ಜಿಲ್ಲಾ-ತಾಲೂಕು ಪಂಚಾಯತ್ ಚುನಾವಣೆ:ಆರು ತಿಂಗಳು ವಿಳಂಭ ಸಾಧ್ಯ?

ರಾಯಚೂರು ಜೂ ೨೩:-ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆ ಮುಂದಿನ ಆರು ತಿಂಗಳು ನಡೆಯುವುದು ಅಸಂಭ ಎನ್ನುವ ಮುನ್ಸೂಚನೆ ರಾಜ್ಯ ಸರಕಾರ ನೀಡಿದೆ.
ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಅಧಿಕಾರ ಅವಧಿ ಪೂರ್ಣಗೊಂಡ ಒಂದು ವರ್ಷ ಕಳೆಯುತ್ತಿದ್ದರೂ ರಾಜ್ಯ ಸರಕಾರ ಚುನಾವಣೆ ನಡೆಸಲು ಹಿಂದೇಟು ಹಾಕುತ್ತಿದೆ.ಕಳೆ ಕೆಲ ತಿಂಗಳುಗಳ ಹಿಂದೆ ರಾಜ್ಯ ಹೈ ಕೋರ್ಟ್ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಗೆ ಸಂಬಂಧಿಸಿ ಮಹತ್ವದ ಆದೇಶ ಹೊರಡಿಸಿತ್ತು. ಮುಂದಿನ ಮೂರು ತಿಂಗಳಲ್ಲಿ ಚುನಾವಣೆ ನಡೆಸುವಂತೆ ರಾಜ್ಯ ಸರಕಾರಕ್ಕೆ ಸೂಚಿಸಿತ್ತು. ಆದರೆ, ಈ ಬಗ್ಗೆ ರಾಜ್ಯ ಸರಕಾರ ಇನ್ನೂವರಿಗೆ ಯಾವುದೆ ಕ್ರಮ ಕೈಗೊಳ್ಳದೆ.ಈಗ ಪಂಚಾಯತ್ ರಾಜ್ ಸೀಮಾ ವಿಸ್ತರಣೆ ಆಯೋಗದ ಅವಧಿ ಮತ್ತೆ ಆರು ತಿಂಗಳ ಕಾಲ ವಿಸ್ತರಿಸುವ ಮೂಲಕ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆ ಅತಂತ್ರಕ್ಕೆ ಸಿಕ್ಕುವಂತೆ ಮಾಡಿದೆ.
ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಕ್ಷೇತ್ರಗಳ ಮೀಸಲಾತಿಯನ್ನು ಈ ಹಿಂದೆ ಚುನಾವಣೆ ಆಯೋಗ ನಿಗದಿಗೊಳಿಸಿತ್ತು. ಆದರೆ, ರಾಜ್ಯ ಸರಕಾರಕ್ಕೆ ತಕ್ಷಣ ಚುನಾವಣೆ ನಡೆಸಲು ಇಚ್ಚಾಶಕ್ತಿ ಕೊರತೆಯಿಂದ ಕೇತ್ರ ಮರು ವಿಂಗಡಣೆ ಮತ್ತು ಸೀಮಾ ನಿರ್ಣಯಕ್ಕೆ ಆಯೋಗ ರಚಿಸಿ ಕ್ಷೇತ್ರ ಸೀಮಾ ನಿರ್ಣಯ ಪ್ರಕ್ರಿಯೆ ಕೈಗೊಳ್ಳಲಾಗಿತ್ತು. ಆದರೆ, ನಿಗದಿತ ಅವಧಿಯಲ್ಲಿ ಸೀಮಾ ವಿಸ್ತರಣೆ ಪ್ರಕ್ರಿಯೆ ಪೂರ್ಣಗೊಳ್ಳದೆ ಇರುವುದರಿಂದ ರಾಜ್ಯ ಸರಕಾರ ಮತ್ತೆ ಆಯೋಗದ ಅವಧಿಯನ್ನು ಆರು ತಿಂಗಳಿವೆ ವಿಸ್ತರಿಸಿದೆ.
ಸೀಮಾ ನಿರ್ಣಯ ಪ್ರಕ್ರಿಯೆ ಮುಂದುವರೆದಿದ್ದರಿಂದ ಮುಂದಿನ ಆರು ತಿಂಗಳು ಕಾಲ ಚುನಾವಣೆ ಅತಂತ್ರಕ್ಕೆ ಸಿಕ್ಕುವಂತಾಗಿದೆ. ಪಂಚಾಯತ್ ಚುನಾವಣಾ ಸ್ಪರ್ಧಾಕಾಂಕ್ಷಿಗಳು ಚುನಾವಣೆಗಾಗಿ ಮತ್ತಷ್ಟು ಕಾಲ ಕಾಯುವಂತಾಗಿದೆ. ಜಿಲ್ಲೆಯಲ್ಲಿ ಈ ಮುಂದೆ ಒಟ್ಟು ೩೮ ಜಿಲ್ಲಾ ಪಂಚಾಯತ್ ಕ್ಷೇತ್ರಗಳಿದ್ದವು. ಪರಿಷ್ಕರಣೆ ನಂತರ ೪೨ ಕ್ಷೇತ್ರಗಳು ಎಂದು ಅಂದಾಜು ಮಾಡಲಾಗಿತ್ತು.ಈಗ ಸೀಮಾ ನಿರ್ಣಯದ ನಂತರ ಕ್ಷೇತ್ರ ವ್ಯಾಪ್ತಿಯಲ್ಲಿ ತಮ್ಮ ರಾಜಕೀಯ ಶಕ್ತಿ ಯಾವ ರೀತಿಯಲ್ಲಿ ಇರಲಿದೆ ಎನ್ನುವ ಕುತೂಹಲ ಆಕಾಂಕ್ಷಿಗಳನ್ನು ಕಾಡುತ್ತಿದೆ.