ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನ ವಿಪ್ರರಿಗೆ ಕೊಡಿ

ಕಲಬುರಗಿ,ಡಿ.29 : ಭಾರತೀಯ ಜನತಾ ಪಕ್ಷವು ಜಿಲ್ಲಾಧ್ಯಕ್ಷ ,ನಗರದ ಅಧ್ಯಕ್ಷರನ್ನು ನೇಮಕ ಮಾಡುತ್ತಿದೆ. ಕಲಬುರಗಿ ಜಿಲ್ಲಾ ಗ್ರಾಮಾಂತರ ಅಥವಾ ಜಿಲ್ಲಾ ನಗರಾಧ್ಯಕ್ಷರ ಸ್ಥಾನದಲ್ಲಿ ಒಂದು ಸ್ಥಾನವನ್ನು ಬಿಜೆಪಿಯಲ್ಲಿ ಸೇವೆ ಸಲ್ಲಿಸಿದ ವಿಪ್ರ ಸಮಾಜದ ಮುಖಂಡರಿಗೆ ಕೊಡಬೇಕು ಎಂದು ಅಖಿಲ ಭಾರತೀಯ ಬ್ರಾಹ್ಮಣ ಮಹಾ ಸಂಘದ ಜಿಲ್ಲಾಧ್ಯಕ್ಷ ರವಿ ಲಾತೂರಕರ ಅವರು ಆಗ್ರಹಿಸಿದ್ದಾರೆ.
ಜನಸಂಘದಿಂದ ಹಿಡಿದು ಬಿಜೆಪಿ ಇವತ್ತಿನ ವರೆಗೆ ಪಕ್ಷ ಕಟ್ಟಲು ಬ್ರಾಹ್ಮಣ ಸಮಾಜದ ಕೊಡುಗೆ ಅಪಾರ ಇದೆ ಮತ್ತು 70 ಸಾವಿರ ಮತದಾರರು ಜಿಲ್ಲೆಯಲ್ಲಿ ಇದ್ದಾರೆ. ವಿಪ್ರ ಸಮಾಜಕ್ಕೆ ಈ ಹುದ್ದೆ ನೀಡಬೇಕು.
ವಿಧಾನ ಸಭೆ ಚುನಾವಣೆಯಲ್ಲೂ ಈ ಸಮಾಜಕ್ಕೆ ಅನ್ಯಾಯವಾಗಿದೆ. ನಮ್ಮ ಸಮಾಜದವರನ್ನು ಎಂ.ಎಲ್.ಸಿ ಮಾಡಿಲ್ಲ. ಜಿಲ್ಲಾಧ್ಯಕ್ಷರ ಸ್ಥಾನಕ್ಕೆ ಅವಕಾಶ ನೀಡುವ ಮೂಲಕ ಬ್ರಾಹ್ಮಣ ಸಮಾಜಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಪಕ್ಷದ ವರಿಷ್ಠರಲ್ಲಿ ಅವರು ಮನವಿ ಮಾಡಿದ್ದಾರೆ.