ಜಿಲ್ಲಾ ಛಲವಾದಿ ಮಹಾಸಭಾದ ಬೃಹತ್ ಸಮಾವೇಶ

ರಾಯಚೂರು,ಫೆ.೨೫- ಜಿಲ್ಲಾ ಛಲವಾದಿ ಮಹಾಸಭಾದ ಬೃಹತ್ ಸಮಾವೇಶವನ್ನು ಮಾರ್ಚ್ ೩ ರಂದು ಲಿಂಗಸುಗೂರಿನ ಜೂನಿಯರ್ ಕಾಲೇಜು ಆವರಣದಲ್ಲಿ ಬೆಳಿಗ್ಗೆ ೧೧ ಗಂಟೆಗೆ ಆಯೋಜಿಸಲಾಗಿದೆ ಎಂದು ಛಲವಾದಿ ಮಹಾಸಭಾ ರಾಯಚೂರು ತಾಲೂಕು ಸಮಿತಿಯ ಅಧ್ಯಕ್ಷ ವೀರೇಶ ಗಾಣಧಾಳ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಛಲವಾದಿ ಮಹಾಸಭಾದ ರಾಜ್ಯಾಧ್ಯಕ್ಷ ನಿವೃತ್ತಿ ಐ.ಎ.ಎಸ್ ಕೆ.ಶಿವರಾಂ ಇವರ ಆದೇದ ಮೇರೆಗೆ, ರಾಜ್ಯ ನಿರ್ದೇಶಕ ಎಂ.ವಸಂತ ಜಿಲ್ಲಾಧ್ಯಕ್ಷ ಕೆ.ನಾಗಲಿಂಗಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಈ ಸಮಾವೇಶವನ್ನು ಆಯೋಜಿಸಲಾಗಿದೆ. ಸಮಾಜದ ಮುಖಂಡರು ಜಿಲ್ಲಾ ಛಲವಾದಿ ಮಹಾಸಭಾ ಬೃಹತ್ ಸಮಾವೇಶಕ್ಕೆ ರಾಯಚೂರು ತಾಲೂಕಿನಿಂದ ಸುಮಾರು ೮ ಸಾವಿರ ಕ್ಕೂ ಹೆಚ್ಚಿನ ಜನರು ಭಾಗವಹಿಸುವ ನಿರೀಕ್ಷೆಯಿದೆ.ಆದ್ದರಿಂದ ತಮ್ಮ ಕುಟುಂಬ ಸಮೇತ ಆಗಮಿಸಿ ಸಮಾವೇಶವನ್ನು ಯಶಸ್ವಿಗೊಳಬೇಕು ಎಂದು ಮನವಿ ಮಾಡಿದರು.
ಈ ಸಮಾವೇಶಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೋಳಿ, ಮಾಜಿ ಸಚಿವೆ ಮೋಟಮ್ಮ, ಶಾಸಕರಾದ ಪ್ರಾದಬಾಯಿ, ಜೆ.ಡಿ.ಎಸ್. ಮಾಜಿ ರಾಜ್ಯಾಧ್ಯಕ್ಷ ಹೆಚ್.ಕೆ. ಕುಮಾರಸ್ವಾಮಿ,ಡಾ.ಅನ್ನಾದಾನಿ,ಮಾಜಿ ಸಚಿವ ಹಾಗು ಹಾಲಿ ಶಾಸಕ ಡಿ.ಎಸ್. ವೀರಯ್ಯ, ಸೇರಿದಂತೆ ಜಿಲ್ಲೆಯ ಎಲ್ಲಾ ಪಕ್ಷದ ಜಿಲ್ಲಾಧ್ಯಕ್ಷರು,ಶಾಸಕರು,ಮಾಜಿ ಶಾಸಕರು ಮತ್ತು ನಮ್ಮ ಸಮಾಜದ ಶಾಸಕರು, ಮಾಜಿ ಸಂಸದರು,ಮಾಜಿ ಸಚಿವರು,ಜಿಲ್ಲೆಯ ವಿವಿಧ ಮುಖಂಡರು,ನಮ್ಮ ಜಿಲ್ಲೆಯ ಎಲ್ಲಾ ಪಕ್ಷದ ನಾಯಕರು,ಮುಖಂಡರು,ಸಮಾಜದ ಅಧ್ಯಕ್ಷರು,ಸಮಾಜದ ಮುಖಂಡರನ್ನು ಈ ಬೃಹತ್ ಸಮಾವೇಶಕ್ಕೆ ಆಹ್ವಾನಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ನಗರ ಅಧ್ಯಕ್ಷ ವಿಜಯ ಪ್ರಸಾದ,ಪ್ರಶಾಂತ ಕುಮಾರ,ಭೀಮಪ್ಪ ನೆಲಹಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.