ಜಿಲ್ಲಾ ಪತ್ರಕರ್ತರ ಕ್ರೀಡಾಕೂಟಕ್ಕೆ ಚಾಲನೆ

ಸಂಜೆವಾಣಿ ನ್ಯೂಸ್
ಮೈಸೂರು: ಜು.16:- ಮೈಸೂರಿನ ಮಹಾರಾಜ ಕಾಲೇಜಿನ ಸ್ಪೋಟ್ರ್ಸ್ ಪೆವಿಲಿಯನ್ ಮೈದಾನದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಎರಡು ದಿನಗಳ ಕ್ರೀಡಾಕೂಟಕ್ಕೆ ಇಂದು ಚಾಲನೆ ದೊರಕಿತು. ಕ್ರೀಡಾಕೂಟವನ್ನು ಬ್ಯಾಟ್ ಬೀಸುವ ಮೂಲಕ ಕೆ.ಆರ್. ಕ್ಷೇತ್ರದ ಶಾಸಕ ಶ್ರೀವತ್ಸ, ಜಿ.ಪಂ ಸಿಇಓ ಕೆ.ಎಂ. ಗಾಯತ್ರಿ, ಮುಡಾ ಆಯುಕ್ತ ಜಿ.ಡಿ.ದಿನೇಶ್, ಅಂತಾರಾಷ್ಟ್ರೀಯ ಖೋ ಖೋ ಆಟಗಾರ್ತಿ ವೀಣಾ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಜಿ.ಪಂ ಸಿಇಓ ಕೆ.ಎಂ. ಗಾಯಿತ್ರಿ ಹಿಂದಿನ ದಿನಗಳಲ್ಲಿ ಪತ್ರಿಕೆಯನ್ನು ಹೊರತರುವುದು ಎಂದರೆ ಸಾಮಾನ್ಯದ ಮಾತಲ್ಲ, ಅಂದು ತಡರಾತ್ರಿವರೆವಿಗೂ ಅಕ್ಷರಗಳನ್ನು ಜೋಡಿಸಿ ಮುದ್ರಣ ಮುಗಿದ ಬಳಿಕವಷ್ಟೆ ಮನೆಗೆ ತೆರಳುತ್ತಾರೆ, ಆ ವೇಳೆಗಾಗಲೇ ಮಧ್ಯರಾತ್ರಿಯೂ ಮೀರಿ ಹೋಗಿರುತ್ತದೆ. ಆದ್ದರಿಂದ ಇವರು ಕುಟುಂಬಕ್ಕೂ ಸಹ ಸಮಯ ನೀಡದ ಸ್ಥಿತಿ ಪತ್ರಕರ್ತನಿಗೆ ಬಂದೊದಗಿತ್ತು. ಪತ್ರಿಕಾ ಒತ್ತಡ ಜೀವನದಲ್ಲಿ ಕುಟುಂದ ಸದಸ್ಯರೊಂದಿಗೆ ಕಾಲ ಕಳೆಯರು ಕ್ರೀಡಾಕೂಟ ಆಯೋಜಿಸಿರುವುದು ಸ್ವಾಗತಾರ್ಹ ಎಂದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಎಸ್.ಟಿ. ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಎಂ.ಸುಬ್ರಮಣ್ಯ, ನಗರ ಕಾರ್ಯದರ್ಶಿ ರಂಗಸ್ವಾಮಿ, ಉಪಾಧ್ಯಕ್ಷ ಎಂ.ಎಸ್.ಬಸವಣ್ಣ, ಖಜಾಂಚಿ ನಾಗೇಶ್ ಪಾಣತ್ತಲೆ, ರಾಜ್ಯ ಸಮಿತಿ ಸದಸ್ಯ ಬಿ.ರಾಘವೇಂದ್ರ, ಕಾರ್ಯಕಾರಿ ಸಮಿತಿ ಸದಸ್ಯರಾದ ಕೃಷ್ಣೋಜಿರಾವ್, ಕೆ.ಪಿ.ನಾಗರಾಜ್, ಮಾಚಮ್ಮ ಮಲ್ಲಿಗೆ ಶಿವಮೂರ್ತಿ ಜುಪ್ತಿಮಠ್, ಬೀರೇಶ್, ಜುಪ್ತಿಮಠ್, ರಂಗಸ್ವಾಮಿ ಮಾದಾಪುರ, ಸುರೇಶ್, ಹಿರಿಯ ಪತ್ರಕರ್ತರಾದ ಕಾಶಿನಾಥ್, ಪ್ರಭುರಾಜನ್, ಪ್ರಗತಿ ಗೋಪಾಲಕೃಷ್ಣ ಇನ್ನು ಮುಂತಾದವರು ಹಾಜರಿದ್ದರು.
ಅಧ್ಯಕ್ಷರ ತಂಡ ಗೆಲುವು:
ಕ್ರಿಕೆಟ್ ಪಂದ್ಯಾವಳಿಯಲ್ಲಿ ದಿಲೀಪ್ ಚೌಡಳ್ಳಿ(54*) ಅವರ ಭರ್ಜರಿ ಬ್ಯಾಟಿಂಗ್ ಹಾಗೂ ರಾಕೇಶ್ ಅವರ ಆಕರ್ಷಕ ಬೌಲಿಂಗ್ ನೆರವಿನಿಂದ ಅಧ್ಯಕ್ಷರ ಇಲವೆನ್ ತಂಡ 3 ರನ್‍ಗಳ ರೋಚಕ ಗೆಲುವು ಸಾಧಿಸಿತು.
ಮೈಸೂರು ವಿವಿ ಸ್ಪೋಟ್ರ್ಸ್ ಪೆವಿಲಿಯನ್ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಅಧ್ಯಕ್ಷರ ಇಲವೆನ್ ತಂಡ 8 ಓವರ್ಗಳಲ್ಲಿ 1 ವಿಕೆಟ್ ನಷ್ಟಕ್ಕೆ 88 ರನ್‍ಗಳಿಸಿತು. ತಂಡದ ಪರ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಖಿಗಿ9 ವರದಿಗಾರ ದಿಲೀಪ್ ಚೌಡಳ್ಳಿ(54)ರನ್‍ಗಳಿಸಿ ಮಿಂಚಿದರು. ಬಳಿಕ 89 ರನ್‍ಗಳ ಟಾರ್ಗೆಟ್ ಚೇಸ್ ಮಾಡಿದ ಉಪಾಧ್ಯಕ್ಷರ ಇಲವೆನ್ ತಂಡ, ನಿಗದಿತ 8 ಓವರ್ಗಳಲ್ಲಿ 9 ವಿಕೆಟ್‍ಗಳನ್ನ ಕಳೆದುಕೊಂಡು 85 ರನ್‍ಗಳಿಸುವ ಮೂಲಕ 3 ರನ್‍ಗಳ ವಿರೋಚಿತ ಸೋಲು ಕಂಡಿತು. ಒಂದು ಹಂತದಲ್ಲಿ ಸುಲಭವಾಗಿ ಚೇಸ್ ಮಾಡುವ ಸೂಚನೆ ನೀಡಿದ್ದ ಉಪಾಧ್ಯಕ್ಷರ ಇಲವೆನ್ ತಂಡ ಸತತವಾಗಿ ವಿಕೆಟ್‍ಗಳನ್ನ ಕಳೆದುಕೊಂಡು ಸೋಲಿನ ಆಘಾತ ಕಂಡಿತು. ಉತ್ತಮ ಬೌಲಿಂಗ್ ದಾಳಿ ನಡೆಸಿದ ರಾಕೇಶ್ 3 ವಿಕೆಟ್‍ಗಳನ್ನ ಪಡೆದು ತಂಡದ ಗೆಲುವಿಗೆ ಕಾರಣರಾದರು. ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್‍ನ ಆಲ್ರೌಂಡ್ ಪ್ರದರ್ಶನ ನೀಡಿದ ದಿಲೀಪ್ ಚೌಡಳ್ಳಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.