ಜಿಲ್ಲಾ ಮಟ್ಟಕ್ಕೆ ಆಯ್ಕೆ

ಕಲಬುರಗಿ:ಆ.20: ನಗರದ ಎಂಪಿಹೆಚ್‍ಎಸ್ ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಯೋಗ ಮತ್ತು ಕುಸ್ತಿ ಆಟಗಳಲ್ಲಿ ವಿಜಯನಗರ ಕಾಲೋನಿಯಲ್ಲಿರುವ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆಯ ಮಕ್ಕಳು ಯೋಗ ಮತ್ತು ಕುಸ್ತಿಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಕುಸ್ತಿ, ಯೋಗ ಮತ್ತು ಜಿಗಿತದಲ್ಲಿ ಪ್ರಥಮ ಲಕ್ಷ್ಮಿಕಾಂತ್, ಕುಸ್ತಿಯಲ್ಲಿ ಪ್ರಥಮ ಅಭಿಷೇಕ್, ಕುಸ್ತಿಯಲ್ಲಿ ಪ್ರಥಮ ಪುನೀತ್, ವಿವಿಧ ಸ್ಪರ್ಧಿಗಳಲ್ಲಿ ರಣಧೀರ ಮತ್ತು ಲಲ್ಲಾ ಇವರು ಪ್ರಥಮ ಸ್ಥಾನ ಪಡೆದಿರುತ್ತಾರೆ.

ಈ ಪ್ರಯುಕ್ತ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಮತ್ತು ಮುಖ್ಯ ಗುರುಗಳು ಹಾಗೂ ಸರ್ವ ಶಿಕ್ಷಕರು ಮತ್ತು ಮಕ್ಕಳು ಈ ಸಾಧನೆಗೆ ಅಭಿನಂದಿಸಿದ್ದಾರೆ.