ಜಿಲ್ಲಾ ಬಿಜೆಪಿ ಕೋವಿಡ್-19 ಸಾರ್ವಜನಿಕರ ಸಹಾಯ ತಂಡ ರಚನೆ

ಕಲಬುರಗಿ.ಏ.24- ಭಾರತೀಯ ಜನತಾ ಪಾರ್ಟಿ ಕಲಬುರಗಿ ಗ್ರಾಮಾಂತರ ಜಿಲ್ಲೆಯ ವತಿಯಿಂದ ಬಿಜೆಪಿ ಜಿಲ್ಲಾಧ್ಯಕ್ಷ
ಶಿವರಾಜ ಪಾಟೀಲ ರದ್ದೇವಾಡಗಿ ಇವರ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಸಂಸದರು, ಶಾಸಕರು ಹಾಗೂ ಮಾಜಿ ಶಾಸಕರ ನೇತೃತ ್ವದಲ್ಲಿ ಕೋವಿಡ್-19 ಎರಡನೇ ಅಲೆಯ ಬಗ್ಗೆ ಕಲಬುರಗಿ ಜಿಲ್ಲೆಯಲಿ ್ಲ
ಸಮರ್ಪಕವಾಗಿ ನಿರ್ವಹಿಸಲು ತಂಡಗಳನ್ನು ರಚಿಸಲಾಯಿತು.
ಜಿಲ್ಲೆಯ ಸಾರ್ವಜನಿಕರು ಭಾರತೀಯ ಜನತಾ ಪಾರ್ಟಿ
ಕಲಬುರಗಿ ಗ್ರಾಮಾಂತರ ಜಿಲ್ಲೆಯ ವತಿಯಿಂದ ಕೋವಿಡ್-19 ಎರಡನೇ ಅಲೆಗೆ ಸಂಬಂಧಿಸಿದಂತೆ, ರಚಿಸಲಾದ ತಂಡದವರಿಗೆ ದೂರವಾಣಿ ಮುಖಾಂತರ ಸಂಪರ್ಕಿಸಿ, ತಮಗೆ ಏನಾದರು ತೊಂದರೆಗಳು ಎದುರಾದಲ್ಲಿ ಪರಿಹಾರ ಕಂಡುಕೊಳ್ಳುವಂತೆ ಶಿವರಾಜ ಪಾಟೀಲ ರದ್ದೇವಾಡಗಿ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಮುಂದುವರೆದು ಕೋವಿಡ್ -19 ಎರಡನೇ
ಅಲೆಯನ್ನು ಎದುರಿಸಲು ಎಲ್ಲರೂ ಮಾಸ್ಕ, ಸ್ಯಾನಿಟೈಸರ್ ಹಾಗೂ ಸಾಮಾಜಿಕ ಅಂತರ ಕಾಪಾಡುವುದರ
ಮುಖಾಂತರ ಸರ್ಕಾರದ ನಿಯಮಗಳನ್ನು ಕೂಡ ತಪ್ಪದೇ ಪಾಲಿಸುವುದು ಮತ್ತು ಜಿಲ್ಲಾ ಆಡಳಿತದೊಂದಿಗೆ ಸಹಕರಿಸುವಂತೆ ಅವರು ಮನವಿ ಮಾಡಿದ್ದಾರೆ.
ಬಿಜೆಪಿ ಕೋವಿಡ-19 ಜಿಲ್ಲಾ ತುರ್ತು ಸಹಾಯ ತಂಡ- ಸರ್ಕಾರಿ ಸೌಲಭ್ಯ ಮತ್ತು ಜಿಲ್ಲೆಯ ಮಾಹಿತಿಗಾಗಿ ಅಶೋಕ ಬಗಲಿ- 9480444777, ಹಣಮಂತರಾವ ಮಾಳಿಗೆ- 9972901758 ಮತ್ತು ವೈದ್ಯಕೀಯ ಸಹಾಯ ತಂಡ ಡಾ. ಸುಧಾ ಹಾಲಕಾಯಿ- 9449838758, 9035348333. ಡಾ.ಪ್ರವೀಣ ಶೇರಿ- 9886943999. ಆಕ್ಸಿಜನ್ ಸಹಾಯ ತಂಡ ಡಾ. ಭೀಡಿಣ್ಣ ಕಲ್ಲೂರು- 9901030977 ಡಾ.ವೀರೆಂದ್ರ ಪಾಟೀಲ ರಾಯಕೋಟ- 8105222348, ವೆಂಟಲೆಟ್ ಸಹಾಯ ತಂಡ- ಡಾ.ಪ್ರಶಾಂತ ಕಮಲಾಪೂರ 9449822973 ಡಾ.ಧರ್ಮಣ್ಣ ಇಟಗಿ- 9880123695 ಹಾಗೂ ಮೆಡಿಷನ್ ಔಷದಿ ಸಹಾಯ ತಂಡ ಡಾ.ಗುರುರಾಜ ಹಲಕಟ್ಟಿ 9731850378 ಡಾ. ಅರವಿಂದ ಚವ್ಹಾಣ 9900896671 ಈ ಸಂಖ್ಯೆಗಳನ್ನು ಸಾರ್ವಜನಿಕರು ಸಂಪರ್ಕಿಸುವ ಮೂಲಕ ಅಗತ್ಯ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.