ಜಿಲ್ಲಾ ಗ್ಯಾರೇಜ್, ವರ್ಕ್ ಶಾಪ್ ಮಾಲೀಕರು, ಕಾರ್ಮಿಕರ ಜೊತೆ ವಿನಯ್ ಕುಮಾರ್ ಸಭೆ

ಸಂಜೆವಾಣಿ ವಾರ್ತೆ
ದಾವಣಗೆರೆ.ಏ.29: ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯ್ ಕುಮಾರ್ ಅವರು ಜಿಲ್ಲಾ ಗ್ಯಾರೇಜ್, ವರ್ಕ್ ಶಾಪ್ ಮಾಲೀಕರು ಮತ್ತು ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುವ ಮೂಲಕ ಮತ ಯಾಚಿಸಿದರು.ಇದೇ ವೇಳೆ ವಿನಯ್ ಕುಮಾರ್ ಅವರನ್ನು ಗೌರವಿಸಲಾಯಿತು. ಫಾರೂಖ್, ನಾಗರಾಜ್, ಸೈಯದ್ ಯೂಸುಫ್, ಸೈಯದ್ ತೌಫಿಕ್ ಮತ್ತಿತರರು ಇದ್ದರು.ಈ ವೇಳೆ ಮಾತನಾಡಿದ ವಿನಯ್ ಕುಮಾರ್ ಅವರು ನನ್ನದು ಸ್ವಾಭಿಮಾನದ ಹೋರಾಟ. ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕು. ಭವಿಷ್ಯದಲ್ಲಿ ಐಎಎಸ್, ಐಪಿಎಸ್ ನಂಥ ಹುದ್ದೆಗಳಿಗೆ ಹೋಗಬೇಕು. ಉತ್ತಮ ಶಿಕ್ಷಣ ನೀಡುವ ಜವಾಬ್ದಾರಿ ನನಗೆ ಬಿಡಿ. ನಿಮ್ಮ ಸಮಸ್ಯೆಗಳಿಗೆ ನಾನು ಸ್ಪಂದಿಸುತ್ತೇನೆ ಎಂದು ಹೇಳಿದರು.ಗ್ಯಾರೇಜ್, ವರ್ಕ್ ಶಾಪ್ ಕೆಲಸ ಮಾಡುವವರ ಪರಿಸ್ಥಿತಿ ಚೆನ್ನಾಗಿ ಅರಿತಿದ್ದೇನೆ. ನಿಮ್ಮ ಬದುಕು ಬದಲಾಯಿಸಲು ಶ್ರಮಿಸುತ್ತೇನೆ. ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ಕೊಡಿಸುವ ಜವಾಬ್ದಾರಿ ನನ್ನದು. ಒಂದು ಬಾರಿ ನನ್ನನ್ನು ಆರಿಸಿ ಕಳುಹಿಸಿ. ಆಮೇಲೆ ನಾನು ಮಾತನಾಡುವುದಿಲ್ಲ. ನನ್ನ ಕೆಲಸ ಮಾತನಾಡುವಂತೆ ಮಾಡಿ ಮತ್ತೆ ನಿಮ್ಮ ಬಳಿ ಬರುತ್ತೇನೆ ಎಂದು ಭರವಸೆ ನೀಡಿದರು.