ಜಿಲ್ಲಾ ನಿಯಂತ್ರಣಕೊಠಡಿಯಲ್ಲಿ 24 ಗಂಟೆ ನಿಗಾ

ಬಾಗಲಕೋಟೆ, ಏ. 18 :ಜಿಲ್ಲಾಡಳಿತ ಭವನದಲ್ಲಿರುವಜಿಲ್ಲಾ ಪಂಚಾಯತ ಸಭಾಭವನದಲ್ಲಿ ಸ್ಥಾಪಿಸಲಾಗಿರುವಜಿಲ್ಲಾ ನಿಯಂತ್ರಣಕೊಠಡಿಯಲ್ಲಿಚುನಾವಣಾ ಕಾರ್ಯಗಳಿಗೆ ನಿಯೋಜಿಸಲಾದ ವಾಹನಗಳಿಗೆ ಜಿಪಿಎಸ್‍ಉಪಕರಣ ಅಳವಡಿಸಿ ದಿನದ 24 ಗಂಟೆಗಳ ಕಾಲ ನಿಗಾ ವಹಿಸಲಾಗುತ್ತಿದೆಎಂದುಜಿಲ್ಲಾ ನಿಯಂತ್ರಣಕೋಶದ ನೋಡಲ್‍ಅಧಿಕಾರಿಅಮರೇಶ ನಾಯಕ ತಿಳಿಸಿದ್ದಾರೆ.
ಲೋಕಸಭಾಚುನಾವಣೆ ಮಾಧರಿ ನೀತಿ ಸಂಹಿತೆ ಹಿನ್ನಲೆಯಲ್ಲಿ ಪ್ಲೈಯಿಂಗ್ ಸ್ಕ್ವಾಡ್‍ತಂಡ, ವಿಡಿಯೋಕಣ್ಗಾವಲುತಂಡ, ಸೆಕ್ಟರ ಅಧಿಕಾರಿಗಳ ತಂಡಗಳಿಗೆ ಚುನಾವಣಾ ಮತಗಟ್ಟೆಕ್ಷೇತ್ರ ಪರಿಶೀಲನೆ, ಕ್ಷೇತ್ರ ಭೇಟಿಗಾಗಿಚುನಾವಣಾಕರ್ತವ್ಯಕ್ಕೆ ನಿಯೋಜಿಸಲಾದ ವಾಹನಗಳ ಮಾನಿಟರಿಂಗ ಮಾಡಲುಜಿಪಿಎಸ್‍ಉಪಕರಣ ಅಳವಡಿಸಲಾಗಿದೆ. ವಿವಿಧ ತಂಡಗಳ ಕಾರ್ಯವೈಖರಿಗಳನ್ನು ನಿಯಂತ್ರಣಕೊಠಡಿಯಲ್ಲಿಯೇ ವಾಹನಗಳ ಚಲನವಲಗಳ ನೈಜ ಸ್ಥಿತಿಗಳನ್ನು ಪರಿಶೀಲಿಸಿ ಸಲಹೆ ಸೂಚನೆ ನೀಡಲಾಗುತ್ತಿದೆಎಂದು ತಿಳಿಸಿದ್ದಾರೆ.
ಚುನಾವಣೆ ಪ್ರಕ್ರಿಯೆಗೆಎಪ್‍ಎಸ್‍ಟಿ ತಂಡಗಳಿಗೆ 66 ವಾಹನ, ವಿಎಸ್‍ಟಿ ತಂಡಗಳಿಗೆ 7, ಸೆಕ್ಟರ ಅಧಿಕಾರಿಗಳಿಗೆ 15, ಪೊಲೀಸ್ ಅಧಿಕಾರಿಗಳಿಗೆ 36 ಹಾಗೂ ಎಸ್‍ಎಸ್‍ಟಿ ತಂಡಗಳಿಗೆ 2 ಸೇರಿಒಟ್ಟು 126 ವಾಹನಗಳಿಗೆ ಜಿಪಿಎಸ್‍ಉಪಕರಣ ಅಳವಡಿಸಲಾಗಿದೆ. ಇದರಿಂದ ಪ್ರತಿಯೊಂದು ವಾಹನಗಳ ಚಲನವಲನ, ಮತಗಟ್ಟೆಗಳ ಕ್ಷೇತ್ರ ಪರಿಶೀಲನೆ ಕಾರ್ಯಚುರುಕುಗೊಂಡಿದ್ದು, ಸಾಕಷ್ಟು ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲೆಯಎಲ್ಲ ವಿಧಾನಸಭಾ ಮತಕ್ಷೇತ್ರಗಳು ಸೇರಿಒಟ್ಟು 26 ಕಡೆಗಳಲ್ಲಿ ಚೆಕ್‍ಪೋಸ್ಟಗಳನ್ನು ಸ್ಥಾಪಿಸಲಾಗಿದ್ದು, ಮುಧೋಳ, ತೇರದಾಳ, ಜಮಖಂಡಿ, ಬೀಳಗಿ ಮತಕ್ಷೇತ್ರಗಳಲ್ಲಿ ತಲಾ 3 ಹಾಗೂ ಬಾದಾಮಿ, ಬಾಗಲಕೋಟೆ, ಹುನಗುಂದ ಮತಕ್ಷೇತ್ರಗಳಲ್ಲಿ ತಲಾ 4 ಚೆಕ್‍ಪೋಸ್ಟ ಹಾಗೂ ನರಗುಂದಮತಕ್ಷೇತ್ರದಲ್ಲಿ 2 ಚೆಕ್‍ಪೋಸ್ಟಗಳನ್ನು ಸ್ಥಾಪಿಸಲಾಗಿದೆ. ಪ್ರತಿಚೆಕ್‍ಪೋಸ್ಟಗೆ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ. ಅವುಗಳ ದೃಶ್ಯಾವಳಿಗಳ ಪ್ರಸಾರ ನಿಯಂತ್ರಣಕೊಠಡಿಯಲ್ಲಿ ವೀಕ್ಷಿಸುವ ವ್ಯವಸ್ಥೆ ಮಾಡಲಾಗಿದೆಚೆಕ್‍ಪೋಸ್ಟ ಮೂಲಕ ಹಾದು ಹೋಗುವ ಎಲ್ಲ ವಾಹನಗಳ ದೃಶ್ಯವನ್ನು ವೀಕ್ಷಿಸಬಹುದಾಗಿದೆ. ಸಿಬ್ಬಂದಿಗಳ ಕಾರ್ಯವೈಖರಿ ಮೇಲೆ ಸಹ ನಿಗಾ ಇಡಲಾಗುತ್ತಿದೆಎಂದು ನೋಡಲ್‍ಅಧಿಕಾರಿಅಮರೇಶ ನಾಯಕ ತಿಳಿಸಿದ್ದಾರೆ.