಲ, ಅದ್ದಕ್ಕಾಗಿ ಸಂಬಂಧ ಪಟ್ಟವರೂ ಈ ಕೊಡಲೇ ಈ ಅನ್ಯಾಯವನ್ನು ಸರಿಪಡಿಸಿ, ಬಿಜೆಪಿ ಪಕ್ಷದ ಸಕ್ರಿಯ ಕಾರ್ಯಕರ್ತರಿಗೆ ಜಿಲ್ಲಾ ವಕ್ಪ್ ಬೋರ್ಡ್ ನಾಮನಿರ್ದೇಶನಗಳನ್ನು ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಅಲ್ಪಸಂಖ್ಯಾತ ಮೋರ್ಚಾದ ಪ್ರದಾನ ಕಾರ್ಯದರ್ಶಿ ರಿಯಾಜಾ ಅಹಮ್ಮದ್ ,ಬಿಜೆಪಿ ಮುಖಂಡರಾದ ಕನ್ನಡಸೇನೆ ಬಾಬಾಜಾನ್ , ಮತ್ತಿತರರು ಹಾಜರಿದ್ದರು.