ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಕಾನೂನು ಅಭಿರಕ್ಷಕರ ಕಛೇರಿ ಆರಂಭ

ಚಾಮರಾಜನಗರ: ಮಾ.31:- ನಗರದ ಜಿಲ್ಲಾ ನ್ಯಾಯಾಲಯದ ಆವರಣದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಟ್ಟಡದಲ್ಲಿ ನೂತನವಾಗಿ ಕಾನೂನು ಅಭಿರಕ್ಷಕರಕಛೇರಿ ಸ್ಥಾಪಿಸಿ, ಕಛೇರಿಯ ಉದ್ಘಾಟನೆ ಕಾರ್ಯಕ್ರಮವನ್ನು ನಡೆಸಲಾಯಿತು.
ಈ ಕಾರ್ಯಕ್ರಮವನ್ನು ಶ್ರೀ ಪ್ರಸನ್ನ ಬಿ ವರಲೇ, ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳು, ಕರ್ನಾಟಕ ಉಚ್ಚ ನ್ಯಾಯಾಲಯ ಮತ್ತು ಪ್ರಧಾನ ಪೋಷಕರು, ಕರ್ನಾಟಕರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು ರವರು ವಿ.ಸಿ. ಮೂಲಕ “ಕಾನೂನು ಅಭಿರಕ್ಷಕರ ಕಛೇರಿಯನ್ನು ಉದ್ಘಾಟನೆ ಮಾಡಿ, ಮಾತನಾಡಿ, ಸರ್ವರಿಗೂ ನ್ಯಾಯ ಎಂಬ ಪರಿಕಲ್ಪನೆ ಅಡಿಯಲ್ಲಿ ಜನಸಾಮಾನ್ಯರ ಅನುಕೂಲಕ್ಕಾಗಿ ಶೀಘ್ರವಾಗಿ ಹಾಗೂ ತ್ವರಿತವಾಗಿ ಪ್ರಕರಣವನ್ನು ಇತ್ಯರ್ಥವಾಗಬೇಕು ಹಾಗೂ ಈ ದಿಶೆಯಲ್ಲಿ ನ್ಯಾಯಒದಗಿಸಬೇಕೆಂಬ ಆಶಯದಡಿಯಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕರ್ನಾಟಕರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ರವರ ನಿರ್ದೇಶನದ ಮೇರೆಗೆ ಕಾನೂನು ಅಭಿರಕ್ಷಕರ ಕಛೇರಿಯನ್ನು ಸ್ಥಾಪಿಸಿದ್ದು, ಇದರಿಂದ ಪ್ರಾಧಿಕಾರದ 1987 ಕಾಯ್ದೆ ಕಲಂ 12ರಡಿ ಸೂಚಿಸಲಾದ ಅರ್ಹತ ಮಾನದಂಡದಡಿಯಲ್ಲಿದಸ್ತಗಿರಿ ಪೂರ್ವ, ದಸ್ತಗಿರಿ, ರಿಮ್ಯಾಂಡ್ಕ್ರಿ ಮಿನಲ್ಮೇಲ್ಮನವಿ ಹಂತಗಳಲ್ಲಿ ಆರೋಪಿಗಳಿಗೆ ಕಾನೂನು ನೆರವುಒದಗಿಸುವ ನಿಟ್ಟಿನಲ್ಲಿ ಕಾನೂನು ಸೇವೆಗಳನ್ನು ಒದಗಿಸುತ್ತಾ, ಕ್ರಿಮಿನಲ್ ಪ್ರಕರಣವನ್ನು ಸಕಾಲದಲ್ಲಿ ಶೀಘ್ರವಾಗಿ ಇತ್ಯರ್ಥಪಡಿಸಲು ಹಾಗೂ ಸಂಘರ್ಷಕ್ಕೊಳಗಾದವರಿಗೆ ಕ್ರಿಮಿನಲ್ ಪ್ರಕರಣಗಳಲ್ಲಿ ಸಕ್ಷಮ ನ್ಯಾಯಾಲಯದಲಿ ್ಲಉಚಿತ ಕಾನೂನು ನೆರವನ್ನು ಶೀಘ್ರವಾಗಿ ನೀಡಲು ಈ ಕಛೇರಿಯಲ್ಲಿ ಸ್ಥಾಪಿಸಿದ್ದು, ಇದರ ಸದುಪಯೋಗವನ್ನು ಜನ ಸಾಮಾನ್ಯರು ಪಡೆದುಕೊಳ್ಳಬೇಕಾಗಿದೆ ಎಂದುಅಭಿಪ್ರಾಯಪಟ್ಟರು.
ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯನ್ಯಾಯಾಧೀಶರು ಮತ್ತು ಕಾರ್ಯನಿರ್ವಾಹಕ ಅಧ್ಯಕ್ಷರಾದ ಬಿ.ವೀರಪ್ಪ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ನ್ಯಾಯಾಧೀಶರಾದ ಕೆ. ಸೋಮಶೇಖರ್, ಕರ್ನಾಟಕ ಉಚ್ಚ ನ್ಯಾಯಾಲಯ ಮತ್ತು ಅಧ್ಯಕ್ಷರು, ಕರ್ನಾಟಕ ಉಚ್ಚ ನ್ಯಾಯಾಲಯದ ಕಾನೂನು ಸೇವೆಗಳ ಸಮಿತಿರವರುಗಳು ವಿ.ಸಿ. ಮೂಲಕ ಹಾಜರಿದ್ದು, ಚಾಮರಾಜನಗರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಬಿ.ಎಸ್.ಭಾರತಿ, ಚಾಮರಾಜನಗರ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತುಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಗಳಾದಶ್ರೀಧರ.ಎಂ., ನ್ಯಾಯಾಂಗ ಇಲಾಖೆ ಅಧಿಕಾರಿಗಳು ಹಾಗೂ ನ್ಯಾಯಾಂಗ ನೌಕರರು, ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳು ಹಾಗೂ ಕಾನೂನು ಅಭಿರಕ್ಷಕರಕಛೇರಿಗೆ ನೂತನವಾಗಿಆಯ್ಕೆಯಾಗಿರುವ ವಕೀಲರುಗಳಾದ ಸಿ.ಎನ್. ರವಿಕುಮಾರ್, ಸೌಮ್ಯವತಿ ಬಿ.ಎಂ. ಹಾಗೂ ಮಹಾಲಿಂಗಸ್ವಾಮಿ ಹಾಜರಿದ್ದರು.