ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ, ಕಾರ್ಯದರ್ಶಿ ಆಯ್ಕೆ

ಚಾಮರಾಜನಗರ, ಜು. 18:- ಚಾಮರಾಜನಗರ ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ವೀರಭದ್ರಸ್ವಾಮಿ, ಕಾರ್ಯದರ್ಶಿಯಾಗಿ ಕಿರಣ್‍ರಾಜ್ ಇಂದು ಆಯ್ಕೆಯಾದರು.
ನಗರದ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಜಿಲ್ಲಾ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಚುನಾವಣೆ ಭಾನುವಾರ ನಡೆಯಿತು. ಜಿಲ್ಲೆಯ 5 ತಾಲೂಕುಗಳಿಂದ 35 ಶಿಕ್ಷಕ ಪ್ರತಿನಿಧಿಗಳು ಮತದಾನದಲ್ಲಿ ಭಾಗವಹಿಸಿ ಹಕ್ಕು ಚಲಾಯಿಸಿದರು. ವೀರಭದ್ರಸ್ವಾಮಿ ಅವರ ತಂಡ ಹೆಚ್ಚು ಮತಗಳನ್ನು ಪಡೆದು ಆಯ್ಕೆಯಾಗಿದ್ಧಾರೆ.
ಸಂಘದ ಅಧ್ಯಕ್ಷರಾಗಿ ವೀರಭದ್ರಸ್ವಾಮಿ 24 ಮತಗಳನ್ನು ಪಡೆದು ವಿಜೇತರಾದರೆ, ಪ್ರತಿಸ್ಪರ್ಧಿ ತ್ಯಾಗರಾಜಮೂರ್ತಿ (11 ಮತಗಳು) ಪಡೆದರು. ಕಾರ್ಯದರ್ಶಿಯಾಗಿ ಕಿರಣ್‍ರಾಜ್ 24 ಮತಗಳನ್ನು ಪಡೆದು ವಿಜೇತರಾದರೆ, ಸಿದ್ದರಾಜು 11 ಮತಗಳನ್ನು ಪಡೆದÀರು. ಖಜಾಂಚಿಯಾಗಿ ಮಹÉೀಶ್‍ಕುಮಾರ್ 26 ಮತಗಳನ್ನು ಪಡೆದು ಆಯ್ಕೆಯಾದರೆ, ಮಹೇಶ್ 9 ಮತಗಳನ್ನು ಪಡೆದರು. ಉಪಾಧ್ಯಕ್ಷರಾಗಿ ಶಾಂತರಾಜ್ 22 ಮತಗಳನ್ನು ಪಡೆದು ಆಯ್ಕೆಯಾದರೆ, ಮಾದೇಗೌಡ 13 ಮತಗಳನ್ನು ಪಡೆದುಕೊಂಡಿದ್ದಾರೆ ಎಂದು ಚುನಾವಣಾಧಿಕಾರಿಯಾಗಿದ್ದ ಬಿ. ಮಹದೇವಸ್ವಾಮಿ ನೂತನ ಪದಾಧಿಕಾರಿಗಳನ್ನು ಅಧಿಕೃತವಾಗಿ ಘೋಷಣೆ ಮಾಡಿದರು.
ಸರಕಾತ್ಮಕವಾಗಿ ಅಭಿವೃದ್ದಿಗೆ ಹೆಚ್ಚಿನ ಅದ್ಯತೆ :
ನೂತನ ಅಧ್ಯಕ್ಷ ವೀರಭದ್ರಸ್ವಾಮಿ ಮಾತನಾಡಿ, ಜಿಲ್ಲೆಯ ಐದು ತಾಲ್ಲೂಕುಗಳ ಪದಾಧಿಕಾರಿಗಳು ನಮ್ಮ ತಂಡದ ಮೇಲೆ ವಿಶ್ವಾಸವಿಟ್ಟು ಹೆಚ್ಚಿನ ಮತಗಳನ್ನು ನೀಡಿ, ಗೆಲ್ಲಿಸಿದ್ದೀರಿ. ನಿಮ್ಮೆಲ್ಲರ ಆಶಯವನ್ನು ಈಡೇರಿಸುವ ಹಾಗೂ ಸಂಘಟನೆಯನ್ನು ಬಲಗೊಳಿಸಲು ಶ್ರಮಿಸುತ್ತೇವೆ. ಎಲ್ಲರು ಸಹ ಒಗ್ಗಟ್ಟಿನಿಂದ ಜಿಲ್ಲೆಯ ಶಿಕ್ಷಕರ ಕುಂದುಕೊರತೆಗಳಿಗೆ ಸ್ಪಂಧಿಸುವ ಕೆಲಸವನ್ನು ಮಾಡೋಣ, ಹಿರಿಯ ಶಿಕ್ಷಕನಾಗಿ, ಕಳೆದ 25 ವರ್ಷಗಳಿಂದ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿ ಹೋರಾಟ ಮಾಡಿದ ಫಲವಾಗಿ ಇನ್ನು ಹೆಚ್ಚಿನ ಸೇವೆ ಮಾಡಲು ಅಧ್ಯಕ್ಷ ಸ್ಥಾನವನ್ನು ತಾವೆಲ್ಲರು ನೀಡಿದ್ದೀರಿ, ಹಿಂದಿನ ಅವಧಿಯ ಅಧ್ಯಕ್ಷರ ಸೇವೆಯನ್ನು ಸ್ಮರಿಸಿಕೊಳ್ಳುತ್ತಾ. ಮುಂದೆ ಅವರ ಮಾರ್ಗದರ್ಶನದಲ್ಲಿ ಹೆಚ್ಚಿನ ಕೆಲಸ ಕಾರ್ಯಗಳನ್ನು ಮಾಡೋಣ ಎಂದು ತಿಳಿಸಿದರು.
ಜಿಲ್ಲಾ ಪ್ರೌಢಶಾಲೆ ಸಹ ಶಿಕ್ಷಕರ ಸಂಘದ ನಿಗರ್ಮಿತ ಅಧ್ಯಕ್ಷ ಸಿದ್ದಮಲ್ಲಪ್ಪ ಮಾತನಾಡಿ, ಜಿಲ್ಲೆಯ ಐದು ತಾಲೂಕುಗಳ ಶಿಕ್ಷಕರ ಸಂಘದ ಪದಧಿಕಾರಿಗಳು ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಿ, ಅಧ್ಯಕ್ಷರು, ಪದಾಧಿಕಾರಿಗಳನ್ನು ಆಯ್ಕೆ ಮಾಡಿಕೊಂಡಿದ್ದು, ಮುಂದಿನ ದಿನಗಳಲ್ಲಿ ಎಲ್ಲರು ಸಹ ಒಗ್ಗಟ್ಟಿನಿಂದ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವ ಜೊತೆಗೆ ಜಿಲ್ಲೆಯ ಶೈಕ್ಷಣಿಕ ಪ್ರಗತಿ ಮತ್ತು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುವ ನಿಟ್ಟಿನಲ್ಲಿ ಇಲಾಖೆ ಹಾಗು ಅಧಿಕಾರಿಗಳ ಮಾರ್ಗಧರ್ಶನ ಮತ್ತು ಸೂಕ್ತ ಸಲಹೆ ಸೂಚನೆಗಳನ್ನು ನೀಡಿ, ಅಭಿವೃದ್ದಿಯತ್ತ ಜಿಲ್ಲೆಯನ್ನು ಎಲ್ಲರು ಮುನ್ನಡೆಸೋಣ ಎಂದರು.