
ಬೀದರ, ಸೆ.6: ಬೀದರನ ಪ್ರತಿಷ್ಠಿತ ಅನುದಾನಿತ ವಿದ್ಯಾಸಂಸ್ಥೆಯಾದ ಗುರು ನಾನಕ್ ದೇವ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಮಾರು 34 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಬೋದಕ ಸಿಬ್ಬಂದಿಯಾದ ರಮೇಶ ತಗಾರೆಯರಿಗೆ ನಿಯಮಾನುಸಾರ ಬರಬೇಕಾದ ಗ್ರ್ಯಾಚುಟಿ ಹಣವನ್ನು ನೀಡದೇ ಇದ್ದ ಕ್ರಮವನ್ನು ಪ್ರಶ್ನಿಸಿ ಬೀದರನ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಮಾನ್ಯ ಆಯೋಗವು ದೂರುದಾರ ಹಾಗೂ ಎದುರುದಾರರ ಸಂಪೂರ್ಣ ವಿಚಾರಣೆಯ ನಂತರ ಗ್ರಾಹಕನ ಪ್ರಕಣವನ್ನು ಇತ್ಯರ್ಥಪಡಿಸಿದ ಆಯೋಗ, ದೂರುದಾರನು ಅನುದಾನರಹಿತ ಖಾಸಗಿ ಸಂಸ್ಥೆಯಲ್ಲಿ ಭೋದಕನಾಗಿ ಕೆಲಸ ನಿರ್ವಹಿಸಿದ ಗ್ರಾಹಕನಿದ್ದು, ಅನುದಾನ ಸಹಿತ ಅಥವಾ ಸರ್ಕಾರಿ ನೌಕರನಾಗಿರದ ಸದರಿ ಗ್ರಾಹಕನಿಗೆ 7,49,072 ರೂ. ಗಳನ್ನು ಕೊಡುವಂತೆ ವಿದ್ಯಾ ಸಂಸ್ಥೆಗೆ ಆದೇಶಿಸಿದೆ. ಹಾಗೂ ದೂರುದಾರರು ಗ್ರ್ಯಾಚುಟಿ ಕೋರಿ ಸಲ್ಲಿಸಿದ ಅರ್ಜಿ ದಿನಾಂಕದಿಂದ ವಾರ್ಷಿಕ ಶೇಕಡಾ 9% ಬಡ್ಡಿಯೊಂದಿಗೆ ಸಂದಾಯ ಮಾಡಲು ಆದೇಶಿಸಿದೆ. ದೂರುದಾರರು ಅನುಭವಿಸಿದ ಮಾನಸಿಕ ಯಾತನೆ ಹಾಗೂ ಆಯೋಗಕ್ಕೆ ಸಲ್ಲಿಸಿದ್ದ ಪ್ರಕರಣದ ವೆಚ್ಛ ಸೇರಿ 15,000 ರೂ.ಗಳನ್ನು ಎದುರುದಾರರ ವಿದ್ಯಾ ಸಂಸ್ಥೆ ಭರಿಸುವಂತೆ ಆಯೋಗದ ಅಧ್ಯಕ್ಷರಾದ ಎಮ್ ಹೆಚ್ ಛಬ್ಬಿ, ಸದಸ್ಯರುಗಳಾದ ಕವಿತಾ ಹಾಗೂ ತ್ರಿಯಂಬಕೇಶ್ವರ ಅವರು ಮಹತ್ವದ ತೀರ್ಪು ನೀಡಿದ್ದಾರೆಂದು ಬೀದರ ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.