ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಧರಣಿ ನಿಧನ

ಕೋಲಾರ,ಮೇ.೫:ಕೋಲಾರ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಧರಣಿ(೪೬) ಹೃದಯಘಾತದಿಂದ ಮೃತ ಪಟ್ಟಿದ್ದಾರೆ.
ಗ್ರಾಮದ ೧ನೇ ಬ್ಲಾಕ್ ನಿವಾಸಿಯಾಗಿರುವ ಧರಣಿ ಅವರು ಬೇತಮಂಗಲ ಗ್ರಾಪಂಗೆ ಒಂದು ಬಾರಿ ಗ್ರಾಪಂ ಸದಸ್ಯರಾಗಿ ಆಯ್ಕೆಯಾಗಿದರು, ಬಿಜೆಪಿ ಪಕ್ಷದ ಕೆಜಿಏಫ್ ಗ್ರಾಮಾಂತರ ಅಧ್ಯಕ್ಷರಾಗಿ ಸಹ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೋಡಗಿಸಿಕೊಂಡಿದರು, ಪ್ರಸ್ತುತ ಕೋಲಾರ ಜಿಲ್ಲಾ ಬಿಜೆಪಿ ಕಾರ್ಯದರ್ಶಿಯಾಗಿ ಪಕ್ಷ ಸಂಘಟನೆಯಲ್ಲಿ ತೋಡಗಿದ ಧರಣಿ ಅವರು ಹೃದಯ ಘಾತದಿಂದ ಮೃತ ಪಟ್ಟಿರುವ ಸಂಗತಿ ತಿಳಿಯುತ್ತಿದಂತೆ ಬಿಜೆಪಿ ಮುಖಂಡರಲ್ಲಿ ಹಾಗೂ ಕಾರ್ಯಕರ್ತರು ತಮ್ಮ ಅತ್ಮಕ್ಕೆ ಶಾಂತಿ ಕೋರಿ, ತಮ್ಮ ಒಡನಾಟದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡರು.
ಧರಣಿ ಅವರ ಸಾವಿನಿಂದ ತಾಯಿ, ಪತ್ನಿ, ೩ ಮಕ್ಕಳು ಹಾಗೂ ಕುಟುಂಬಸ್ಥರ ಆಕ್ರೋದನ ಮುಗಿಲು ಮುಟ್ಟಿತ್ತು.
ಕೋಲಾರ ಸಂಸದ ಎಸ್.ಮುನಿಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್, ಕೆಜಿಏಫ್ ಮಾಜಿ ಶಾಸಕ ವೈ.ಸಂಪಂಗಿ, ಜಿಪಂ ಸದಸ್ಯರಾದ ನಿರ್ಮಾಲ ಅಮರೇಶ್, ಜಯಪ್ರಕಾಶ್ ನಾಯ್ಡು, ತಾಪಂ ಸದಸ್ಯರಾದ ಡಾ.ಕೃಷ್ಣಮೂರ್ತಿ, ಹಂಗಳ ರಮೇಶ್ ಸೇರಿದಂತೆ ಆಪರ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಅಂತಿಮ ದರ್ಶನ ಪಡೆದು ಸಂತಪ ಸೂಚಿಸಿ, ಕುಟುಂಬಸ್ಥರಿಗೆ ದೈರ್ಯ ತುಂಬಿದರು.