ದಾವಣಗೆರೆ.ಜೂ.೧೫: ದಾವಣಗೆರೆ ಜಿಲ್ಲಾ ಯೋಗ ಒಕ್ಕೂಟದಿಂದ ೯ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ ಜೂನ್ ೧೮ ರಿಂದ ೨೦ ವರೆಗೆ ಯೋಗ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ವಾಸುದೇವ್ ರಾಯ್ಕರ್ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಶಿವಯೋಗಿ ಮಂದಿರ ಸಭಾಂಗಣದಲ್ಲಿ ಮೂರು ದಿನಗಳ ಕಾಲ ಬೆಳಿಗ್ಗೆ ೫-೩೦ ರಿಂದ. ೭ ಗಂಟೆಯವರೆಗೆ ಶಿಬಿರ ನಡೆಯಲಿದ್ದು, ವೈದ್ಯಶ್ರೀ ಚೆನ್ನಬಸವಣ್ಣ ಅವರು ಶಿಬಿರವನ್ನು ನಡೆಸಿಕೊಳ್ಳಲಿದ್ದಾರೆ ಎಂದರು.ಒಕ್ಕೂಟ ಹಾಗೂ ಲಯನ್ಸ್ ಕ್ಲಬ್ ಸಹಯೋಗದಲ್ಲಿ. ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಯನ್ನು ಜೂನ್ ೧೮ ರಂದು ಬೆಳಿಗ್ಗೆ ೧೦ ಗಂಟೆಗೆ ಬೆಳಿಗ್ಗೆ ೯ ಗಂಟೆಗೆ ದೇವರಾಜ್ ಅರಸ್ ಬಡಾವಣೆಯ ಲಯನ್ಸ್ ಕ್ಲಬ್ ನಲ್ಲಿ ನಡೆಯಲಿದೆ.೧೦ ರಿಂದ ೫೧ ವರ್ಷ ವಯೋಮಿತಿಯೊಳಗೆ ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ ಎಂದರು.ಸ್ಪರ್ಧೆಯಲ್ಲಿ ಬಿಕೆಎಸ್ ಅಯ್ಯಂಗಾರ್ ಯೋಗ ದೀಪಿಕಾ ಪುಸ್ತಕದಲ್ಲಿರುವಂತೆ ಪಶ್ಚಿಮೋತ್ತಾಸನ, ಗುರುಡಾಸನ, ಪರಿವೃತ್ತ ತ್ರಿಕೋನಾಸನ, ವೃಕ್ಷಾಸನ, ಮರಿಭಾಸನ, ಪೂರ್ವೋತ್ತಾಸನ, ಆಕರ್ಷಣೆ ಧನುರಾಸನ, ಊರ್ಧ್ವ ಧನುರಾಸನದಲ್ಲಿ ಕಡ್ಡಾಯವಾಗಿ ೨ ಆಸನಗಳನ್ನು ಮತ್ತು ಒಂದು ಐಚ್ಛಿಕ ಆಸನವನ್ನು ಪ್ರದರ್ಶಿಸಬೇಕಿದೆ ಎಂದರು.ಸುದ್ದಿಗೋಷ್ಠಿಯಲ್ಲಿ, ರಾಜು ಎಲ್. ಬುದ್ಧಿ, ಬಾದಾಮಿ ಜಯಣ್ಣ, ನಿರಂಜನ್, ಡಾ. ಎನ್. ಪರಶುರಾಮ, ಡಾ. ಕೆ. ಜೈಮುನಿ, ಮಹಾದೇವಪ್ಪ, ಮಹಾಂತೇಶ್ ಉಪಸ್ಥಿತರಿದ್ದರು.