ಜಿಲ್ಲಾ ವಕೀಲರ ಸಂಘದ ಚುನಾವಣೆ; ಶಾಂತಿಯುತ ಮತದಾನ

ದಾವಣಗೆರೆ.ಏ.೨೧: ಜಿಲ್ಲಾ ವಕೀಲರ ಸಂಘದ 2023-24  ಮತ್ತು 2024-25ನೇ ಸಾಲಿನ ದ್ವಿವಾರ್ಷಿಕ ಸಾಲಿನ ಚುನಾವಣೆಯು ದಾವಣಗೆರೆಯ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣದಲ್ಲಿರುವ ಜಿಲ್ಲಾ ವಕೀಲರ ಸಂಘದ ಸಭಾಂಗಣದಲ್ಲಿ ನಡೆಯಿತು. ಶುಕ್ರವಾರ ಬೆಳಿಗ್ಗೆ 11.30ರಿಂದ ಸಂಜೆ 5ರವರೆಗೆ ಜಿಲ್ಲಾ ವಕೀಲರ ಸಂಘದಲ್ಲಿ ಚುನಾವಣೆ ನಡೆಯುತ್ತಿದ್ದು  ಸಂಜೆ 8ರ ವೇಳೆಗೆ ಫಲಿತಾಂಶ ಹೊರಬೀಳಲಿದೆ.ಅಧ್ಯಕ್ಷ ಸ್ಥಾನಕ್ಕೆ ಎಲ್.ಹೆಚ್.ಅರುಣಕುಮಾರ್, ವಿ.ಗೋಪಾಲ, ಮಲ್ಲಿಕಾರ್ಜುನಪ್ಪ ಕೆ.ಎಂ.ಗುಮ್ಮನೂರು, ಪಂಚಪ್ಪ ಯಲ್ಲಪ್ಪ ಹಾದಿಮನಿ ಸ್ಪರ್ಧೆ ಮಾಡಿದ್ದಾರೆ.ಉಪಾಧ್ಯಕ್ಷರ ಸ್ಥಾನಕ್ಕೆ ಜಿ.ಕೆ.ಬಸವರಾಜ, ಎಸ್.ಹೆಚ್.ವಿನಯ್ ಕುಮಾರ್, ಟಿ.ದೇವಿಕುಮಾರ್, ಕಾರ್ಯದರ್ಶಿ ಸ್ಥಾನಕ್ಕೆ ಎಸ್. ಬಸವರಾಜ, ಪಿ. ಲಕ್ಕಪ್ಪ, ಎಸ್. ಮಂಜು ಸ್ಪರ್ಧೆ ಮಾಡಿದ್ದಾರೆ.ಸಹಕಾರ್ಯದರ್ಶಿ ಸ್ಥಾನಕ್ಕೆ ಕೆ.ಬಿ. ಗಂಗಾಧರನಾಯ್ಕ, ಎಸ್.ಜಯಣ್ಣ, ಎ.ಎಸ್.ಮಂಜುನಾಥ, ಶ್ರೀರಾಮಕೃಷ್ಣ ಗೌಡ್ ಈಳಿಗೇರ, ವಿ.ವಸಂತ್ ಕುಮಾರ್ ಕಣದಲ್ಲಿದ್ದಾರೆ.ಉಳಿದಂತೆ ಮಹಿಳಾ ಮೀಸಲು ಸ್ಥಾನ ಸೇರಿ ಕಾರ್ಯಕಾರಿ ಸಮಿತಿಗೆ ನಾಮಪತ್ರ ಸಲ್ಲಿಸಿದ್ದ ಬಿ.ಅಜ್ಜಯ್ಯ, ಆರ್.ಭಾಗ್ಯಲಕ್ಷ್ಮಿ, ಎಂ.ಚೌಡಪ್ಪ, ಟಿ.ಹೆಚ್.ಮಧುಸೂಧನ, ಎಲ್.ನಾಗರಾಜ, ಕೆ.ಎಂ.ನೀಲಕಂಠಯ್ಯ, ಎಂ.ರಾಘವೇಂದ್ರ, ಜಿ.ಜೆ.ಸಂತೋಷ್ ಕುಮಾರ್, ವಾಗೀಶ್ ಕಟಗಿಹಳ್ಳಿ ಮಠ ಇವರು ಕಾರ್ಯಕಾರಿ ಸಮಿತಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.