ಜಿಲ್ಲಾ ಮಟ್ಟದ ಬಾಡಿ ಬಿಲ್ಡಿಂಗ್ ಸ್ಪರ್ಧೆ

ಮೈಸೂರು:ಏ:07: 2ನೇ ವರ್ಷದ ಅಂತರ ಜಿಲ್ಲಾಮಟ್ಟದ ದೇಹದಾಡ್ರ್ಯ ಸ್ಪರ್ಧೆಯನ್ನು ಮೈಸೂರು ಜಿಲ್ಲೆಯ ಕಾಳಿಸಿದ್ದನ ಹುಂಡಿ ಗ್ರಾಮದ ಶ್ರೀ ಚಾಮುಂಡೇಶ್ವರಿ ಸಮಾಜ ಸೇವಾ ಸಂಘದ ವತಿ ಯಿಂದ ಕಾಳಿ ಹುಂಡಿ ಸರ್ಕಾರಿ ಶಾಲಾ ಆವರಣದಲ್ಲಿ ಅಂತರ ಜಿಲ್ಲಾ ಮಟ್ಟದ ಬಾಡಿ ಬಿಲ್ಡಿಂಗ್ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿತ್ತು.
ವಿವಿಧ ಜಿಲ್ಲೆಯ ಸುಮಾರು 60 ಜನ ಸ್ಪರ್ಧಾಳುಗಳು ಭಾಗವಹಿಸಿದ ಸ್ಪರ್ಧೆಯನ್ನು ಜ್ಯೋತಿ ಬೆಳಗುವ ಮೂಲಕ ರಮ್ಮನಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ನಾಗರಾಜು ಉದ್ಘಾಟಿಸಿದರು. ಮೈಸೂರಿನ ನವೀನ್ 2021 ನೇ ಸಾಲಿನ ಮಿಸ್ಟರ್ ಜೈ ಭಜರಂಗಿ ಪ್ರಶಸ್ತಿಯನ್ನು ಪಡೆದುಕೊಂಡರು.
ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಸಮಾಜ ಸೇವಕ ಡಾ. ಮಹೇಂದ್ರ ಸಿಂಗ್ ಕಾಳಪ್ಪ, ಎಸ್‍ಆರ್ ಮೀಡಿಯಾ ಮುಖ್ಯಸ್ಥರಾದ ರಾಜು ಕಾರ್ಯ, ವಿಕ್ರಂ, ಡಾ. ಪುಟ್ಟುಬುದ್ದಿ, ಡಾ. ಲಕ್ಷೀಕಾಂತ್, ಡಾ. ನವೀನ್ ಕುಮಾರ್ ಮತ್ತಿತ್ತ ಗಣ್ಯರು ವಿವಿಧ ವಿಭಾಗದಲ್ಲಿ ವಿಜೇತ ಸ್ಪರ್ಧಾಳುಗಳಿಗೆ ಪ್ರಶಸ್ತಿ ವಿತರಿಸಿದರು