ಜಿಲ್ಲಾ ಮಾಧ್ಯಮ ಪರಿಶೀಲನಾ ಕೋಶ ರಚನೆ

ವಿಜಯಪುರ:ಎ.12: ಸಾರ್ವತ್ರಿಕ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲಾ ಮಾಧ್ಯಮ ಪರಿಶೀಲನಾ ಕೋಶವನ್ನು ರಚಿಸಿ ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಆದೇಶಿಸಿದ್ದಾರೆ.
ಜಿಲ್ಲಾ ನೋಡಲ್ ಅಧಿಕಾರಿಗಳಾಗಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ರಾಮನಗೌಡ ಕನ್ನೊಳ್ಳಿ (ಮೊ:9740379500), ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ (9880248139), ಮಹಿಳಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಪ್ರೊ.ಪಿ.ಜಿ.ತಡಸದ (9448180973), ಪ್ರೊ ಶ್ರೀಮತಿ ವಿಜಯ ಕೋರಿಶೆಟ್ಟಿ (8496059098), ಪ್ರೊ.ಅಜೀಜ್ ಮಕಾನದಾರ (9845051097), ಮಹಿಳಾ ವಿಶ್ವವಿದ್ಯಾಲಯದ ಪ್ರೊ: ಸಂದೀಪ (ಮೊ:9844681398) ಇವರು ಸದಸ್ಯರಾಗಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವಾರ್ತಾಧಿಕಾರಿಗಳಾದ ಅಮರೇಶ ದೊಡಮನಿ (ಮೊ:9560872758) ಅವರು ಸದಸ್ಯ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.