ಜಿಲ್ಲಾ ಪ್ರಥಮ ದಾಸ ಸಾಹಿತ್ಯ ಸಮ್ಮೇಳನ : ಸರ್ವಾಧ್ಯಕ್ಷರಿಗೆ ಆಹ್ವಾನ

ಔರಾದ : ಡಿ.27:ಬೀದರ್ ನಗರದ ಡಾ. ಚನ್ನಬಸವ ಪಟ್ಟದೇವರು ಜಿಲ್ಲಾ ರಂಗಮಂದಿರದಲ್ಲಿ ಡಿಸೆಂಬರ್ 30ರಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆಯಲಿರುವ ಜಿಲ್ಲಾ ಪ್ರಥಮ ದಾಸ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಬಿ.ಎಂ ಅಮರವಾಡಿ ಅವರನ್ನು ಸ್ವಾಗತ ಸಮಿತಿ, ಜಿಲ್ಲಾ ಕಸಾಪ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು ಸೋಮವಾರ ಆಮಂತ್ರಣ ನೀಡಿ ಸಮ್ಮೇಳನಕ್ಕೆ ಆಹ್ವಾನಿಸಿದರು.

ಪಟ್ಟಣದ ಮನೆಗೆ ಆಗಮಿಸಿ ಆಹ್ವಾನ ನೀಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಮಾತನಾಡಿ, ಬೀದರ್ ಜಿಲ್ಲೆಯಲ್ಲಿ ದಾಸ ಸಾಹಿತ್ಯದ ಬಗ್ಗೆ ಚಿಂತನೆಗಳು ಶುರುವಾಗುವಂತೆ ಮಾಡಿರುವ ಅಮರವಾಡಿ, ದಾಸ ಸಾಹಿತ್ಯ ಉಳಿಸಿ ಬೆಳೆಸುತ್ತ ಸಾಹಿತ್ಯದ ಪ್ರಸಾರಕ್ಕಾಗಿ ಕಳೆದ ಒಂದೂವರೆ ದಶಕದಿಂದ ರಾಜ್ಯಮಟ್ಟದ ದಾಸ ಸಾಹಿತ್ಯ ಪರಿಷತ್ತು ಸಂಸ್ಥೆ ಸ್ಥಾಪಿಸಿ ನಿರಂತರವಾಗಿ ಶ್ರಮಿಸುತ್ತಿದ್ದು, ರಾಜ್ಯಮಟ್ಟದ ಎರಡು ದಾಸ ಸಾಹಿತ್ಯ ಸಮ್ಮೇಳನಗಳು ಆಯೋಜಿಸಿ ಬೀದರ್‍ನಲ್ಲಿ ದಾಸ ಸಾಹಿತ್ಯದ ಪ್ರಸಾರ ಮತ್ತು ಚಿಂತನೆಗಳಿಗೆ ತೀವ್ರ ಸ್ವರೂಪ ನೀಡಿ ಎಲ್ಲೆಡೆ ದಾಸ ಸಾಹಿತ್ಯವನ್ನು ಕೊಂಡೊಯ್ಯುತ್ತಿದ್ದಾರೆ ಎಂದರು.

ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಜನಪರ ಸಾಹಿತ್ಯ ಪರಿಷತ್ತಾಗಿಸುವ ನಿಟ್ಟಿನಲ್ಲಿ ವಿನೂತನ ಪ್ರಯೋಗಗಳು ರೂಪಿಸಿ ಮುನ್ನಡೆಯುತ್ತಿದ್ದು, ಸಾಮಾಜಿಕ ನ್ಯಾಯ, ಪ್ರತಿಭಾನ್ಯಾಯಕ್ಕೆ ಮನ್ನಣೆ ನೀಡಿ ಜಿಲ್ಲೆಯ ಎಲ್ಲ ಕನ್ನಡದ ಮನಸ್ಸುಗಳನ್ನು ಕಟ್ಟುವ ಪ್ರಯತ್ನದಲ್ಲಿದ್ದು ಎಲ್ಲರ ಸಹಾಯ ಸಹಕಾರ ಅಗತ್ಯ ಎಂದರು.

ಸಹಕಾರ ರತ್ನ ಪ್ರಶಸ್ತಿ ಪುರಸ್ಕøತ ಪಂಡಿತರಾವ ಚಿದ್ರಿ ಅವರು ಮಾತನಾಡಿ, ದಾಸಸಾಹಿತ್ಯ ಪ್ರಚಾರದ ಜೊತೆಗೆ ಗಡಿ ಪ್ರದೇಶದ ಜನರಲ್ಲಿ ಕನ್ನಡ ಪ್ರೇಮ, ಸಾಮಾಜಿಕ ಚಿಂತನೆ, ಶೈಕ್ಷಣಿಕ ಜಾಗೃತಿ ಮೂಡಿಸುವ ಹಲವು ಕೆಲಸಗಳು ಅಮರವಾಡಿ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿವೆ. ಈ ಎಲ್ಲ ಕೆಲಸಗಳ ಫಲ ಇಂದು ಅವರಿಗೆ ಸಮ್ಮೇಳನಾಧ್ಯಕ್ಷ ಪಟ್ಟ ಒದಗಿ ಬಂದಿದೆ ಎಂದರು.

ಬಸವ ಕೇಂದ್ರದ ಜಿಲ್ಲಾಧ್ಯಕ್ಷ ಶರಣಪ್ಪ ಮಿಠಾರೆ, ಮಾಳಪ್ಪ ಅಡಸಾರೆ, ಗುರುನಾಥ ದೇಶಮುಖ, ಪಂಡರಿ ಆಡೆ, ಶಾಲಿವಾನ ಉದಗಿರೆ ಸೇರಿದಂತೆ ಇನ್ನಿತರರು ಮಾತನಾಡಿದರು. ಕಸಾಪ ಕೋಶಾಧ್ಯಕ್ಷ ಶಿವಶಂಕರ ಟೋಕರೆ, ಪೀರಪ್ಪ ಔರಾದೆ, ಸಿದ್ದಾರೂಢ ಭಾಲ್ಕೆ, ಸಂಜು ಅಲ್ಲೂರೆ, ಜಗನ್ನಾಥ ಮೂಲಗೆ, ಅಮೃತರಾವ ಬಿರಾದಾರ, ರೇವಣಯ್ಯ ಮಠ, ಕಲ್ಯಾಣರಾವ ಶೆಂಬೆಳ್ಳೆ, ಬಸವರಾಜ ಮಸ್ಕಲೆ, ಜಗನ್ನಾಥ ದೇಶಮುಖ, ಅಂಬಾದಾಸ ನಳಗೆ, ಸಂದೀಪ ಪಾಟೀಲ್, ಚಂದ್ರಕಾಂತ ಘುಳೆ, ಪ್ರಕಾಶ ಅಲಮಾಜೆ, ಮಾದಪ್ಪ ಕೋಟೆ, ರವೀಂದ್ರ ಮುಕ್ತೆದಾರ್, ಸಂತೋಷ ಚಾಂಡೆಶ್ವರೆ, ಧನರಾಜ ಮಾನೆ, ದೇವಿದಾಸ ಮಡಿವಾಳ, ದಶೃಥ ವಾಘಮಾರೆ ಸೇರಿದಂತೆ ಇನ್ನಿತರರಿದ್ದರು.