ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ತನಿಖಾ ದಳದಿಂದ ಕಾರ್ಯಾಚರಣೆ

ಮಂಗಳೂರು,ಡಿ.೨೨- ರಾಷ್ರ್ಟೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ ದಡಿಯಲ್ಲಿ ಆಹಾರ ಸುರಕ್ಷತಾ ಇಲಾಖೆ ಮತ್ತು ಊರ್ವಸ್ಟೋರ್ ಪೊಲೀಸ್ ಠಾಣೆ ಅಧಿಕಾರಿಗಳೊಂದಿಗೆ ದಕ್ಷಿಣ ಕನ್ನಡ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ತನಿಖಾ ದಳ ನಗರದಲ್ಲಿ ಕಾರ್ಯಾಚರಣೆ ನಡೆಸಿತು. ಕಾರ್ಯಾಚರಣೆಯಲ್ಲಿ ಆಹಾರ ಸುರಕ್ಷತಾಧಿಕಾರಿ ರಾಜು, ಸಿಪಿಸಿ ಬಸವರಾಜು, ಜಿಲ್ಲಾ ಸಲಹೆಗಾರ ಡಾ.ಹನುಮಂತರಾಯಪ್ಪ, ಆಪ್ತ ಸಮಾಲೋಚಕ ವಿಜಯ್ ಕುಮಾರ್, ವಿದ್ಯಾ ಕುಮಾರಿ ಮತ್ತಿತರರು ಉಪಸ್ಥಿತರಿದ್ದರು.