ಜಿಲ್ಲಾ ಮಟ್ಟದ ಖೋಖೋ ಕ್ರೀಡಾ ಪಟುಗಳ ಆಯ್ಕೆ

ಮಸ್ಕಿ,ನ.೨೯- ಜಿಲ್ಲಾ ಮತ್ತು ತಾಲೂಕು ಅಮೆ ಚೂರ್ ಖೋಖೋ ಅಸೋಷಿಯೇಷನ್ ವತಿಯಿಂದ ಇಲ್ಲಿಯ ನರಸನಗೌಡ ಸ್ಮಾರಕ ಶಾಲೆ ಮೈದಾನ ಬಳಿ ಜಿಲ್ಲಾ ಮಟ್ಟದ ಖೋ ಖೋ ಕ್ರೀಡಾ ಪಟುಗಳ ಆಯ್ಕೆ ಪ್ರಕ್ರಿಯೆ ಭಾನುವಾರ ನಡೆಸಲಾಯಿತು.
೧೮೬ ಜನ ಯುವಕರು ೪೨ ಜನ ಯುವತಿಯರು ಭಾಗವಹಿಸಿದ್ದರು ೧೫ ಯುವಕ, ೧೫ ಜನ ಯುವತಿಯರಿಗೆ ಆಯ್ಕೆ ಮಾಡಲಾಯಿತು. ನಾಗರಾಜ ಪಂಪಣ್ಣ, ಮೌನೇಶ ಬಳಗಾನೂರು, ಭೀಮಣ್ಣ ರಾಯಚೂರು, ನಾಗರಾಜ ಸಿಂಧನೂರು ಸೇರಿದಂತೆ ಒಟ್ಟು ೧೫ ಜನ ಯುವಕರು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆ ಯಾದರು.
ಜಿಲ್ಲಾ ಅಮೆ ಚೂರ್‌ಅಸೋಷಿಯೇಷನ್ ಅಧ್ಯಕ್ಷ ಮಲ್ಲಿ ಕಾರ್ಜುನ ಇತ್ಲಿ, ತಾಲೂಕು ಅಧ್ಯಕ್ಷ ಮೌನೇಶ ನಾಯಕ, ಪ್ರತಾಪಗೌಡ ಪಾಟೀಲ್ ಫೌಂಢೇಶನ್ ಅಧ್ಯಕ್ಷ ಪ್ರಸನ್ನ ಪಾಟೀಲ್, ಮಹಾಂತೇಶ ಬ್ಯಾಳಿ, ಮಸೂದ್ ಪಾಶಾ, ಅಮರೇಶ ಬ್ಯಾಳಿ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ದೊಡ್ಡಯ್ಯ, ಆನಂದ್ ದೇಶ ಮುಖ, ನರಸನ ಗೌಡ ಶಾಲೆ ಮುಖ್ಯ ಶಿಕ್ಷಕಿ ವಿದ್ಯಾವತಿ ಇನ್ನಿತರ ಗಣ್ಯರು ಭಾಗ ವಹಿಸಿದ್ದರು. ಮಹಾಂ ತೇಶ ಮಸ್ಕಿ, ವಿರೇಶ ಹಿರೇ ಮ ಠ , ಮೋಹನ, ಶಿವಪ್ಪ ಹಸಮ ಕಲ್ ಸೇರಿ ದಂತೆ ಅನೇಕ ಶಾಲೆ ಗಳ ಶಿಕ್ಷಕರು ಇದ್ದರು.