
ಬಳ್ಳಾರಿ,ಮಾ.14: ಕರ್ತವ್ಯನಿರತ ಎಲ್ಲಾ ಮಹಿಳೆಯರು ಉತ್ತಮ ಕ್ಷಮತೆಯಿಂದ, ಠಾಣೆಯ ಎಲ್ಲಾ ಕೆಲಸಗಳಲ್ಲಿ ಭಾಗಿಯಾಗಲು ಹಾಗೂ ಹೆಚ್ಚಿನ ಜ್ಞಾನಗಳಿಸಲು ಸಬಲರಾಗಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜೀತ್‍ಕುಮಾರ್ ಬಂಡಾರು ಅವರು ಹೇಳಿದರು.
ಜಿಲ್ಲಾ ಪೊಲೀಸ್ ಇಲಾಖೆಯಿಂದ ಸೋಮವಾರ ಜಿಲ್ಲಾ ಪೊಲೀಸ್ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಮಹಿಳೆಯರ ಆರೋಗ್ಯ ಕುರಿತು ಅರಿವು ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರ ಬಲ ಹೆಚ್ಚಿಸಬೇಕು. ಮಹಿಳೆಯರ ಸಬಲೀಕರಣ, ಆರೋಗ್ಯ ಹಾಗೂ ಹಕ್ಕುಗಳ ಕುರಿತು ಅರಿವು ಹೊಂದಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎಸ್.ಆರ್.ಆಸ್ಪತ್ರೆಯ ಡಾ.ಲಕ್ಷ್ಮೀ ಪಾವನಿ ಅವರು ಮಾತನಾಡಿ, ಅನೇಕ ಮಹಿಳೆಯರು ವೈಯಕ್ತಿಕ ಜೀವನ ಹಾಗೂ ತಾವು ಕರ್ತವ್ಯ ನಿರ್ವಹಿಸುವಲ್ಲಿ ಮಾನಸಿಕ ಒತ್ತಡದಲ್ಲಿದ್ದು, ತಮ್ಮ ಆರೋಗ್ಯದ ಕಡೆ ಗಮನಹರಿಸಬೇಕು ಎಂದು ಹೇಳಿದರು.
ಆರೋಗ್ಯದಲ್ಲಿ ಏರುಪೇರು ಮಾಡಿಕೊಳ್ಳದಂತೆ ದಿನನಿತ್ಯ ಉತ್ತಮ ಆರೊಗ್ಯಕರ ಜೀವನಕ್ಕೆ ಬೇಕಾದ ಆಹಾರ ಪದ್ಧತಿ, ವ್ಯಾಯಾಮವನ್ನು ದಿನನಿತ್ಯ ರೂಢಿಸಿಕೊಳ್ಳಬೇಕು. ಮಹಿಳೆಯರು ಆತ್ಮಸ್ಥೈರ್ಯ ಹಾಗೂ ಇಚ್ಛಾಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಮತ್ತು ಒಗ್ಗಟ್ಟಿನಿಂದ ಕರ್ತವ್ಯ ನಿರ್ವಹಿಸಲು ಸಲಹೆಗಳನ್ನು ಹೊಂದಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಸ್.ಎಸ್.ಎ ಪ್ರಥಮ ದರ್ಜೆ ಕಾಲೇಜ್‍ನ ಉಪನ್ಯಾಸಕರಾದ ಕೆ.ಚೂಡಾಮಣಿ, ಬಳ್ಳಾರಿ ನಗರ ಉಪವಿಭಾಗದ ಡಿವೈಎಸ್‍ಪಿ ಕೆ.ಬಸವರಾಜ, ಡಿಸಿಆರ್‍ಬಿ ಘಟಕ ಡಿವೈಎಸ್‍ಪಿ ಎಸ್.ಟಿ.ಒಡೆಯರ್, ಸಿರುಗುಪ್ಪ ಉಪವಿಭಾಗ ವೆಂಕಟೇಶ ಸೇರಿದಂತೆ ಜಿಲ್ಲೆಯ ಎಲ್ಲಾ ಮಹಿಳಾ ಅಧಿಕಾರಿ ಮತ್ತು ಸಿಬ್ಬಂದಿಯವರು ಭಾಗವಹಿಸಿದ್ದರು.
One attachment • Scanned by Gmail