ಜಿಲ್ಲಾ ಟೈಕ್ವೊಂಡೋ ಅಸೋಶಿಯೇಶನ್ ಸಾಧನೆ 38 ಚಿನ್ನ 22 ಬೆಳ್ಳಿ ಪದಕ

ವಿಜಯಪುರ, ಜ.3-ವಿಜಯಪುರ ಜಿಲ್ಲಾ ಟೈಕ್ವೊಂಡೋ ಅಸೋಶಿಯೇಶನ್ ಸ್ಪರ್ಧಾಳುಗಳು ರಾಜ್ಯ ಮಟ್ಟದ ಆನ್‍ಲೈನ್ ಟೈಕ್ವೊಂಡೋ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ ಎಂದು ತರಬೇತಿದಾರ ಮಹಾಂತೇಶ ತಾಳಿಕೋಟಿ ತಿಳಿಸಿದ್ದಾರೆ.
2020-21ನೇ ಸಾಲಿನ ರಾಜ್ಯ ಮಟ್ಟದ ಟೈಕ್ವೊಂಡೋ ಸ್ಪರ್ಧೆಯಲ್ಲಿ ಈ ಬಾರಿ ವಿಜಯಪುರ ಜಿಲ್ಲೆಗೆ ಉತ್ತಮ ಫಲಿತಾಂಶ ಬಂದಿದೆ.
ಕಳೆದ ಡಿಸೆಂಬರ್ ತಿಂಗಳಿನ ಕೊನೆಯ ವಾರದಲ್ಲಿ ವೇಸ್ಟಾರ್ ಕಪ್ ಬೆಂಗಳೂರು ಅವರು ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಆನ್‍ಲೈನ್ ಟೈಕ್ವೊಂಡೋ ಸ್ಪರ್ಧೆಯಲ್ಲಿ ಭಾಗವಹಿಸಿದ ವಿಜಯಪುರ ಜಿಲ್ಲಾ ಟೈಕ್ವೊಂಡೋ ಅಸೋಶಿಯೇಶನ್ ವಿಜಯಪುರ ಪಟುಗಳು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ವಿಜಯಪುರ ಜಿಲ್ಲಾ ಟೈಕ್ವೊಂಡೋ ಅಸೋಶಿಯೇಶನ್ ವಿಜಯಪುರ ಅಡಿಯಲ್ಲಿ ಯಾಕ್ಸೆನ್ ಅಕ್ಯಾಡೆಮಿಯ ಟೈಕ್ವೊಂಡೋ ತರಬೇತಿ ಪಡೆಯುತ್ತಿರುವ 4ರಿಂದ26 ವಯೋಮಾನದ ಬಾಲಕ ಬಾಲಕಿಯರು ಭಾಗವಹಿಸಿ ಜಿಲ್ಲೆಗೆ ಒಟ್ಟು 38 ಚಿನ್ನ 22 ಬೆಳ್ಳಿ ಪದಕಗಳನ್ನು ಬಾಚಿ ಕೊಂಡಿದ್ದಾರೆ.
ಕರೋನಾ ವೈರಸ್ ಭೀತಿಯ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು ಮಹಿಳೆಯರ ಸ್ವಯಂ ಸಂರಕ್ಷಣೆಗಾಗಿ ಇರುವ ಟೈಕ್ವೊಂಡೋ ತರಬೇತಿ ಪಡೆದುಕೊಂಡ ಇವರು ರಾಜ್ಯಮಟ್ಟದ ಸ್ಪರ್ಧೆಗೆ ತೋರಿದ ಅವಿರತ ಶ್ರಮದಿಂದ ಇಷ್ಟೊಂದು ಪದಕಗಳ ಸಾಧನೆಗೆ ಸಾಧ್ಯವಾಗಿದೆ ಎಂದು ಯಾಕ್ಸೆನ್ ಅಕ್ಯಾಡೆಮಿ ಅಭಿನಂದನೆ ಸಲ್ಲಿಸಿದೆ.
ರಾಜ್ಯ ಮಟ್ಟದ ಟೈಕ್ವೊಂಡೋ ಸ್ಪರ್ಧೆಯಲ್ಲಿ ಸಾಧನೆ ಗೈದ ಈ ಪಟುಗಳು ಮುಂದೆ ರಾಷ್ಟ್ರಮಟ್ಟದಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ. ಟೈಕ್ವೊಂಡೋ ತರಬೇತಿಯಿಂದ ಮಹಿಳೆಯರು ಯಾವುದೇ ಸಂದಿಗ್ಧ ಪರಿಸ್ಥಿತಿಯಲ್ಲಿ ಸುರಕ್ಷಿತವಾಗಿ ತಮ್ಮನ್ನು ತಾವು ರಕ್ಷಿಸಿಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ಅಕಾಡೆಮಿಯ ಸಹಾಯಕ ತರಬೇತಿದಾರ ಮಹೇಶ ತಾಳಿಕೋಟಿ ಶುಭ ಹಾರೈಕೆಯ ವೇಳೆ ಮಾತನಾಡುತ್ತ ವಿದ್ಯಾರ್ಥಿಗಳ ದೈಹಿಕ ಸಾಮಥ್ರ್ಯ ಹೆಚ್ಚಿಸಿಕೊಳ್ಳಲು ಟೈಕ್ವೊಂಡೋ ತರಬೇತಿ ಅತ್ಯಂತ ಸಹಕಾರಿಯಾಗಲಿದೆ ಎಂದರು. ಈ ಸಂದರ್ಭದಲಿಜಿಲ್ಲೆಯ ಕ್ರೀಡಾ ಪಟುಗಳು ಮತ್ತು ತರಬೇತಿದಾರು ಪಾಲ್ಗೊಂಡಿದ್ದರು.