ಜಿಲ್ಲಾ ಪೆÇಲೀಸರ ಭರ್ಜರಿ ಕಾರ್ಯಾಚರಣೆ

ಸಂಜೆವಾಣಿ ನ್ಯೂಸ್
ಮೈಸೂರು: ಆ.12:- ಜಿಲ್ಲಾ ಪೆÇಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, 63 ಪ್ರಕರಣಗಳಲ್ಲಿ 1.34 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಇವುಗಳನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು.
ಮೈಸೂರಿನ ಜ್ಯೋತಿನಗರದಲ್ಲಿರುವ ಡಿಎಆರ್ ಕವಾಯತು ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಸ್ವತ್ತಗಳನ್ನು ವಾರಸುದಾರರಿಗೆ ಹಿಂದಿರುಗಿಸುವ ಕಾರ್ಯಕ್ರಮದಲ್ಲಿ ಎಸ್ಪಿ ಸೀಮಾ ಲಾಟ್ಕರ್ ಮಾತನಾಡಿ, ಜಿಲ್ಲಾ ಪೆÇಲೀಸ್ ವ್ಯಾಪ್ತಿಯ ವಿವಿಧ ಪೆÇಲೀಸ್ ಠಾಣೆಗಳಲ್ಲಿ 2023ನೇ ಸಾಲಿನ ಜನವರಿಯಿಂದ ಜುಲೈ ಮಾಹೆಯವರೆಗೆ ಪತ್ತೆ ಹಚ್ಚಿ ವಶಪಡಿಸಿಕೊಂಡಿರುವ ವಸ್ತು, ವಾಹನ ಮತ್ತು ಸಾಮಗ್ರಿಗಳನ್ನು ಹಿಂತಿರುಗಿಸಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ಲಾಭಕ್ಕಾಗಿ ಕೊಲೆ ಪ್ರಕರಣ-1, ದರೋಡೆ ಪ್ರಕರಣ-2, ಸುಲಿಗೆ ಪ್ರಕರಣ 4, ಸರಗÀಳ್ಳತನ 2, ಕಳ್ಳತನ ಪ್ರಕರಣಗಳು 38, ವಾಹನ ಕಳ್ಳತನ- 15, ವಂಚನೆ ಪ್ರಕರಣ 1 ಸೇರಿದಂತೆ ಒಟ್ಟು 63 ಪ್ರಕರಣಗಳಲ್ಲಿ 1,34,66,697 ಮೌಲ್ಯದ ಸ್ವತ್ತುಗಳನ್ನು ವಶಪಡಿಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ವಶಪಡಿಸಿಕೊಂಡಿರುವ ಸ್ವತ್ತಿನ ವಿವರ: 81.02 ಲಕ್ಷ ಮೌಲ್ಯದ 1 ಕೆ.ಜಿ 770 ಗ್ರಾಂ ಚಿನ್ನಾಭರಣ, 920 ಗ್ರಾಂ ಬೆಳ್ಳಿ, 12,62,147 ಹಣ, 36.23 ಲಕ್ಷ ಮೌಲ್ಯದ 22 ವಾಹನಗಳು, 80,800 ಮೌಲ್ಯದ ಹಾರ್ಡ್‍ವೇರ್ ಮತ್ತು ಎಲೆಕ್ಟ್ರಿಕ್ ವಸ್ತುಗಳು, 3.06 ಲಕ್ಷ ಮೌಲ್ಯದ 7 ಹಸು, 13 ಕುರಿಗಳು, 43 ಪಾರಿವಾಳಗಳು, 1 ಲಕ್ಷ ಮೌಲ್ಯದ ದೇವರ ವಿಗ್ರಹಗಳು, 6.92 ಲಕ್ಷ ಮೌಲ್ಯದ ರೈತ ಉಪಯೋಗಿ ವಸ್ತುಗಳು ಹಾಗೂ ಸಿಇಐಆರ್ ಪೆÇ?ರ್ಟಲ್ ಮುಖಾಂತರ ವಿವಿಧ ಕಂಪನಿಯ 25 ಲಕ್ಷ ಮೌಲ್ಯದ ಒಟ್ಟು 192 ಮೊಬೈಲ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ವಿವರಿಸಿದರು.
ಇದೇ ವೇಳೆ ವಶಪಡಿಸಿಕೊಂಡ ಸ್ವತ್ತಗಳನ್ನು ವಾರಸುದಾರರಿಗೆ ದಕ್ಷಿಣ ವಲಯ ಡಿಐಜಿ ಡಾ.ಎಂ.ಬಿ. ಬೋರಲಿಂಗಯ್ಯ ಹಿಂದಿರುಗಿಸಿದರು. ಅಲ್ಲದೆ, ಪ್ರಕರಣಗಳನ್ನು ಪತ್ತೆ ಹಚ್ಚಿದ ಪೆÇಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಪ್ರಶಂಸನಾ ಪತ್ರ ವಿತರಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು.
ಇತ್ತೀಚಿನ ದಿನಗಳಲ್ಲಿ ನಗರದ ಪ್ರದೇಶಗಳಲ್ಲಿ ಮಾತ್ರವಲ್ಲದೇ, ನಗರದ ಹೊರವಲಯ ಮತ್ತು ಗ್ರಾಮೀಣ ಪ್ರದೇಶದಲ್ಲಿಯೂ ಸರಗಳ್ಳತನಗಳು ನಡೆಯುತ್ತಿವೆ. ನಗರ ಪ್ರದೇಶದಲ್ಲಿ ಅಲರ್ಟ್ ಆಗಿರುತ್ತಾರೆ ಎಂದು ತಿಳಿದಿರುವ ಸರಗಳ್ಳರು, ಗ್ರಾಮೀಣ ಭಾಗದಲ್ಲಿ ಹಾಗೂ ನಗರದ ಹೊರವಲಯಗಳಲ್ಲಿ ಇರುವ ಜಮೀನುಗಳಲ್ಲಿ ಕೆಲಸ ಮಾಡುವ, ದನ, ಕುರಿ ಕಾಯುವ ಮಹಿಳೆಯರನ್ನು ಗುರಿಯಾಗಿಸಿಕೊಂಡು ಕಳವು ಮಾಡುತ್ತಿದ್ದಾರೆ. ಜಮೀನುಗಳಲ್ಲಿ, ಹೊರವಲಯದ ರಸ್ತೆಗಳಲ್ಲಿ ಸಿಸಿ ಟಿವಿ ಇರುವುದಿಲ್ಲ ಎಂದು ಹೀಗೆ ಮಾಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು ನಮ್ಮ ಎಲ್ಲ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಸೂಚನೆ ನೀಡಲಾಗಿದೆ ಎಂದು ಬೋರಲಿಂಗಯ್ಯ ಹೇಳಿದರು.
ಗಾಂಜಾ ನಿಯಂತ್ರಣಕ್ಕೂ ಕ್ರಮ ಜರುಗಿಸಿದ್ದು, ಪಿರಿಯಾಪಟ್ಟಣದ ಬೈಲುಕುಪ್ಪೆಯಲ್ಲಿ 30 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ. ಮಡಿಕೇರಿಯಲ್ಲಿ ಗಾಂಜಾ, ಮಾದಕ ವಸ್ತು ಪ್ರಕರಣಗಳ ಸಂಬಂಧ 20 ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ ಎಂದರು.
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಅಪಘಾತಗಳನ್ನು ನಿಯಂತ್ರಣ ಮಾಡಲಾಗಿದೆ. ಹುಣಸೂರು ರಸ್ತೆ, ತಿ.ನರಸೀಪುರ ಮತ್ತು ಶ್ರೀರಂಗಪಟ್ಟಣ, ನಾಗಮಂಗಲ ರಸ್ತೆಗಳಲ್ಲಿ ಬೈಕ್ ಅಪಘಾತಗಳು ಹೆಚ್ಚಿದ್ದು, ಇದನ್ನು ನಿಯಂತ್ರಿಸಲು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.
ಹೆಚ್ಚುವರಿ ಎಸ್ಪಿ ಡಾ.ಬಿ.ಎನ್.ನಂದಿನಿ, ಡಿವೈಎಸ್ಪಿಗಳಾದ ಗೋವಿಂದರಾಜು, ಡಾ.ಸುಮಿತ್ ಮೊದಲಾದವರು ಇದ್ದರು.