
ದಾವಣಗೆರೆ.ಏ.೨೪: ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾಗಿ ಎಲ್.ಹೆಚ್.ಅರುಣ್‌ಕುಮಾರ್ ಆಯ್ಕೆ ಆಗಿದ್ದಾರೆ. 2023-25ನೇ ಸಾಲಿಗೆ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಚುನಾವಣೆಯಲ್ಲಿ ಜಿಲ್ಲಾ ವಕೀಲರ ಸಂಘದ ಅಜೀವ ಸದಸ್ಯರು 1200 ಮತದಾರರು ಇದ್ದು, ಅದರಲ್ಲಿ 846 ಮತಗಳು ಚಲಾವಣೆ ಆಗಿದ್ದು, ಅದರಲ್ಲಿ ಎಲ್.ಹೆಚ್.ಅರುಣ್‌ಕುಮಾರ್ ಅವರು 319 ಮತಗಳನ್ನು ಪಡೆದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ.ಉಪಾಧ್ಯಕ್ಷರಾಗಿ ಜಿ.ಕೆ.ಬಸವರಾಜ್ ಗೋಪನಾಳು, ಕಾರ್ಯದರ್ಶಿಯಾಗಿ ಎಸ್.ಬಸವರಾಜ್, ಸಹ ಕಾರ್ಯದರ್ಶಿಯಾಗಿ ಎ.ಎಸ್.ಮಂಜುನಾಥ್ ಆಯ್ಕೆ ಆಗಿದ್ದಾರೆ.ಇನ್ನುಳಿದಂತೆ ಕಾರ್ಯಕಾರಿ ಸಮಿತಿಗೆ ಸದಸ್ಯರಾಗಿ ಬಿ.ಅಜ್ಜಯ್ಯ, ಆರ್.ಭಾಗ್ಯಲಕ್ಷಿö್ಮÃ, ಎಂ.ಚೌಡಪ್ಪ, ಟಿ.ಹೆಚ್.ಮಧುಸೂಧನ್, ಎಲ್.ನಾಗರಾಜ್, ಕೆ.ಎಂ.ನೀಲಕAಠಯ್ಯ, ಎಂ.ರಾಘವೇAದ್ರ, ಬಿ.ಜೆ.ಸಂತೋಷ್‌ಕುಮಾರ್, ವಾಗೀಶ್ ಕಟಗಿಹಳ್ಳಿ ಮಠ ಅವರು ಆಯ್ಕೆ ಆಗಿದ್ದಾರೆಂದು ಚುನಾವಣಾಧಿಕಾರಿ ಎಲ್.ದಯಾನಂದ್ ತಿಳಿಸಿದ್ಧಾರೆ.