
ಶಹಾಪೂರ:ಅ.8: ಪಟ್ಟಣದ ಸರಕಾರಿ ನೌಕರರ ಭವನದಲ್ಲಿ ಜಿಲ್ಲಾ ಮಟ್ಟದ ತರಬೇತಿ ಕಾರ್ಯಗಾರವನ್ನು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ ಬೆಂಗಳೂರು ಯಾದಗಿರಿ ಜಿಲ್ಲಾ ಸಹಕಾರ ಯುನಿಯನ್ ಒಕ್ಕೂಟ ನಿ ಯಾದಗಿರಿ ಜಿಲ್ಲಾ ಸಹಕಾರ ಇಲಾಖೆ ಇವುರಗಳ ಸಂಯುಕ್ತ ಆಶ್ರಯದಲ್ಲಿ ನಡೆದಿರುವ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಅಧ್ಯಕ್ಷರರಾದ ಗುರುನಾಥರಡ್ಡಿ ಪಾಟೀಲ್ ಹಳಿಸಗರ ಜ್ಯೋತಿ ಬೆಳಗಿಸುವ ಮುಖಾಂತರ ಚಾಲನೆ ನೀಡಿದರು.
ಜಿಲ್ಲಾ ಮಟ್ಟದ ಕಾರ್ಯಾಗಾರ ತರಬೇತಿ ಕಾರ್ಯಕ್ರಮವನ್ನು ಜಿಲ್ಲಾ ಮಟ್ಟದ ಎಲ್ಲಾ ಸಹಕಾರಿ ಸಂಘಗಳು ಮತ್ತು ಬ್ಯಾಂಕ್ ನ ಎಲ್ಲಾ ಲೆಕ್ಕಪರಿಶೋಧನೆ ಬಗ್ಗೆ ಹಾಗೂ ಸಹಕಾರ ಬ್ಯಾಂಕುಗಳ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬೆಳವಣಿಗೆಗೆ ತರಬೇತಿ ನೀಡಲು ಇನ್ನೂ ಜಿಲ್ಲಾ ಮತ್ತು ತಾಲ್ಲೂಕಿನದ್ಯಂತ ಯಶಸ್ವಿಯಾಗಲಿ ಎಂದು ಕರೆ ನೀಡಿದರು ಜಿಲ್ಲಾ ಸಹಕಾರಿ ಯುನಿಯನ್ ಒಕ್ಕೂಟದ ಅಧ್ಯಕ್ಷರಾದ ವಿಶ್ವನಾಥರಡ್ಡಿ ದರ್ಶನಾಪೂರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಹಕಾರ ಪಿತಾಮಹ ಸಿದ್ದಣ್ಣಗೌಡ ಪಾಟೀಲ್ ವರ ಬಾವಚಿತ್ರಕ್ಕೆ ಪುಷ್ಪಚರಣೆ ಮಾಡಿ ಮಾತಾನಾಡಿದ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಹಕಾರ ಸಂಘಗಳಿಗೆ ಅಭಿವೃದ್ಧಿಗೆ ನಾವೆಲ್ಲರೂ ಒಕ್ಕೂಟದ ಮುಖಾಂತರ ಸಲಹೆ ನೀಡೋಣಾ ಮತ್ತು ಸಹಕಾರಿ ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳಿಗೆ ಪ್ರತಿ ತಿಂಗಳಗೊಮ್ಮೆ ತರಬೇತಿ ಇರುತ್ತದೆ ಈ ತರಬೇತಿಯಲ್ಲಿ ಅನುಭವ ಪಡೆದು ಬ್ಯಾಂಕ್ ಅಭಿವೃದ್ಧಿ ಮಾಡಲು ಸಾಧ್ಯ ಎಂದು ಸಲಹೆ ನೀಡಿದರು ಜಿಲ್ಲಾ ಸಹಕಾರಿ ಯುನಿಯನ್ ಒಕ್ಕೂಟದ ಉಪಾಧ್ಯಕ್ಷರಾದ ಎಂ ನಾರಾಯಣ ವಿಶೇಷ ಅಹ್ವಾನಿತರಾಗಿ ಆಗಮಿಸಿ ಮಾತಾನಾಡಿದ ಸಂದರ್ಭ
ಸಹಕಾರ ಸಂಘಗಳಿಂದ ಗ್ರಾಮೀಣ ಮಟ್ಟದ ವ್ಯಾಪಾರ ವಹಿವಾಟು ಹೆಚ್ಚು ಹೆಚ್ಚಾಗಿ ಅಭಿವೃದ್ಧಿಯಾಗಲಿ ಎಂದು ಜಿಲ್ಲಾ ಮಟ್ಟದ ಸಹಕಾರಿ ಸಂಘದ ಅಧ್ಯಕ್ಷರಗೆ ಸಲಹೆ ನೀಡಿದರು ಮತ್ತು ಮುಖ್ಯ ಅಥಿತಿಗಳಾಗಿ ಆಗಮಿಸಿದ ಜಿಲ್ಲಾ ಸಹಕಾರಿ ಯುನಿಯನ್ ಒಕ್ಕೂಟದ ನಿರ್ದೇಶಕರಾದ ವೈಜನಾಥ ಪಾಟೀಲ್ ತುಮಕೂರು ಯಾದಗಿರಿ ಜಿಲ್ಲಾ ಮಟ್ಟದ ಸಹಕಾರಿ ತರಬೇತಿ ಮಾಡುವದು ನಮ್ಮೆಲ್ಲರ ಶ್ಲಾಘನಿಯ ಎಂದು ತಿಳಿಸಿದರು ಜಿಲ್ಲಾ ನಿರ್ದೇಶಕರಗಳಾದ ಅಂಬ್ರಣ್ಣಗೌಡ ಗಡ್ಡೆಸೂಗೂರ ಕೆಂಚಪ್ಪ ನಗನೂರು ಪಿಎಲ್ ಡಿ ಬ್ಯಾಂಕಿನ ಮಾಜಿ ಅಧ್ಯಕ್ಷರಾದ ಶಾಂತಗೌಡ ಸಾದ್ಯಪೂರ ಇದೇ ಸಂದರ್ಭದಲ್ಲಿ ತರಬೇತಿ ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಯಾದ ಎಮ್ ಬಿ ಬಾಳಿಗೀರಿ ಸಹಕಾರಿ ಸಂಘಗಳು ಬಗ್ಗೆ ಹಲವಾರು ರೀತಿಯ ಅಧ್ಯಕ್ಷರಗಳಿಗೆ ಮತ್ತು ಕಾರ್ಯದರ್ಶಿಗಳಿಗೆ ಮೂರು ತಾಸ ತರಬೇತಿ ನೀಡಿದರು ಲೆಕ್ಕಪರಿಶೋಧಕರ ಸಂಪನ್ಮೂಲಗಳ ವ್ಯಕ್ತಿಯಾದ ಸೇಡಂ ಗೋವಿಂದಪ್ಪ ಅವರು ಸಹಕಾರಿ ಸಂಘಗಳು ಲೆಕ್ಕದ ಬಗ್ಗೆ ತರಬೇತಿ ನೀಡಿದರು ಜಿಲ್ಲಾ ಸಹಕಾರಿ ಯುನಿಯನ್ ಒಕ್ಕೂಟದ ಮುಖ್ಯಕಾರ್ಯನಿವಾರ್ಹಕಾಧಿಕಾರಿಯಾದ ಕಾಶಿಬಾಯಿ ಪಾರಗೊಂಡ
ಜಿಲ್ಲಾ ಸಹಕಾರಿ ಶಿಕ್ಷಕಿಯಾದ ಸುಜಾತ ಮಠ ಮಲ್ಲಯ್ಯ ಸ್ವಾಮಿ ಜಿಲ್ಲಾ ಸಹಕಾರಿ ಯುನಿಯನ್ ಒಕ್ಕೂಟದ ಸಿಬ್ಬಂದಿ ಗಳು ಮತ್ತು ಇತರರು ಇದ್ದರು ತಿಪ್ಪಣ್ಣ ಖ್ಯಾತನಾಳ ನಿರೂಪಣೆ ಮಾಡಿದರು ಕಾಶಿಬಾಯಿ ಮಲಗೊಂಡ ವಂದಿಸಿದರು