ಜಿಲ್ಲಾ ಬಾಲ ಭವನದಲ್ಲಿ ಬೇಸಿಗೆ ಶಿಬಿರ ಉದ್ಘಾಟನೆ

ದಾವಣಗೆರೆ; ಮೇ.19: ಬೇಸಿಗೆ ಶಿಬಿರದಲ್ಲಿ ಭಾಗವಹಿಸುವುದರಿಂದ ಮಕ್ಕಳು ಇತರೆ ಮಕ್ಕಳೊಂದಿಗೆ ಹೊಸದಾಗಿ ಸ್ನೇಹವನ್ನು ಸಂಪಾದಿಸುವುದು ಹಾಗೂ ವಿವಿಧ ರೀತಿಯ ಚಟುವಟಿಕೆಗಳಲ್ಲಿ ತಮ್ಮನ್ನು  ತೊಡಗಿಸಿಕೊಂಡು ಸಂತೋಷವಾಗಿರಲು ಸಾಧ್ಯ ಎಂದು ಜಿ.ಪಂ ಸಿಇಓ ಸುರೇಶ್ ಇಟ್ನಾಳ್ ತಿಳಿಸಿದರು.ಜೆ.ಹೆಚ್.ಪಟೇಲ್ ನಗರದಲ್ಲಿ ಇರುವ ಜಿಲ್ಲಾ ಬಾಲಭವನದಲ್ಲಿ 6 ರಿಂದ 16 ವರ್ಷದ ಮಕ್ಕಳಿಗಾಗಿ ಬೇಸಿಗೆ ಶಿಬಿರವನ್ನು  “ಸ್ಮೈಲಿ” ಬ್ಯಾಡ್ಜ್ ಹಾಕುವುದರ ಮೂಲಕÀ ಹಾಗೂ ಫ್ರೆಂಡ್‍ಶಿಪ್ ಟ್ಯಾಗ್ ಕಟ್ಟುವುದರ  ಉದ್ಘಾಟಿಸಿ ಮಾತಾನಾಡಿದ ಅವರುಇತ್ತೀಚಿನ ದಿನಗಳಲ್ಲಿ ಮಕ್ಕಳು ರಜೆಯ ದಿನಗಳನ್ನು ಸ್ನೇಹಿತರೊಂದಿಗೆ ಕಳೆಯದೆ ಮೊಬೈಲ್‍ನಲ್ಲಿ ಗೇಮ್ಸ್ ಆಡುವುದರ ಮುಖಾಂತರ ಕಳೆಯುತ್ತಿದ್ದು, ಇದರಿಂದ ಮಕ್ಕಳಿಗೆ ಸಾಮಾಜಿಕ ಸಂಬಂಧಗಳನ್ನು ಬೆಳಸಿಕೊಳ್ಳಲು ಅವಕಾಶ ದೊರೆಯುತ್ತಿಲ್ಲ. ಬೇಸಿಗೆ ಶಿಬಿರದಲ್ಲಿ ಭಾಗವಹಿಸುವುದರಿಂದ ಮಕ್ಕಳು ಇತರೆ ಮಕ್ಕಳೊಂದಿಗೆ ಹೊಸದಾಗಿ ಸ್ನೇಹವನ್ನು ಸಂಪಾದಿಸುವುದು ಹಾಗೂ ವಿವಿಧ ರೀತಿಯ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಂತೋಷವಾಗಿರಲು ಸಾಧ್ಯವಾಗುತ್ತದೆ. ಆದಕಾರಣ ಮಕ್ಕಳು ಬೇಸಿಗೆ ಶಿಬಿರದಲ್ಲಿ ಅತ್ಯಂತ ಚಟುವಟಿಕೆಯಿಂದ ಭಾಗವಹಿಸಿ ಒಳ್ಳೆಯ ಸವಿನೆನಪುಗಳೊಂದಿಗೆ ಶಾಲೆಗೆ ಮರಳಬೇಕೆಂದು ಕಿವಿಮಾತು ಹೇಳಿದರು.ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಭಾಗವಹಿಸಿದ ಶ್ರೀಮತಿ.ಯಶಾ ದಿನೇಶ್‍ರವರು ಮಾತನಾಡಿ ಎಲ್ಲಾ ಮಕ್ಕಳಲ್ಲಿ ಒಂದಲ್ಲಾ ಒಂದು ಪ್ರತಿಭೆ ಇದ್ದು, ಮಕ್ಕಳ ಪ್ರತಿಭೆಯನ್ನು ಹೊರತರಲು ಹಾಗೂ ಹೊರತಂದ ಪ್ರತಿಭೆಯನ್ನು ಪೋಷಿಸಿ ಹೆಚ್ಚಿನ ಮಟ್ಟದಲ್ಲಿ ಬೆಳೆಸಲು ಬೇಸಿಗೆ ಶಿಬಿರಗಳು ಉತ್ತಮ ವೇದಿಕೆಯಾಗಿದ್ದು, ಮಕ್ಕಳು ತಮ್ಮನ್ನು ತಾವು ಪೂರ್ಣ ಪ್ರಮಾಣದಲ್ಲಿ ಬೇಸಿಗೆ ಶಿಬಿರದಲ್ಲಿ ತೊಡಗಿಸಿಕೊಳ್ಳಬೇಕೆಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ವಾಸಂತಿ ಉಪ್ಪಾರ್ ಇವರು ಪ್ರಾಸ್ತವಿಕ ನುಡಿಗಳನ್ನು ಆಡುತ್ತಾ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗಾಗಿ ಯೋಗ, ಸಮೂಹ ನೃತ್ಯ, ಸಮೂಹ ಗಾಯನ, ಕರಕುಶಲ ವಸ್ತುಗಳ ತಯಾರಿಕೆ, ಗ್ರಾಮೀಣ ಕ್ರೀಡೆಗಳು, ಕಥೆ ಹೇಳುವುದು, ಕಥೆ ಬರೆಯುವುದು ಅಲ್ಲದೆ ನಗೆಹಬ್ಬಗಳಂತಹ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಎಲ್ಲಾ ಕಾರ್ಯಕ್ರಮಗಳನ್ನು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‍ನ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್£ ಜಿಲ್ಲಾ ಕಾರ್ಯದರ್ಶಿ ಎಂ.ಗುರುಸಿದ್ದಸ್ವಾಮಿ, ರಾಮಚಂದ್ರಶೆಟ್ರು, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ಪ್ರಸನ್ನ ಕುಮಾರ್, ಕೋ-ಆರ್ಡಿನೇಟರ್ ಶ್ರೀಮತಿ.ಮಾಲತಿ ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ.ಎನ್.ಬಿ.ಲೀಲಾ ಹಾಗೂ ಶ್ರೀಮತಿ.ಡಿ.ಕೆ.ಲಕ್ಷ್ಮೀರವರು ಹಾಜರಿದ್ದರು.