ಜಿಲ್ಲಾ ಮಟ್ಟದ ಚೆಸ್, ಥ್ರೋಬಾಲ್ ಸ್ಪರ್ಧೆಗೆ ಬೆಸ್ಟ್ ಕಾಲೇಜಿನ ವಿದ್ಯಾರ್ಥಿಗಳು


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಆ.25: ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಆಯೋಜಿಸಿದ ವೀರಶೈವ ಕಾಲೇಜಿನಲ್ಲಿ ನಡೆದ ತಾಲೂಕು ಮಟ್ಟದ ಚೆಸ್‍ಸ್ಪರ್ಧೆಯಲ್ಲಿ ಬೆಸ್ಟ್ ಪಿ.ಯು. ಕಾಲೇಜಿನ ವಿದ್ಯಾರ್ಥಿಗಳು ಅಮೂಲ್ಯ , ಪವಿತ್ರ ಮತ್ತು ನಂದಿನಿ .ಪಿ ವಿಜೇತರಾಗಿ ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. ಮತ್ತು ಪ್ಯೂಪಿಲ್ ಟ್ರೀ ಕಾಲೇಜಿನಲ್ಲಿ ನಡೆದ ತಾಲೂಕು ಮಟ್ಟದ ಥ್ರೋಬಾಲ್ ಪಂದ್ಯದಲ್ಲಿ ಬೆಸ್ಟ್ ಕಾಲೇಜಿನ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ವಿಜೇತರಾಗಿ ಜಿಲ್ಲಾಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. ಆಯ್ಕೆಯಾದ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷರಾದ ಕೆ. ರಾಮಪ್ಪ,  ಉಪಾದ್ಯಕ್ಷರು ಕೆ. ತಿಲಕ್ ಕುಮಾರ್, ಕಾರ್ಯದರ್ಶಿ ಎಮ್. ಶ್ರೀನಿವಾಸುಲು  ಪ್ರಾಚಾರ್ಯರು  ಕೆ. ವೆಂಕಟೇಶ್ವರರಾವ್, ಉಪ ಪ್ರಾಚಾರ್ಯರು ಜಿ. ಶ್ರೀನಿವಾಸರೆಡ್ಡಿ , ದೈಹಿಕ ಶಿಕ್ಷಣ ಸಿಬ್ಬಂದಿಗಳಾದ ಶಿವಾನಂದ್, ತಿಪ್ಪೇರುದ್ರ, ಶ್ರೀಮತಿ ವೆಂಕಟಲಕ್ಷ್ಮಿ ಮತ್ತು ಎಲ್ಲಾ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.