ಭಾಲ್ಕಿ,ಸೆ.27-ಇತ್ತೀಚೆಗೆ ಇಲ್ಲಿ ನಡೆದ ತಾಲ್ಲೂಕ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಬಸವಕಲ್ಯಾಣ ತಾಲ್ಲೂಕಿನ ಮೈಸಲಗಾ ತಾಂಡಾ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಶಿವಪ್ಪಾ ಪಾಟೀಲ ಅವರಿಗೆ 2023-24ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಪ್ರಶಸ್ತಿ ಪ್ರದಾನ ಮಾಡಿದರು. ಡಾ.ಬಸವಲಿಂಗ ಪಟ್ಟದೇವರು ಸಮಾರಂಭದ ಸಾನಿಧ್ಯವಹಿಸಿದ್ದರು. ಪೌರಾಡಳಿತ ಸಚಿವ ರಹಿಂಖಾನ್, ಡಿಡಿಪಿಐ ಸಲೀಂ ಪಾಶಾ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಹೆಚ್.ಹಳ್ಳದ್, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರವೀಂದ್ರರೆಡ್ಡಿ ಮಾಲಿಪಾಟೀಲ, ಸಂಘಟನಾ ಕಾರ್ಯದರ್ಶಿ ರಾಮತಿ ಕೋರಾಳೆ, ತಾಲ್ಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಂತೋಷಕುಮಾರ ಅಕ್ಕಣ್ಣ, ಕಾರ್ಯದರ್ಶಿ ಲಕ್ಷ್ಮಣ ಹೆಂಬಾಡೆ, ಸಂಘಟನಾ ಕಾರ್ಯದರ್ಶಿ ಶಿವಪುತ್ರ ಓಕಳಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.