ಜಿಲ್ಲಾ ಮಟ್ಟಕ್ಕೆ ಆಯ್ಕೆ

(ಸಂಜೆವಾಣಿ ವಾರ್ತೆ)
ಬೈಲಹೊಂಗಲ,ಜ2: ಜೀವನದಲ್ಲಿ ಕೇವಲ ಶಿಕ್ಷಣದಿಂದ ಮಾತ್ರ ಬದುಕು ಕಟ್ಟಿಕೊಳ್ಳುವದು ಸಾಧ್ಯವಿಲ್ಲ. ಈಗಾಗಿ ಮಕ್ಕಳನ್ನು ಪ್ರತಿಭಾವಂತರನ್ನಾಗಿ ರೂಪಿಸುವದರ ಜೊತೆಗೆ ಶಿಕ್ಷಕರಲ್ಲಿ ಹುಮ್ಮಸ್ಸು ತುಂಬಲು ಬೊಂಬೆ ಆಟಿಕೆ ಆಧಾರಿತ ಪಾಠೋಪಕರಣಗಳ ಪ್ರದರ್ಶನ ಶಿಕ್ಷಣ ಕ್ಷೇತ್ರದಲ್ಲಿ ಅತ್ಯಗತ್ಯವಾಗಿದ್ದು ಪ್ರತಿ ಶಿಕ್ಷಕರು ಇಂತಹ ಮಹತ್ವದ ಕಾರ್ಯಗಳಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಬೆಳಗಾವಿಯ ಡಯಟ್‍ನ ಹಿರಿಯ ಉಪನ್ಯಾಸಕಿ ಎಂ.ಬಿ.ದಾಸೋಗ ಹೇಳಿದರು.
ಅವರು ತಾಲೂಕಿನ ಸಾಣಿಕೊಪ್ಪ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಯ ಆವರಣದಲ್ಲಿ ಈಚೆಗೆ ನಡೆದ ತಾಲೂಕಾ ಹಂತದ ಬೊಂಬೆ ಆಟಿಕೆ ಆಧಾರಿತ ಪಾಠೋಪಕರಣಗಳ ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳನ್ನು ಸತ್ಪ್ರಜೆಗಳನ್ನಾಗಿ ರೂಪಿಸಲು ಶಿಕ್ಷಕರಲ್ಲಿ ಕೌಶಲ್ಯತೆ ಇದ್ದರೆ ಮಾತ್ರ ಉತ್ತಮ ರಾಷ್ಟ್ರಕ್ಕೆ ಅಡಿಪಾಯ ಹಾಕಲು ಸಾಧ್ಯವಾಗಲಿದೆ. ಈಗಾಗಿ ಪಾಠೋಪಕರಣಗಳ ಸ್ಫರ್ಧೆಗಳಲ್ಲಿ ಭಾಗವಹಿಸಿ ಶಿಕ್ಷಕರು ತಮ್ಮ ಕೀರ್ತಿ ಹೆಚ್ಚಿಸಿಕೊಳ್ಳಬೇಕೆಂದರು.
ತಾಲೂಕಾ ಬಿಇಓ ಕಚೇರಿಯ ಕ್ಷೇತ್ರ ಸಮನ್ವಯಾಧಿಕಾರಿ ಬಿ.ಎನ್.ಕಸಾಳೆ ಮಾತನಾಡಿ, ಶಿಕ್ಷಕರು ಕೇವಲ ಕಲಿಸುವದಕ್ಕಷ್ಟೇ ಸೀಮೀತವಾಗಬಾರದು, ತಮ್ಮಲ್ಲಿರುವ ಪ್ರತಿಭೆಯನ್ನು ಹೊರ ಹಾಕಿ ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬಿ ಬದುಕಿನ ಕೌಶಲ್ಯತೆ ಬೆಳೆಸಲು ಮುಂದಾಗಬೇಕು. ಸ್ಫರ್ಧೆಗಳಲ್ಲಿ ಸೋತಾಗ ಕುಗ್ಗದೇ ಪ್ರಯತ್ನ ನಿರಂತರವಿದ್ದಾಗ ಮಾತ್ರ ಯಶ ಕಾಣಲು ಸಾಧ್ಯವಾಗತ್ತದೆ ಎಂದರು.
ಎಸ್‍ಡಿಎಂಸಿ ಉಪಾಧ್ಯಕ್ಷ ತಿರ್ಥಪ್ಪ ಸುಂಕದ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಎಸ್‍ಡಿಎಂಸಿ ಅಧ್ಯಕ್ಷ ಸಿದ್ದಯ್ಯ ಹಿರೇಮಠ, ಗ್ರಾ.ಪಂ ಸದಸ್ಯ ನಾಗಪ್ಪ ಸಂಗೊಳ್ಳಿ, ಮಹಾಂತಯ್ಯ ಹಿರೇಮಠ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಎಸ್.ಡಿ.ಗಂಗಣ್ಣವರ, ಎಸ್.ಸಿ.ಎಸ್.ಟಿ ಅಹಿಂದ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬಿ.ಡಿ.ತಮ್ಮಣ್ಣವರ, ಶಿಕ್ಷಣ ಸಂಯೋಜಕ ಪ್ರಕಾಶ ಮಾಸ್ತಿಹೊಳಿ, ಪ್ರೌಢಶಾಲೆ ಮುಖ್ಯೋಪಾಧ್ಯಾಯ ಎಂ.ವಾಯ್.ತಳವಾರ, ರಾಜ್ಯ ಕೆಎಸ್‍ಜಿ ಪರಿಷತ್ ಸದಸ್ಯ ರಮೇಶ ದೊಡಗೌಡರ, ಎಸ್‍ಡಿಎಂಸಿ ಸದಸ್ಯ ರಾಮಣ್ಣ ದುರ್ಗಣ್ಣವರ, ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ತಾಲೂಕಾಧ್ಯಕ್ಷ್ಯೆ ಮೀನಾಕ್ಷಿ ಸುತಗಟ್ಟಿ ಮುಂತಾದವರು ವೇದಿಕೆ ಮೇಲಿದ್ದರು. ಎಸ್‍ಡಿಎಂಸಿ ಸದಸ್ಯರು, ಶಾಲಾ ಶಿಕ್ಷಕರು ಪಾಲ್ಗೊಂಡಿದ್ದರು.
ತಾಲೂಕಿನ ಸಿದ್ದಸಮುದ್ರದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ಶಿಕ್ಷಕ, ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕ್ರತರಾದ ಸೋಮಲಿಂಗಪ್ಪ ತಿರಕನ್ನವರ ಅವರ ತಂಡ ರಚಿಸಿದ ಗೊಂಬೆ ಆಧಾರಿತ ಪಾಠೋಪಕರಣಗಳ ಪ್ರದರ್ಶನವು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಯಿತು.
ಶಿಕ್ಷಕ ಅನಂತ ಮರೆನ್ನವರ ಸ್ವಾಗತಿಸಿದರು. ಶಿಕ್ಷಕರಾದ ಎ.ಬಿ.ಅಂಗಡಿ, ಎಂ.ಜಿ.ನಧಾಪ್ ನಿರೂಪಿಸಿದರು. ಶಿಕ್ಷಕ ರವಿ ತುರಮರಿ ವಂದಿಸಿದರು. ಬೊಂಬೆ ಆಟಿಕೆ ಆಧಾರಿತ ಪಠೋಪಕರಣದಲ್ಲಿ ತಾಲೂಕಾ ಮಟ್ಟಕ್ಕೆ ಆಯ್ಕೆಯಾದ ಪ್ರತಿ ಸ್ಫರ್ದಾಳುಗಳು ಉತ್ಸಾಹದಿಂದ ಪ್ರದರ್ಶನದಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಹುಮ್ಮಸು ತಂದರು.