ಜಿಲ್ಲಾ ಮಟ್ಟದ ಪತ್ರಕರ್ತರ ವಾರ್ಷಿಕ ಕ್ರೀಡಾಕೂಟ ಆಯೋಜನೆ: ಸಂಕೀನ

ಶಹಾಪುರ :ಜೂ.30: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಜಿಲ್ಲಾ ಮಟ್ಟದ ಪತ್ರಕರ್ತರ ವಾರ್ಷಿಕ ಕ್ರೀಡಾಕೂಟ ಜು. 15 ರಂದು ಆಯೋಜಿಸಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ತಿಳಿಸಿದರು.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಪತ್ರಕರ್ತರು ಮತ್ತು ಅವರ ಕುಟುಂಬಸ್ಥರು ಕ್ರೀಡಾಕೂಟದಲ್ಲಿ ಭಾಗವಹಿಸಬಹುದು. ಕಡ್ಡಾಯವಾಗಿ ಜು. 8 ರೊಳಗೆ ತಾವು ಮತ್ತು ತಮ್ಮ ಕುಟುಂಬದ ಮಹಿಳೆಯರು ಭಾಗವಹಿಸುವ ಕ್ರೀಡಾಕೂಟದ ಹೆಸರನ್ನು ನೋಂದಣಿ ಮಾಡಬೇಕು. ನೋಂದಣಿ ಸಂಚಾಲಕರನ್ನಾಗಿ ವಿಶಾಲ್ ದೋರನಹಳ್ಳಿ ಅವರನ್ನು ನೇಮಕ ಮಾಡಲಾಗಿದೆ. ಅವರ ಮೊ. 9900761799 ಗೆ ಕರೆ ಮಾಡಿ ಹೆಸರು ನೋಂದಾವಣೆ ಮಾಡಿಕೊಳ್ಳಬೇಕು

ಪುರುಷರ ವಿಭಾಗ ಕ್ರೀಡಾಕೂಟದಲ್ಲಿ ಕ್ರಿಕೆಟ್, ಕಬಡ್ಡಿ, 100 ಮೀಟರ್ ಓಟದ ಸ್ಪರ್ಧೆ, ಕೇರಂ, ಚೆಸ್, ಗುಂಡು ಎಸೆತ, ಹಗ್ಗಜಗ್ಗಾಟ, ಕುರ್ಚಿಯಾಟ ಮತ್ತು ಶೆಟಲ್ ವಿಭಾಗವಿದೆ. ಕ್ರಿಕೆಟ್‍ನಲ್ಲಿ ವಿನ್ನರ್ ತಂಡಕ್ಕೆ 5 ಸಾವಿರ ರೂ. ಬಹುಮಾನ ಮತ್ತು ಟ್ರೋಫಿ ನೀಡಲಾಗುವುದು. ಬಹುಮಾನದ ಹಣವನ್ನು ಪತ್ರಕರ್ತ ವಿಶಾಲ್ ದೋರನಹಳ್ಳಿ ಅವರು ಅವರ ತಂದೆ ದಿ. ಸಾಹು ಮುರಾರಿರಾವ್ ಶಿಂಧೆ ಸ್ಮರಣಾರ್ಥವಾಗಿ ಬಹುಮಾನವಾಗಿ ನೀಡುವರು. ಉಳಿದ ಕ್ರೀಡೆಯ ವಿಜೇತರಿಗೆ ಟ್ರೋಫಿ ನೀಡಲಾಗುವುದು ಎಂದರು.

ಮಹಿಳೆಯರ ವಿಭಾಗ ಕ್ರೀಡಾಕೂಟದಲ್ಲಿ ರಂಗೋಲಿ ಸ್ಪರ್ಧೆ, ಕುರ್ಚಿಯಾಟ, 100 ಮೀಟರ್ ಓಟ ಸ್ಪರ್ಧೆ, ಹಗ್ಗಜಗ್ಗಾಟ ಮತ್ತು ಗುಂಡು ಎಸೆತ ಸ್ಪರ್ಧೆಯಿದೆ. ರಂಗೋಲಿ ಸ್ಪರ್ಧೆ ಪ್ರಥಮ ಬಹುಮಾನ 5 ಸಾವಿರ ರೂ., ದ್ವಿತೀಯ ಬಹುಮಾನ 3 ಸಾವಿರ ರೂ., ತೃತೀಯ ಬಹುಮಾನ 2 ಸಾವಿರ ರೂ. ನಿಗದಿ ಮಾಡಲಾಗಿದೆ. ಬಹುಮಾನದ ಹಣವನ್ನು ಸಂಘದ ವತಿಯಿಂದ ನೀಡಲಾಗುವುದು. ಉಳಿದ ಕ್ರೀಡೆಯಲ್ಲಿ ವಿಜೇತರಿಗೆ ಟ್ರೋಫಿ ನೀಡಲಾಗುವುದು ಎಂದು ಹೇಳಿದರು.ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀ ಮಲ್ಲಪ್ಪ ಸಂಕೀನ ಹೇಳಿದರು.