ಜಿಲ್ಲಾ ಮಾನವ ಹಕ್ಕುಗಳ ಸಂಘಟನೆನಿರ್ಗತಿಕರಿಗೆ ಆಹಾರ, ಹಣ್ಣು, ನೀರು ವಿತರಣೆ

ರಾಯಚೂರು,ಡಿ.೧೦:ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ ಜಿಲ್ಲಾ ಮಾನವ ಹಕ್ಕುಗಳ ಸಂಘಟನೆ ವತಿಯಿಂದ ನಗರದ ವಿವಿಧ ಪ್ರದೇಶಗಳಲ್ಲಿ ನಿರ್ಗತಿಕರು, ಬಡವರಿಗೆ ಆಹಾರ ಪೊಟ್ಟಣ, ಹಣ್ಣುಗಳು, ಬಿಸ್ಕೆಟ್ ಪ್ಯಾಕೆಟ್‌ಗಳು, ಕುಡಿಯುವ ನೀರಿನ ಬಾಟಲ್‌ಗಳನ್ನು ಹಂಚಲಾಯಿತು.
ಜಿಲ್ಲಾ ಮಾನವ ಹಕ್ಕುಗಳ ಸಂಘಟನೆ ಅಧ್ಯಕ್ಷ ಚಂದ್ರಕಾಂತ್ ವಕೀಲರ ನೇತೃತ್ವದಲ್ಲಿ ನಗರದ ವಿವಿಧ ಪ್ರದೇಶಗಳಲ್ಲಿ ಈ ಕಾರ್ಯಕ್ರಮವನ್ನು ಇಂದು ಹಮ್ಮಿಕೊಳ್ಳಲಾಗಿತ್ತು. ಪ್ರಮುಖವಾಗಿ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಹಾಗೂ ನಗರದ ಇನ್ನಿತರ ಪ್ರದೇಶಗಳಲ್ಲಿ ರಸ್ತೆ ಬದಿಗಳಲ್ಲಿ ಆಶ್ರಯ ಪಡೆದಿರುವ ನಿರ್ಗತಿಕರಿಗೆ ಆಹಾರ ಪೊಟ್ಟಣ, ಹಣ್ಣುಗಳು, ಬಿಸ್ಕೆಟ್ ಪ್ಯಾಕೆಟ್‌ಗಳು, ಕುಡಿಯುವ ನೀರಿನ ಬಾಟಲ್‌ಗಳನ್ನು ಹಂಚುವ ಮೂಲಕ ನಿರ್ಗತಿಕರ ಸಹಾಯಕ್ಕೆ ಮುಂದಾಗುವಂತೆ ಪರೋಕ್ಷವಾಗಿ ಸಂಘಟನೆ ವತಿಯಿಂದ ಕರೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ಚಂದ್ರಶೇಖರ ವಕೀಲ ಎಲ್ಲ ಮಾನವರು ಜನ್ಮತಃ ಸಮಾನರು ಮತ್ತು ಸ್ವತಂತ್ರರಾಗಿ ಜನಿಸಿರುತ್ತಾರೆ. ಜನಿಸಿದ ಪ್ರತಿ ವ್ಯಕ್ತಿಗೂ ಬದುಕು ಕಟ್ಟಿಕೊಳ್ಳುವ ಹಕ್ಕಿದೆ.ಇತರ ಹಕ್ಕುಗಳಿಗೆ ಚ್ಯುತಿ ತರಬಾರದು. ತನ್ನ ಬೆಳವಣಿಗಡಯೊಂದಿಗೆ ಅರಿವು, ವಿವೇಚನೆ ಮುಂತಾದ ಗುಣಗಳನ್ನು ಅಳವಡಿಸಿಕೊಂಡು ಸಹೋದರತ್ವದ ಮೂಲಕ ಸಹಜೀವನ ನಡೆಸಬೇಕಾದುದು ಮನುಷ್ಯನ ಸ್ವಾಭಾವಿಕ ಗುಣವಾಗಿ ಮಾರ್ಪಾಡಾಗಬೇಕು. ತಾನೂ ಬದುಕಬೇಕು, ಇತರರನ್ನು ಬದುಕಲು ಅವಕಾಶ ಮಾಡಿಕೊಡಬೇಕು ಅಂದಾಗ ಮಾತ್ರ ಮಾನವೀಯತೆಗೆ ನಿಜವಾದ ಅರ್ಥ ಕಲ್ಪಿಸಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘಟನೆಯ ಪದಾಧಿಖಾರಿಗಳಾದ ರಮೇಶ್, ವೀರೇಶ್ ಬ್ಯಾಗವಾಟ ಸ್ವಾಮಿ, ಶಿವಕುಮಾರ್ ವಕೀಲ, ನಾಗರಾಸ್ ಸ್ವಾಮಿ, ನವೀನ್‌ಕುಮಾರ್, ರವೀಮದ್ರಗಂಗಾವತ್,ಗೋಪಾಲ್, ಪೃಥ್ವಿರಾಜ್‌ಸಿಂಗ್, ಆಕಾಶ್, ಸುಮ್ರಿತ್‌ಸಿಂಗ್ ಇದ್ದರು.