ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಗೆ ಆಯ್ಕೆ

ವಿಜಯಪುರ:ಡಿ.22:ದರಬಾರ ಸಮೂಹ ಶಿಕ್ಷಣ ಸಂಸ್ಥೆಯ ವಿದ್ಯಾವರ್ಧಕ ಸಂಘದ ಕನ್ನಡ ಪ್ರಾಥಮಿಕ ಶಾಲೆಯ 7 ನೇ ವರ್ಗದ ವಿದ್ಯಾರ್ಥಿ ರಘೋತ್ತಮ ಚಿಕ್ಕೆರೂರ ಇತ್ತೀಚೆಗೆ ಅಟಲ್ ಬಿಹಾರಿ ವಾಜಪೇಯಿ ಶಾಲೆಯಲ್ಲಿ ನಡೆದ ಪ್ರತಿಭಾ ಕಾರಂಜಿಯಲ್ಲಿ ಲಘು ಸಂಗೀತದ ವಿಭಾಗದಲ್ಲಿ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಗೆ, ಆಯ್ಕೆ ಆಗಿದ್ದಾರೆ. ಸಂಸ್ಥೆಯ ಅಧ್ಯಕ್ಷ ರಾಜೇಶ್ ದರಬಾರ, ಗೌರವ ಕಾರ್ಯದರ್ಶಿ ಪ್ರಕಾಶ ಉಡುಪಿಕರ, ಆಡಳಿತ ಮಂಡಳಿಯ ಸದಸ್ಯರು, ಸಮನ್ವಯ ಅಧಿಕಾರಿ ಡಾ ವಿ.ಬಿ. ಗ್ರಾಮಪುರೋಹಿತ, ಮುಖ್ಯೋಪಾಧ್ಯಯ ರಮೇಶ ಕೋಟ್ಯಾಳ ಅಭಿನಂದಿಸಿದ್ದಾರೆ.