ಜಿಲ್ಲಾ ಮಟ್ಟದ ಫುಟ್‍ಬಾಲ್ ಪಂದ್ಯದಲ್ಲಿ ಡಾನ್ ಬಾಸ್ಕೋ ಶಾಲೆಯ ತಂಡಕ್ಕೆ ಜಯ

ಕಲಬುರಗಿ,ಸೆ.9-ನಗರದ ಎನ್.ವಿ. ಮೈದಾನದಲ್ಲಿ ಜಿಲ್ಲಾ ಮಟ್ಟದ ಫುಟ್‍ಬಾಲ ಪಂದ್ಯವಳಿಯನ್ನು ಆಯೋಜಿಸಲಾಗಿತ್ತು. ಈ ಪಂದ್ಯವಳಿಯು ಡಾನ್ ಬಾಸ್ಕೋ ಹಿರಿಯ ಫ್ರಾಥಮಿಕ ಶಾಲೆ ಮಕ್ಕಳ ತಂಡ ಹಾಗೂ ಹುಸ್ಸೇನ್ ಪಬ್ಲಿಕ ಸ್ಕೂಲ್ ಮಕ್ಕಳ ತಂಡ ಇವರುಗಳ ಮಧ್ಯೆ ನಡೆಯಿತ್ತು. ಈ ಒಂದು ಪಂದ್ಯದಲ್ಲಿ ಡಾನ್ ಬಾಸ್ಕೋ ಹಿರಿಯ ಫ್ರಾಥಮಿಕ ಶಾಲೆ ಮಕ್ಕಳ ತಂಡ ಮೂರು ಗೋಲ್‍ಗಳನ್ನು ಹೊಡೆಯುವ ಮೂಲಕ ಎದುರಳಿ ತಂಡದವರಿಗೆ ಯಾವುದೇ ಗೋಲ್ ಮಾಡುವುದಕ್ಕೆ ಅವಕಾಶವನ್ನು ನೀಡದೇ ಮೂರು ಗೋಲ್‍ನಿಂದ ಜಯಗಳಿಸಿವ ಮೂಲಕ ವಿಭಾಗ ಮಟ್ಟಕ್ಕೆ ಆಯಕ್ಕೆಯಾಗಿದ್ದಾರೆ.
ಡಾನ್ ಬಾಸ್ಕೋ ಹಿರಿಯ ಪ್ರಾಥಮಿಕ ಶಾಲೆಯ ಮಖ್ಯಗುರುಗಳಾದ ಫಾದರ ಟಾಮ್ ಚಿರಕಲ್, ಶಾಲಾ ಶಿಕ್ಷಕವೃಂದದವರು ಹಾಗೂ ಪಾಲಕರು, ಪೋಷಕರು ಈ ಮಕ್ಕಳಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.