ಜಿಲ್ಲಾ ಮಟ್ಟಕ್ಕೆ ಸಂಸ್ಕøತಿ ಗ್ಲೋಬಲ್ ಆಂಗ್ಲಮಾಧ್ಯಮ ಶಾಲಾ ಮಕ್ಕಳು ಆಯ್ಕೆ

ಜೇವರ್ಗಿ: ಡಿ.24: ಕೆಲ್ಲೂರನ ಬೆನ9 ಪಬ್ಲೀಕ ಶಾಲೆಯಲ್ಲಿ ನಡೆದ ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಇಲ್ಲಿನ ಸೋನ್ನ ಗ್ರಾಮದ ಸಂಸ್ಕೃತಿ ಗ್ಲೋಬಲ್ ಶಾಲಾ ಮಕ್ಕಳು ಉತ್ತಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಚದ್ಮ ವೇಷದಲ್ಲಿ ಶಿವಾನಿ ತಾಲೂಕಿ ಮಟ್ಟದಲ್ಲಿ ಪ್ರಥಮವಾಗಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾದರು. ರಾಹುಲ್ ಕಥೆಹೇಳುವ ಸ್ಪರ್ಧೆಯಲ್ಲಿ ಪ್ರಥಮ, ಹಾಗೂ ಸ್ಪೂರ್ತಿ ಧಾರ್ಮಿಕ ಪಠಣ ಪ್ರಥಮವಾಗಿ ಜಿಲ್ಲಾ ಮಟ್ಟಕ್ಕೆ ಅಯ್ಕಯಾಗಿದ್ದು, ಸಮೃದ್ದಿ ಕಥೆ ಹೇಳು ಸ್ಪರ್ಧೆಯಲ್ಲಿ ತೃತೀಯ ಸ್ಥಾನವನ್ನು ಪಡೆದ್ದಿದ್ದಾರೆ.
ವಿದ್ಯಾರ್ಥಿಗಳ ಉತ್ತಮ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಸಕ್ರಪ್ಪಗೌಡ ಪಾಟೀಲ್ ಹಾಗೂ ಈರಣ್ಣ ಮಾಕಾ ಸಿಹಿತಿನ್ನಿಸಿ ಸಂತಸ ವ್ಯಕ್ತಪಡಿಸಿದ್ದಾರೆ.