ಜಿಲ್ಲಾ ವಕೀಲರ ಸಂಘಕ್ಕೆ ಪಾಟೀಲ ಅಧ್ಯಕ್ಷ

ಬೀದರ್: ಮೇ.2:ಜಿಲ್ಲಾ ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಮಹೇಶಕುಮಾರ ಶಿವಕುಮಾರ ಪಾಟೀಲ ಆಯ್ಕೆಯಾಗಿದ್ದಾರೆ.

2023-24ನೇ ಸಾಲಿಗೆ ನಗರದ ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅವರು ಆಯ್ಕೆಯಾದರು.

ಪದಾಧಿಕಾರಿಗಳು: ಹೇಮಾ ಸಂಜುಕುಮಾರ ಬಿರಾದಾರ (ಉಪಾಧ್ಯಕ್ಷೆ), ಪರಮೇಶ್ವರ ಮಾದಪ್ಪ ಬಂಬಳಗಿ (ಪ್ರಧಾನ ಕಾರ್ಯದರ್ಶಿ), ರವಿಕಾಂತ ವಿಶ್ವನಾಥ ಪಾಟೀಲ (ಜಂಟಿ ಕಾರ್ಯದರ್ಶಿ) ಹಾಗೂ ಕೋಮಲ್ ಸಂಜಯ್ ಪಾಟೀಲ (ಖಜಾಂಚಿ).

ಚುನಾವಣಾಧಿಕಾರಿಯಾಗಿದ್ದ ಗುರುರಾಜ ಚಿಮಕೋಡೆ ಅವರು ಆಯ್ಕೆಯನ್ನು ಅಧಿಕೃತವಾಗಿ ಪ್ರಕಟಿಸಿದರು. ನೂತನ ಪದಾಧಿಕಾರಿಗಳಿಗೆ ವಕೀಲರು ಹೂಮಾಲೆ ಹಾಕಿ, ಶಾಲು ಹೊದಿಸಿ, ಸಿಹಿ ತಿನ್ನಿಸಿ ಅಭಿನಂದಿಸಿದರು.