ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ 25 ಬಹುಮಾನ

(ಸಂಜೆವಾಣಿ ವಾರ್ತೆ)
ಕಲಘಟಗಿ,ಅ17: ರವಿವಾರ ಹುಬ್ಬಳ್ಳಿಯಲ್ಲಿ ನಡೆದ ಅಸ್ಪ್ಯಾರ ಕರಾಟೆ ಅಕ್ಯಾಡೆಮಿ ಹಾಗೂ ಡೆಕಾತಲಾನ್ ಸ್ಪೋರ್ಟ್ಸ್ ವತಿಯಿಂದ ಜಿಲ್ಲಾಮಟ್ಟದ ಕರಾಟೆ ಚಾಂಪಿಯನ್ ಶಿಪ್ ಟೂರ್ನಮೆಂಟ್ ನಡೆಸಲಾಯಿತು.
ಟೂರ್ನಮೆಂಟ್ ನಲ್ಲಿ ಕಲಘಟಗಿ ಪಟ್ಟಣದ ಅನ್ನಪೂರ್ಣ ತರಬೇತಿ ಸಂಸ್ಥೆಯ 14 ಮಕ್ಕಳು ಭಾಗವಹಿಸಿ ಪ್ರಥಮ ದ್ವಿತೀಯ ಹಾಗೂ ತೃತೀಯ 25 ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದು ವಿಶೇಷವಾಗಿದೆ.
ಕಟಾ ಚಾಂಪಿಯನ್ ನಲ್ಲಿ ಅನ್ನಪೂರ್ಣ ಹರಮಣ್ಣವರ, ವೈಷ್ಣವಿ ಪೂಜಾರ ಪ್ರಥಮ ಬಹುಮಾನ. ನಯನ ಹರಮಣ್ಣವರ, ತೆಜಸ್ ಕುಲಕರ್ಣಿ, ಶ್ರೇಯಸ್ ಗುಂಡೆನಹಳ್ಳಿ ದ್ವಿತೀಯ ಬಹುಮಾನ. ವಿಜಯಲಕ್ಷ್ಮಿ ಹರಮಣ್ಣವರ, ನಿರ್ಮಯ ಗೌಡರ, ಸೂರ್ಯ ಚಿಕ್ಕಣ್ಣವರ,ವರ್ಷ ತಹಶೀಲ್ದಾರ್, ತೆಜಸ್ ಗುಂಡೆನಹಳ್ಳಿ, ನಿಜನ ಗೌಡರ ತೃತೀಯ ಬಹುಮಾನ ಪಡೆದುಕೊಂಡಿದ್ದಾರೆ.
ಅದೆ ರೀತಿ ಕುಮಿಟೆ (ಫೈಟ್) ನಲ್ಲಿ ನಯನ ಹರಮಣ್ಣವರ, ಸೂರ್ಯ ಚಿಕ್ಕಣ್ಣವರ, ತೆಜಸ್ ಗುಂಡೆನಹಳ್ಳಿ, ತೆಜಸ್ ಕುಲಕರ್ಣಿ ಪ್ರಥಮ ಬಹುಮಾನ. ವರ್ಷ ತಹಶೀಲ್ದಾರ್, ಸಿಂಚನಾ ರೆಡ್ಡೆರ, ಅನ್ನಪೂರ್ಣ ಹರಮಣ್ಣವರ, ನಿರ್ಮಯ ಗೌಡರ, ವಿಜಯಲಕ್ಷ್ಮೀ ಹರಮಣ್ಣವರ, ನಿಸರ್ಗ ಗೌಡರ ದ್ವಿತೀಯ ಬಹುಮಾನ.ನಿಜನ ಗೌಡರ, ರಿಷಿಕಾ ಏಳುಕೋಳ್ಳಿ, ಶ್ರೇಯಸ್ ಗುಂಡೆನಹಳ್ಳಿ, ವೈಷ್ಣವಿ ಪೂಜಾರ ತೃತೀಯ ಬಹುಮಾನ ಪಡೆದುಕೊಂಡಿದ್ದಾರೆ.