ಜಿಲ್ಲಾ ಜನತಾದಳ (ಜಾತ್ಯಾತೀತ) ಪಕ್ಷದ ಕಛೇರಿಯಲ್ಲಿ ಶ್ರೀ ವಾಲ್ಮೀಕಿ ಜಯಂತಿ

ಬಳ್ಳಾರಿ, ಅ.31: ಇಂದು ಬಳ್ಳಾರಿ ಜಿಲ್ಲಾ ಜಾತ್ಯಾತೀತ ಜನತಾದಳ ಕಛೇರಿಯಲ್ಲಿ ಜಿಲ್ಲಾ ಸಮ್ಮುಖದಲ್ಲಿ ಸಮನ್ವಯ ಸಮತಿ ಸದಸ್ಯರು, ಕಾರ್ಯಕರ್ತರು ಇವರ ಸಮ್ಮುಖದಲ್ಲಿ ಶ್ರೀ ವಾಲ್ಮೀಕಿ ಮಹರ್ಷಿಯವರ ಜಯಂತಿಯನ್ನು ಆಚರಿಸಲಾಯಿತು. ವಾಲ್ಮೀಕಿಭವನದ ಮುಂಭಾಗದಲ್ಲಿರುವ ಶ್ರೀ ವಾಲ್ಮೀಕಿ ಮಹರ್ಷಿಯವರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು.
ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಡಾ|| ಬಸಪ್ಪ, ಅವರು ಮಾತನಾಡಿ ಮಹರ್ಷಿ ವಾಲ್ಮೀಕಿಯವರು ಭಾರತ ದೇಶಕ್ಕೆ ತ್ರೇತಾಯುಗದಲ್ಲಿ ಸುಂದರವಾದ ರಾಮಾಯಣ ಕಾವ್ಯವನ್ನು ನೀಡಿದ್ದಾರೆ. ಅದರಲ್ಲಿ ಭಾರತ ದೇಶದ ಜನತೆ ನ್ಯಾಯ, ನೀತಿ, ನೈತಿಕತೆ, ಸಂಸ್ಕೃತಿ, ಜೀವನವಿಧಾನ ಮುಂತಾದ ವಿಷಯಗಳನ್ನು ಪ್ರತಿಯೊಬ್ಬ ವ್ಯಕ್ತಿಯು ರಾಮಾಯಣದ ಅಂಶಗಳನ್ನು ಪರಿಪಾಲಿಸುವ ರೀತಿಯಲ್ಲಿ ಮಹತ್ವದ ಅಂಶಗಳನ್ನು ಅಳವಡಿಸಲಾಗಿದೆ. ಈ ಮಹಾಕಾವ್ಯವನ್ನು ಭಾರತದ ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ನಗರ ಅಧ್ಯಕ್ಷ ಡಿ.ವಿಜಯಕುಮಾರ್, ಜಿಲ್ಲಾ ಸಂಘಟನ ಕಾರ್ಯದರ್ಶಿ ಸಿರಿಗೇರಿ ಸಿದ್ದರಾಮಪ್ಪ, ಹಿರಿಯ ಉಪಾಧ್ಯಕ್ಷರು ಹಾಜಿ ಕಪ್ಪಗಲ್ ರಸೂಲ್‍ಸಾಬ್, ಜಿಲ್ಲಾ ಉಪಾಧ್ಯಕ್ಷರು ಬಂಡೇಗೌಡ, ಜಿಲ್ಲಾ ಉಪಾಧ್ಯಕ್ಷರು ಶ್ರೀಮತಿ ರಾಮೇಶ್ವರಿ, ಜಿಲ್ಲಾ ಖಜಾಂಚಿ ಶ್ರೀನಿವಾಸ್ ಕ್ಯಾಂಪ್, ಜಿಲ್ಲಾ ವಕ್ತಾರರು ಎಸ್. ಯಲ್ಲನಗೌಡ, ರುದ್ರಮುನಿ, ಎಸ್.ಸಿ. ಘಟಕದ ಜಿಲ್ಲಾಧ್ಯಕ್ಷರು ಕೋರ್ಲಗುಂದಿ ಪಂಪಾಪತಿ, ಎಸ್.ಸಿ. ನಗರ ಅಧ್ಯಕ್ಷ ಸಿದ್ದೇಶ್, ಮುಕ್ಕಣ್ಣ, ಮಹಿಳಾ ಘಟಕದ ಜಿಲ್ಲಾಧ್ಯಕ್ಷರು ವೈ.ಗೌಸೀಯ ಬೀ, ಎಸ್.ವಿಜಯಕುಮಾರಿ, ಪುಷ್ಪ, ಇನ್ನೂ ಹಲವಾರು ಕಾರ್ಯಕರ್ತರು ಹಾಜರಿದ್ದರು.