ಜಿಲ್ಲಾ ಮಟ್ಟದ ಉತ್ತಮ ಪತ್ರಕರ್ತ ಪ್ರಶಸ್ತಿಗೆ ಅಬ್ದುಲ್ ಗಯಾಸ್ ಆಯ್ಕೆ

ಮಾನ್ವಿ.ಜು.೨೫- ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕ ಮತ್ತು ರಾಯಚೂರು ರಿಪೋಟರರ್ಸ ಗಿಲ್ಡ್ ರಾಯಚೂರು ವತಿಯಿಂದ ೨೦೨೨ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಪತ್ರಕರ್ತ ಪ್ರಶಸ್ತಿಗೆ ಪತ್ರಕರ್ತ ಸೈಯದ್ ಅಬ್ದುಲ್ ಗಯಾಸ್ ಆಯ್ಕೆಗೊಂಡಿದ್ದಾರೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕ ಮತ್ತು ರಾಯಚೂರು ರಿಪೋಟರರ್ಸ ಗಿಲ್ಡ್ ರಾಯಚೂರು ಸಂಯುಕ್ತಾಶ್ರಯದಲ್ಲಿ ಜು.೨೯ ರಂದು ಶುಕ್ರವಾರದಂದು ಮಸ್ಕಿ ಪಟ್ಟಣದ ಭ್ರಮರಾಂಭ ದೇವಸ್ಥಾನದಲ್ಲಿ ನಡೆಯುವ ಪತ್ರಿಕಾ ದಿನಾಚರಣೆ ಕಾರ್ಯಕ್ರಮದ ವಾರ್ಷಿಕ ಪ್ರಶಸ್ತಿ ಪ್ರದಾನ ಮತ್ತು ಮಸ್ಕಿ ನೂತನ ಪತ್ರಿಕಾ ಭವನ ಉದ್ಘಾಟನಾ ಸಮಾರಂಭದಲ್ಲಿ ಪತ್ರಕರ್ತ ಸೈಯದ್ ಅಬ್ದುಲ್ ಗಯಾಸ್‌ಗೆ ಜಿಲ್ಲಾ ಮಟ್ಟದ ಉತ್ತಮ ಪತ್ರಕರ್ತ ಪ್ರಶಸ್ತಿ ಪ್ರದಾನ ಹಾಗೂ ಸನ್ಮಾನಿಸಿ ಗೌರವಿಸಲಾಗುತ್ತದೆ.
ಕಳೆದ ೨೦ ವರ್ಷಗಳಿಂದ ಮಾನ್ವಿ ತಾಲೂಕಿನಲ್ಲಿ ಪತ್ರಿಕಾ ಛಾಯಾಗ್ರಾಹಕನಾಗಿ ಮತ್ತು ಪತ್ರಕರ್ತನಾಗಿ ಉತ್ತಮ ಸೇವೆ ಸಲ್ಲಿಸುತ್ತಿರುವ ಸೈಯದ್ ಅಬ್ದುಲ್ ಗಯಾಸ್‌ರವರ ಸಾಧನೆಯನ್ನು ಪರಿಗಣಿಸಿ ಈ ಸಾಲಿನ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆಕಾರ್ಯಕ್ರಮದಲ್ಲಿ ಉತ್ತಮ ವರದಿಗಾರ ಪ್ರಶಸ್ತಿಯನ್ನು ನೀಡುತ್ತಿರುವುದು ತುಂಬಾ ಹೆಮ್ಮೆಯ ಸಂಗತಿಯಾಗಿದೆ.
ಪತ್ರಿಕಾ ದಿನಾಚರಣೆ ಸಮಾರಂಭದ ಸಾನಿಧ್ಯವನ್ನು ಮಸ್ಕಿ ಗಚ್ಚಿನಮಠದ ಶ್ರೀವರರುದ್ರಮುನಿ ಶಿವಾಚಾರ್ಯಸ್ವಾಮಿ
ವಹಿಸಲಿದ್ದು ಉದ್ಘಾಟನೆ ಜಿಲ್ಲಾ ಉಸ್ತುವಾರಿ ಸಚಿವ ಶಂಕರಪಾಟೀಲ್ ಮುನೇನಕೊಪ್ಪ, ಆಶಯನುಡಿ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಅಧ್ಯಕ್ಷತೆ ಆರ್.ಗುರುನಾಥ ಜಿಲ್ಲಾಧ್ಯಕ್ಷ ಪತ್ರಕರ್ತರ ಸಂಘ, ಉಪನ್ಯಾಸ ಕೆ.ಎನ್.ಚನ್ನೇಗೌಡ ಸಂಪಾದಕರು, ಪ್ರಕಾಶ ಮಸ್ಕಿ ಅಧ್ಯಕ್ಷರು ಪತ್ರಕರ್ತರ ಸಂಘ ಮಸ್ಕಿ, ವಿರೇಶ ಸೌದ್ರಿ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ಸಂಸದರು, ಶಾಸಕರು, ಅಧಿಕಾರಿಗಳು, ರಾಜ್ಯ ಸಮಿತಿ, ಜಿಲ್ಲಾ ಸಮಿತಿ ಸದಸ್ಯರು, ಜಿಲ್ಲೆಯ ವಿವಿಧ ತಾಲೂಕಗಳ ಪತ್ರಕರ್ತರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಪತ್ರಕರ್ತರು ಭಾಗವಹಿಸಲಿದ್ದಾರೆ.