ಜಿಲ್ಲಾ ಬಿಜೆಪಿ ಅಧ್ಯಕ್ಷರ ಆಯ್ಕೆ ಕುತೂಹಲಕ್ಕೆಡೆ

ಚಿಕ್ಕಬಳ್ಳಾಪುರ : ಜ. ೦೧. ಚಿಕ್ಕಬಳ್ಳಾಪುರ ಜಿಲ್ಲಾ ಬಿ.ಜೆ.ಪಿ. ಜಿಲ್ಲಾಧ್ಯಕ್ಷರ ಚುನಾವಣೆ ವಿಚಾರ ಈಗ ಆ ಪಕ್ಷದಲ್ಲಿ ಪ್ರಮುಖವಾಗಿ ಕೇಳಿ ಬರುತ್ತಿದೆ.
ಬಿ.ಜೆ.ಪಿ. ಜಿಲ್ಲಾಧ್ಯಕ್ಷರಾಗಿ ಯಾರು ಆಯ್ಕೆಯಾಗುತ್ತಾರೆ ಎಂಬ ಕೂಲಹಲ ಕಾರ್ಯಕರ್ತರಲ್ಲಿದೆ.
೨೦೨೪ರಲ್ಲಿ ಲೋಕಸಭಾ ಚುನಾವಣೆ ಇನ್ನು ಕೆಲವೇ ತಿಂಗಳುಗಳಲ್ಲಿ ನಡೆಯುವ ಹಿನ್ನೆಲೆಯಲ್ಲಿ ಇದೀಗ ಜಿಲ್ಲಾ ಬಿಜೆಪಿ ಅಧ್ಯಕ್ಷರ ಗಾದೆಗೆ ಪ್ರಾಮುಖ್ಯತೆ ದೊರೆತಿರುವುದು ರಾಜಕೀಯ ವಲಯದಲ್ಲಿ ಕಂಡುಬಂದ ಅಂಶವಾಗಿದೆ.


ಭಾರತೀಯ ಜನತಾ ಪಕ್ಷ ಪ್ರಪ್ರಥಮ ಬಾರಿಗೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ೨೦೧೯ರಲ್ಲಿ ನಡೆದ ಉಪಚುನಾವಣೆಯಲ್ಲಿ ಒಂದು ಸ್ಥಾನ ಗಿಟ್ಟಿಸಿಕೊಂಡು ತನ್ ಮೂಲಕ ಕಾಂಗ್ರೆಸ್ ನಿಂದ ಬಿ.ಜೆ.ಪಿ.ಗೆ ವಲಸೆ ಬಂದ ಡಾ. ಕೆ. ಸುಧಾಕರ್ ವಿಧಾನಸಭಾ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ಬಿ.ಜೆ.ಪಿ. ಜಿಲ್ಲೆಯಲ್ಲಿ ತನ್ನ ಖಾತೆ ಆರಂಭಿಸಿತು.
೨೦೨೩ ವಿಧಾನಸಭೆ ಚುನಾವಣೆಯ ನಂತರ ಪಕ್ಷದಲ್ಲಿ ಸಾಕಷ್ಟು ಬದಲಾವಣೆಗಳು ಕಂಡು ಬಂದಿವೆ. ಮೂಲ ಬಿ.ಜೆ.ಪಿ.ಗಳು ಹಾಗೂ ವಲಸೆ ಬಂದ ಬಿ.ಜೆ.ಪಿ. ಮುಖಂಡರುಗಳು ಎಂಬ ಭೇದಭಾವವು ಇದೆ ಎಂಬ ಸಂಗತಿಯನ್ನು ಅಲ್ಲ ಗೆಳೆಯುವಂತಿಲ್ಲ.
ಜಿಲ್ಲಾಧ್ಯಕ್ಷರ ಬದಲಾವಣೆಯ ಜತೆಗೆ ವಿವಿಧ ಘಟಕಗಳ ಪದಾಧಿಕಾರಿಗಳ ನೇಮಕವು ಆಗಲಿದೆ.
ಬಾಗೇಪಲ್ಲಿ, ಚಿಂತಾಮಣಿ ಮತ್ತು ಶಿಡ್ಲಘಟ್ಟದಲ್ಲಿ ಬಿ.ಜೆ.ಪಿ.ಬಲ ಹೆಚ್ಚಿಸಿಕೊಂಡಿದೆ. ಆದರೆ ಈಗ ವಲಸಿಗರು ಮತ್ತು ಮೂಲ ಬಿಜೆಪಿಗರು ಎಂಬ ಗುಂಪುಗಳಿಂದ ಪಕ್ಷದ ಸಂಘಟನೆ ಸೇರಿದಂತೆ ನಾನಾ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಜಿಲ್ಲಾಧ್ಯಕ್ಷರ ನೇಮಕದಲ್ಲೂ ಒಮ್ಮತದ ಅಭಿಪ್ರಾಯ ವ್ಯಕ್ತವಾಗಿಲ್ಲ.ಯಾರು ನೇಮಕವಾಗುತ್ತಾರೆ ಎಂಬುದೀಗ ಕುತೂಹಲ ಕೆರಳಿಸಿದೆ.
ಸದ್ಯ ಬಿ.ಜೆ.ಪಿ. ಜಿಲ್ಲಾಧ್ಯಕ್ಷರ ರೇಸ್‌ನಲ್ಲಿ ಬಿ.ಜೆ.ಪಿ.ಯಲ್ಲಿ ಗುರುತಿಸಿಕೊಂಡಿರುವ ಸಂದೀಪ ಬಿ. ರೆಡ್ಡಿ, ಎ.ವಿ . ಬೈರೇಗೌಡ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿ ಸಿದ್ದ ಸೀಕಲ್ ರಾಮಚಂದ್ರಗೌಡ ಹಾಗೂ ಹೆಸರು ಪ್ರಬಲವಾಗಿ ಕೇಳಿಬರುತ್ತಿದೆ.
ಮೂಲ ಬಿಜೆಪಿಯಲ್ಲೇ ಗುರುತಿಸಿಕೊಂಡಿರುವ ಸಂದೀಪ ಬಿ. ರೆಡ್ಡಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿ ಉತ್ತಮ ಕಾರ್ಯ ನಿರ್ವಹಿಸಿದ್ದರು ಹಾಗೂ ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್ ಎಂಬ ಸಂಸ್ಥೆಯನ್ನು ಕಟ್ಟಿಕೊಂಡು ಶೈಕ್ಷಣಿಕ ಕ್ಷೇತ್ರದಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿ ಒಳಗೊಂಡಂತೆ ಬಡ ವಿದ್ಯಾರ್ಥಿನಿಯರ ಹಾಗೂ ವಿದ್ಯಾರ್ಥಿಗಳ ಅಭಿವೃದ್ಧಿಗೆ ಕಂಕಣ ಕಟ್ಟಿರುವುದು ಸಂದೀಪ್ ಬಿ ರೆಡ್ಡಿ ಅವರ ಹೆಸರು ಬಿಜೆಪಿ ಜಿಲ್ಲಾಧ್ಯಕ್ಷ ಸ್ನಾನಕ್ಕೆ ಜೋರಾಗಿಯೇ ಕೇಳಿಬರುತ್ತಿದೆ. ಬಿಜೆಪಿ ಜಿಲ್ಲಾಧ್ಯಕ್ಷರ ಗಾದಿ ಒಟ್ಟಿನಲ್ಲಿ ಕುತೂಹಲಕ್ಕೆ ಎಡೆ ಮಾಡಿದ್ದು ವಿಜಯಮಾಲೆ ಯಾರ ಕೊರಳಿಗೆ ಬೀಳಲಿದೆ ಎಂಬುದು ಮಾತ್ರ ಸದ್ಯಕ್ಕೆ ಪ್ರಶ್ನೆಯಾಗಿದೆ.