ಜಿಲ್ಲಾ ರಾಹುಲ್‌ಗಾಂಧಿ ವಿಚಾರ ಮಂಚ್‌ನ ವಾರ್ಷಿಕೋತ್ಸವ

ಕೋಲಾರ,ಜು.೨೬- ನಗರದ ಹೊರವಲಯದಲ್ಲಿರುವ ಕೋಡಿಕಣ್ಣೂರು ಗ್ರಾಮದಲ್ಲಿ ಕೋಲಾರ ಜಿಲ್ಲಾ ರಾಹುಲ್ ಗಾಂಧಿ ವಿಚಾರ ಮಂಚ್‌ನ ೫ನೇ ವಾರ್ಷಿಕೋತ್ಸವ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಇದೇ ಸಂದರ್ಭದಲ್ಲಿ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ತೆರಳಿ ಮಕ್ಕಳಿಗೆ ಸಿಹಿ ಹಂಚಲಾಯಿತು.
ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯ ಅಂಬರೀಶ್, ಸೈಯದ್ ಶಫೀವುಲ್ಲಾ, ಒಬ್ಸಡ್ ವೈಸ್ ಛೇರ್‍ಮನ್ ಜಿನ್ನು, ಮೈನಾರಟಿ ಜಿಲ್ಲಾ ಕಾರ್ಯದರ್ಶಿ ಬಾಬು, ಜಿಲ್ಲಾ ಖಜಾನೆ ನಿವೃತ್ತ ಅಧಿಕಾರಿ ಮುನಿವೆಂಕಟಪ್ಪ ವಿ, ಶ್ರೀ ಲಲಿತ ನಾಗೇಶ್ವರಿ ದೇವಾಲಯ ಅಧ್ಯಕ್ಷ ನಾತಾಯಣಸ್ವಾಮಿ, ಎಡ್ವಿನ್ ಆರ್ಟ್ಸ್ ಎಡ್ವಿನ್, ಕೋಲಾರ ಜಿಲ್ಲಾ ರಾಹುಲ್ ಗಾಂಧಿ ವಿಚಾರ ಮಂಚ್ ಜಿಲ್ಲಾಧ್ಯಕ್ಷ ಜಾವೀದ್‌ಭಾಷ, ಕಾರ್ಯಾಧ್ಯಕ್ಷ ಫಿರದೋಸ್‌ಪಾಷ, ಜಿಲ್ಲಾ ಉಪಾಧ್ಯಕ್ಷ ಎಡ್ವಿನ್ ಸ್ಯಾಮಸನ್, ಜಿಲ್ಲಾ ಕಾರ್ಯದರ್ಶಿ ಅನಿಲ್‌ಕುಮಾರ್ ಎಂ, ಜಿಲ್ಲಾ ಸಲಹೆಗಾರ ಲೋಕೇಶ್, ನಗರ ಅಧ್ಯಕ್ಷ ಕಾರ್ತಿಕ್ ಎನ್, ನಗರ ಕಾರ್ಯಾಧ್ಯಕ್ಷ ಶಬರೀಶ್ ಯಾದವ್ ಉಪಸ್ಥಿತರಿದ್ದರು.