ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ವತಿಯಿಂದ ಅಪಘಾತದಲ್ಲಿ ಸಂತ್ರಸ್ತ ಮಕ್ಕಳ ಭೇಟಿ; ಸಾಂತ್ವನ

ಸಂಜೆವಾಣಿ ವಾರ್ತೆ,
ವಿಜಯಪುರ:ಡಿ.11:ಇತ್ತೀಚೆಗೆ ಬಿಳೆಭಾವಿ – ತಾಳಿಕೋಟೆ ರಸ್ತೆಯಲ್ಲಿ ಕೂಲಿ ಕಾರ್ಮಿಕರ ಕರೆದೊಯ್ಯುತ್ತಿದ್ದ ಮಹೀಂದ್ರ ಪಿಕಫ್ ವಾಹನ ಊರುಳಿ ಬಾಲಕಿಯೊಬ್ಬಳು ಮೃತಪಟ್ಟು. ಇನ್ನೂ ಕೆಲವು ಮಕ್ಕಳು ಗಂಭೀರವಾಗಿ ಗಾಯಗೊಂಡು ಸರಕಾರಿ ಆಸ್ಪತ್ರೆ ಹಾಗೂ ಬಿ ಎಲ್ ಡಿ ಈ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ವಿಷಯ ತಿಳಿದು ಜಿಲ್ಲಾ ಆಸ್ಪತ್ರೆಗೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಹಾಗೂ ಸದಸ್ಯರ ತಂಡ ಭೇಟಿ ನೀಡಿ ಮಕ್ಕಳ ಸ್ಥಿತಿ ಗತಿಯನ್ನು ವಿಚಾರಿಸಿ. ಧೈರ್ಯ ತುಂಬಿ ಅವರ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದರು.
ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸಂತ್ರಸ್ತ ಮಕ್ಕಳಿಗೆ ನಿಯಮಾನುಸಾರ ಸರ್ಕಾರದ ಸೂಕ್ತ ಪರಿಹಾರ ಒದಗಿಸಲು ಹಾಗೂ ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಶಿಫಾರಸ್ಸು ಮಾಡುವದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಶ್ರೀಧರ ಕುಲಕರ್ಣಿ. ಸಮಿತಿ ಸದಸ್ಯ ನ್ಯಾಯವಾದಿ ದಾನೇಶ ಅವಟಿ. ಯಲ್ಲಪ್ಪ ಇರಕಲ್. ನ್ಯಾಯವಾದಿ ಸೂರ್ಯಕಾಂತ ಬಿರಾದಾರ ಮತ್ತಿತರರು ಹಾಜರಿದ್ದರು.