
ಮೈಸೂರು,ಏ.15:- ಚುನಾವಣಾ ಪ್ರಕ್ರಿಯೆಗಳ ವೀಕ್ಷಣೆಗೆ ಆಗಮಿಸಿರುವ ಚುನಾವಣಾ ವೀಕ್ಷಕರು ಜಿಲ್ಲೆಯ ಚುನಾವಣಾ ಸಿದ್ಧತೆಗಳು ಹಾಗೂ ವಿವಿಧ ತಂಡಗಳು ಮಾದರಿ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕೈಗೊಂಡಿರುವ ಕ್ರಮಗಳ ಬಗೆಗೆ ಮಾಹಿತಿ ಪಡೆದುಕೊಂಡರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳಾದ ಡಾ.ಕೆ.ವಿ.ರಾಜೇಂದ್ರ ಅವರು ಮಾಹಿತಿ ನೀಡಿ ಚುನಾವಣೆ ಘೋಷಣೆ ಮುನ್ನವೇ ಎಲ್ಲಾ ಸಮಿತಿಗಳು ಕಾರ್ಯ ನಿರ್ವಹಿಸಲು ಆರಂಭಿಸಿದ್ದು, ಅಬಕಾರಿ ಇಲಾಖೆಯವರು ಅತಿಹೆಚ್ಚು ಮೌಲ್ಯದ ಮದ್ಯ ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.ಚೆಕ್ ಪೆÇೀಸ್ಟ್ ಗಳಲ್ಲಿ ನಿರಂತರ ಕಣ್ಗಾವಲಿದ್ದು ರಾಜ್ಯ ಹಾಗೂ ಹೊರರಾಜ್ಯಗಳ ವಾಹನ ತಪಾಸಣೆ ನಡೆಯುತ್ತಿದ್ದು, ಬ್ಯಾಂಕ್ ಗಳು ಹಣ ವರ್ಗಾವಣೆ ಬಗೆಗೂ ನಿಗಾ ವಹಿಸಲಾಗಿದೆ,ವೇರ್ ಹೌಸ್, ಗೋಡೋನ್ ,ತೋಟದ ಮನೆಗಳು, ರೆಸಾರ್ಟ್, ಹೋಂಸ್ಟೇ ಗಳ ಮೇಲೆ ನಿಗಾ ಇರಿಸಲಾಗಿದ್ದು,ಯಾವುದೇ ಆಮಿಷ ಒಡ್ಡುವವರ ಮೇಲೆ ಕ್ರಮ ಜರುಗಿಸುವ ಮೂಲಕ ಮುಕ್ತ ನ್ಯಾಯಸಮ್ಮತ ಚುನಾವಣೆ ನಡೆಸಲು ಚುನಾವಣಾ ಕಾರ್ಯದಲ್ಲಿ ತೊಡಗಿರುವವರಿಗೆ ತರಬೇತಿ ನೀಡಲಾಗಿದೆ, ಮಾಧ್ಯಮ ಕಣ್ಗಾವಲು ಸಮಿತಿ ಪತ್ರಿಕೆಯಲ್ಲಿ ಪ್ರಕಟವಾಗುವ ಪಾವತಿ ಸುದ್ದಿ, ಜಾಹೀರಾತು ಪ್ರಮಾಣೀಕರಣ ನೀಡುವುದು ಹಾಗೂ ಚುನಾವಣಾ ಜಾಗೃತಿ ಬಗೆಗೆ ಕಾರ್ಯಕ್ರಮ ಗಳನ್ನು ಮಾಡಲಾಗುತ್ತಿದೆ ಎಂದರು.
ಅಬಕಾರಿ, ಆದಾಯ ತೆರಿಗೆ ಇಲಾಖೆ, ವಾಣಿಜ್ಯ ತೆರಿಗೆ ಇಲಾಖೆ, ಚುನಾವಣಾ ಅಧಿಕಾರಿಗಳು ವೀಕ್ಷಕರು ಗಳಿಗೆ ಮಾಹಿತಿ ನೀಡಿದರು.
ಚುನಾವಣಾ ವೀಕ್ಷಕರುಗಳಾದ ಪ್ರೀತಂ ಕುಮಾರ್ ಹೆಚ್ ಟ್ಯುರೆರಾವ್, ವೀರೇಂದ್ರ ಕುಮಾರ್ ಪಟೇಲ್, ರಾಮ್ ಕೃಷ್ಣ್ ಕೆಡೆಯ, ಹೇಮಂತ್ ಹಿಂಗೋನಿಯ, ಧೀರೇಂದ್ರ ಮಣಿ ತ್ರಿಪಾಠಿ,ನಿತಿನ್ ಕುಮಾರ್ ಜೈಮನ್, ರಾಜೇಶ್ ಮಹಾಜನ್, ಗಜೇಂದ್ರ ಸಿಂಗ್, ಸಂದೀಪ್ ಕುಮಾರ್ ಮಿಶ್ರ ವಿವಿಧ ತಂಡಗಳ ನೋಡಲ್ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಸಭೆಯಲ್ಲಿ ಪೆÇಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ಜಿ.ಪಂ.ಸಿಇಓ ಗಾಯತ್ರಿ ಕೆ.ಎಂ,ಅಪರ ಜಿಲ್ಲಾಧಿಕಾರಿ ಕವಿತ ರಾಜಾರಾಂ, ನಗರ ಪಾಲಿಕೆ ಆಯುಕ್ತ ಲಕ್ಷ್ಮೀಕಾಂತ ರೆಡ್ಡಿ ಸೇರಿದಂತೆ ತಾಲೂಕು ಚುನಾವಣಾ ಅಧಿಕಾರಿಗಳು ಭಾಗವಹಿಸಿದ್ದರು.