ಜಿಲ್ಲಾ ಮಟ್ಟದ ವಿವಿಧ ಸಾಂಸ್ಕøತಿಕ ಸ್ಪರ್ಧೆಗಳು

ವಾಡಿ:ಏ.20: ಪಟ್ಟಣ ಸಮೀಪದ ರಾವೂರ ಗ್ರಾಮದಲ್ಲಿ ವಿಶ್ವಗುರು ಬಸವೇಶ್ವರ 890 ನೇ ಜಯಂತಿ ಅಂಗವಾಗಿ ಬಸವೇಶ್ವರ ಜಯಂತೋತ್ಸವ ಸಮಿತಿ ರಾವೂರ ವತಿಯಿಂದ ಜಿಲ್ಲಾ ಮಟ್ಟದ ವಿವಿಧ ಸಾಂಸ್ಕøತಿಕ ಸ್ಫರ್ದೆಗಳನ್ನು ಗ್ರಾಮದ ಶ್ರೀ ಸಿದ್ಧಲಿಂಗೇಶ್ವರ ವಿಧ್ಯಾಭಿವೃದ್ಧಿ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶಿಕ್ಷಕ ಸಿದ್ಧಲಿಂಗ ಬಾಳಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಿಲ್ಲೆಯ ಪ್ರಾಥಮಿಕ ಮತ್ತು ಪ್ರೌಢ ವಿಭಾಗದ ವಿಧ್ಯಾರ್ಥಿಗಳಿಗಾಗಿ ಏಪ್ರೀಲ್ 21 ರಂದು ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಮಟ್ಟದ ವಿವಿಧ ಸಾಂಸ್ಕøತಿಕ ಸ್ಪರ್ಧೆಗಳಾದ ಭಾಷಣ, ಚಿತ್ರಕಲೆ, ವಚನ ಕಂಠಪಾಠ ಮತ್ತು ರಂಗೋಲಿ ಸ್ಪರ್ದೆಗಳನ್ನು ಹಮ್ಮಿಕೊಳ್ಳಲಾಗಿದೆ. ವಿಜೇತರಿಗೆ ದಿನಾಂಕ 23 ರಂದು ರವಿವಾರ ಸಂಜೆ 7 ಗಂಟೆಗೆ ನಡೆಯುವ ಬಸವ ಜಯಂತಿಯ ವೇದಿಕೆ ಕಾರ್ಯಕ್ರಮದಲ್ಲಿ ಆಕರ್ಷಕ ಬಹುಮಾನಗಳನ್ನು ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಶಿಕ್ಷಕ ಈರಣ್ಣ ಹಳ್ಳಿ 8123724850, ಬಸವರಾಜ ಬಳವಾಟ 9620460256 ಅವರನ್ನು ಸಂಪರ್ಕಿಸಿ ಹೆಸರು ನೊಂದಾಯಿಸಲು ತಿಳಿಸಿದ್ದಾರೆ.