ಜಿಲ್ಲಾ ಪಂಚಾಯಿತಿಗೆ ಮೂಲಸೌಲಭ್ಯ ಭಾಗ್ಯ

ಕೋಲಾರ,ಮೇ,೨೪:ನಗರದ ಗ್ರಾಮೀಣ ಕೋಲಾರ ಜಿಲ್ಲೆಯ ಆಡಳಿತ ಕೇಂದ್ರವಾದ ಕೋಲಾರ ಜಿಲ್ಲಾ ಪಂಚಾಯಿತಿ ಕಚೇರಿ ಮೂಲಭೂತ ಸೌಲಭ್ಯಗಳಿಲ್ಲದೇ ಕೊರಗುತ್ತಿದೆ ಎಂಬ ಆರೋಪದಿಂದ ಮುಕ್ತವಾಗಿ ಇದೀಗ ಕಚೇರಿಗೆ ಸಕಲ ಸೌಲಭ್ಯಗಳ ಶುಕ್ರದೆಸೆ ಬಂದಿದ್ದು, ಹೊರಾಂಗಣ,ರಸ್ತೆಗಳು ಕಂಗೊಳಿಸುವಂತೆ ನವೀಕರಣ ಮಾಡಲಾಗಿದೆ.
ಬಿಜೆಪಿ ಸರ್ಕಾರದಲ್ಲಿ ಜಿಪಂಗೆ ಸದಸ್ಯರ ಚುನಾವಣೆ ನಡೆಯಬೇಕಾಗಿತ್ತು, ವಿಧಾನಸಭಾ ಚುನಾವಣೆ ನಡೆಸುವ ದೃಷ್ಟಿಯಿಂದ ಜಿಪಂ ಸದಸ್ಯರ ಚುನಾವಣೆ ಮುಂದೂಡಿದ ಕಾರಣ ಜಿಪಂಗೆ ಬಂದ ಸದಸ್ಯರ ಅನುದಾನದಲ್ಲಿ ಒಳಸಿಕೊಂಡು ಜಿಪಂ ಮುಂಭಾಗದಲ್ಲಿ ರಸ್ತೆ ಸೇರಿದಂತೆ ಆವರಣವನ್ನು ಅಭಿವೃದ್ಧಿಪಡಿಸಿದ್ದಾರೆ.
ಹೆಸರಿಗೆ ಜಿಪಂ ಕಚೇರಿ ದೊಡ್ಡದಾಗಿ ಕಾಣುತ್ತಿದ್ದರೂ ಮುಂಭಾಗದ ಒಳಾಂಗಣ ಹಾಗೂ ಹೊರಾಂಗಣ ಅಭಿವೃದ್ಧಿಯಾಗದೆ ಮಣ್ಣು ರಸ್ತೆಗಳು ಮತ್ತು ಮಣ್ಣು ಮೈದಾನದ್ದಂತಿತ್ತು, ಹಾಕಿದ ಡಾಂಬರೀಕರಣ ಕಿತ್ತುಹೋಗಿ ವರ್ಷಗಳೇ ಕಳೆದಿತ್ತು, ಜಿಪಂನಲ್ಲಿ ಜನಪ್ರತಿನಿಧಿಗಳ ಆಡಳಿತವಿದ್ದಾಗ ತಮ್ಮ ಕಚೇರಿ ಅಭಿವೃದ್ಧಿಪಡಿಸುವುದಕ್ಕೆ ತಮ್ಮ ಕ್ಷೇತ್ರಗಳ ಅಭಿವೃದ್ಧಿ ಹೆಸರಿನಲ್ಲಿ ಹಣವನ್ನು ಕೊಳ್ಳೆಹೊಡೆದಿದ್ದೆ ಸದಸ್ಯರ ಸಾಧನೆಯಾಗಿತ್ತು.
ಜಿಪಂನಲ್ಲಿ ಜನಪ್ರತಿನಿಧಿಗಳ ಅಧಿಕಾರ ಮುಕ್ತಾಯವಾಗುತ್ತಿದ್ದಂತೆ ಕೇಂದ್ರ ಸರ್ಕಾರದಿಂದ ಬರುವ ಅನುದಾನವು ನಿಂತುಹೋಯಿತು, ಆಡಳಿತ ಮುಕ್ತಾಯ ಹಂತದಲ್ಲಿ ಬಂದ ಅನುದಾವನ್ನು ಬಳಸಿಕೊಂಡ ಈಗಿನ ಸಿಇಒ ಯುಕೇಶ್‌ಕುಮಾರ್ ಇರುವ ಕಚೇರಿಯನ್ನಾದರೂ ಸ್ವಲ್ಪಮಟ್ಟಿಗೆ ಸರಿಪಡಿಸಿಕೊಳ್ಳೋಣವೆಂದು ೬೫ ಲಕ್ಷ ರೂ.ಗಳಲ್ಲಿ ಹೊಸದಾಗಿ ಕಚೇರಿ ಮುಂಭಾಗ ಡಾಂಬರೀಕರಣ ರಸ್ತೆ, ಮೈದಾನಕ್ಕೆ ಸಿಮೆಂಟೀಕರಣ, ಕಾಂಪೌಂಡ್ ಗೋಡೆಗೆ ಸಾರ್ವಜನಿಕರನ್ನು ಆಕರ್ಷಿಸುವ ರೀತಿಯಲ್ಲಿ ಕೈಬರಹಗಳ ಬರವಣಿಗೆ ಮಾಡಿರುವುದರಿಂದ ಜಿಪಂ ಕಚೇರಿ ಎಂಬುದು ಸಾರ್ವಜನಿಕರ ಕಣ್ಣಿಗೆ ಕಾಣುವಂತಾಗಿದೆ.
ಇದರ ಜೊತೆಗೆ ಕಳೆದ ವರ್ಷವೇ ಸಿಇಒ ಕಚೇರಿ ನವೀಕರಣ ಸೇರಿದಂತೆ ಜಿಪಂ ಕಚೇರಿಯು ನವೀಕರಣಗೊಂಡಿದೆ. ಜಿಪಂ ಕಚೇರಿಯ ಮುಖ್ಯದ್ವಾರದ ಮುಂಭಾಗದಲ್ಲಿ ಪಾರ್ಕಿಂಗ್‌ಗಾಗಿ ವ್ಯವಸ್ಥೆ ಕಲ್ಪಿಸಲಾಗಿದೆ ಹಾಗೂ ಜಿಪಂ ಕಚೇರಿ ಆವರಣದಲ್ಲಿ ಸಾರ್ವಜನಿಕರು ಕುಳಿತುಕೊಳ್ಳಲು ಆಸನದ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಒಟ್ಟಾರೆಯಾಗಿ ಜಿಪಂ ಕಚೇರಿ ಮುಂಭಾಗ ನವೀಕರಣಗೊಂಡಿರುವುದರಿಂದ ಸಾರ್ವಜನಿಕರ ಕಣ್ಣಿಗೆ ಹೊಸವ್ಯವಸ್ಥೆ ಕಂಡಂತೆ ಆಗಿದೆ.


ಜಿಪಂ ಸದಸ್ಯರ ಆಡಳಿತ ಮಂಡಳಿ ಇಲ್ಲದೆ ಇರುವುದರಿಂದ ಅನುದಾನವು ನಿಲ್ಲಿಸಲಾಗಿದೆ. ಆಡಳಿತ ಮಂಡಳಿ ಕೊನೆಗೊಂಡ ಅವಧಿಯಲ್ಲಿ ಬಂದ ಅನುದಾನದ ೬೫ ಲಕ್ಷ ರೂ.ಗಳಲ್ಲಿ ಕಚೇರಿ ಮುಂಭಾಗ ಇದ್ದ ಅವ್ಯವಸ್ಥೆಯನ್ನು ಸರಿಪಡಿಸಲಾಗಿದೆ. ಇನ್ನೂ ಕಾಮಗಾರಿ ಬಾಕಿಯಿದೆ. ಆದರೆ ಅನುದಾನ ಇಲ್ಲ ಬಂದ ಅನುದಾನ ವ್ಯರ್ಥವಾಗದೆ ಗುತ್ತಿಗೆ ನೀಡಿ ಗುತ್ತಿಗೆದಾರನಿಗೆ ಹೆಚ್ಚು ಆದಾಯ ಇಲ್ಲದ್ದಂತೆ ಎಲ್ಲ ಅನುದಾನಕ್ಕೂ ಕಾಮಗಾರಿ ನಡೆಸಲಾಗಿದೆ.

  • ಯುಕೇಶ್‌ಕುಮಾರ್, ಜಿಪಂ ಸಿಇಒ, ಕೋಲಾರ.