
ಬಳ್ಳಾರಿ, ಆ.15 ಸಂಸ್ಥೆಯ ಆವರಣದಲ್ಲಿ 77ನೇ ಸ್ವತಂತ್ರೋತ್ಸವವನ್ನು ರಾಷ್ಟ್ರಧ್ವಜಾರೋಹಣ ಮಾಡಿ ಮಹಾತ್ಮಾ ಗಾಂಧೀಜಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವುದರೊಂದಿಗೆ ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷರು ಸಿ.ಶ್ರೀನಿವಾಸ ರಾವ್ ಇವರು ರಾಷ್ಟ್ರಧ್ವಜಾರೋಹಣವನ್ನು ನೆರವೇರಿಸಿದರು.ಈ ಸಂದರ್ಭದಲ್ಲಿ ಹಿರಿಯ ಉಪಾಧ್ಯಕ್ಷರಾದ ಬಿ.ಮಹಾರುದ್ರಗೌಡ, ಉಪಾಧ್ಯಕ್ಷರಗಳಾದ ಎ.ಮಂಜುನಾಥ, ಕೆ.ಸಿ.ಸುರೇಶಬಾಬು,ಜಂಟಿಕಾರ್ಯದರ್ಶಿಗಳಾದ, ಎಸ್.ದೊಡ್ಡನಗೌಡ, ಸೊಂತ್ ಗಿರಿಧರ್, ಕಾರ್ಯಕಾರಿ ಸಮಿತಿ ಸದಸ್ಯರು, ವಿಶೇಷ ಆಹ್ವಾನಿತರು, ವಿಶೇಷ ಸಮನ್ವಯ ಸಮಿತಿ ಸದಸ್ಯರು ರಾಷ್ಟ್ರಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗೌರವಸಲ್ಲಿಸಿದರು.