ಜಿಲ್ಲಾ ಗೃಹರಕ್ಷಕದಳದಿಂದ ಸಸಿ ನೆಡುವಿಕೆ

ಚಿತ್ರದುರ್ಗ.ಸೆ.೮; ಜಿಲ್ಲಾ ಗೃಹರಕ್ಷಕದಳದ ವತಿಯಿಂದ ನಗರದಲ್ಲಿ ಹಲವೆಡೆ ಸಸಿ ನೆಡುವಿಕೆ ಹಾಗೂ ಸಂತೆ ಹೊಂಡ ಸೇರಿದಂತೆ ಹಲವು ಪುಷ್ಕರಣಿಗಳನ್ನು ಗೃಹರಕ್ಷಕದವರಿಂದ ಸ್ವಚ್ಚತಾ ಕಾರ್ಯಕ್ರಮ ನಡೆಯಿತುನಂತರ ಪ್ರತಿವಾರ ಗೃಹರಕ್ಷಕದಳದವರಿಂದ ನಡೆಯುವ ಸ್ವಚ್ಛತಾ ಕಾರ್ಯಕ್ರಮಕ್ಕೆ ಜಿಲ್ಲಾ ಗೃಹರಕ್ಷಕದಳದ ಜಿಲ್ಲಾ ಕಮಾಂಡೆಂಟ್ ಶ್ರೀಮತಿ ಸಿ.ಕೆ.ಸಂಧ್ಯಾರವರು ಚಾಲನೆ ನೀಡಿ ಮಾತನಾಡಿ ಜಿಲ್ಲೆಯ ಗೃಹರಕ್ಷಕದಳದಲ್ಲಿ 750 ಜನರಿದ್ದು ಜಿಲ್ಲೆಯಲ್ಲಿ ಬಂದೋಬಸ್ತ್ ಹಾಗೂ ಜನರ ರಕ್ಷಣೆ ಮಾಡುವುದರ ಜೊತೆಗೆ ಸಾಮಾಜಿಕ ಸೇವಾ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು ಸಸಿ ನೆಡುವುದು ಸ್ವಚ್ಚತಾ ಕಾರ್ಯದಲ್ಲಿ ಸ್ವಯಂ ಪ್ರೇರಿತರಾಗಿ ಸಮಾಜ ಸೇವೆಯಲ್ಲಿ ತೊಡಗಿರುವುದು ಶ್ಲಾಘನೀಯವಾಗಿದೆ. ಜಿಲ್ಲೆಯಲ್ಲಿ ಸಮಾಜ ಸೇವೆಗೆ ಗೃಹರಕ್ಷಕದಳಕ್ಕೆ ಐತಿಹಾಸಿಕವಾಗಿ ಹೆಸರುಗಳಿಸಿದೆ ಸ್ವಚ್ಛಗೊಳಿಸುತ್ತಿರುವ ಇದೇ ಸಂತೆ ಹೊಂಡದಲ್ಲಿ ಈ ಹಿಂದೆ ಬಸ್ ಬಿದ್ದಾಗ ಹಲವಾರು ಜನರ ಪ್ರಾಣವನ್ನು ಗೃಹರಕ್ಷಕರು ಉಳಿಸಿದ್ದಾರೆ ಹಾಗೂ ಇತ್ತೀಚಿಗೆ ಹಲವರಿಗೆ ರಕ್ತದಾನ ಮಾಡಿ ಜೀವ ಉಳಿಸಿದ್ದಾರೆ. ಸಮಾಜಿಕ ಸೇವೆ ಕಾರ್ಯಾ ಚಟುವಟಿಕೆಗಳಲ್ಲಿ ತೊಡಗುವುದರೊಂದಿಗೆ ಪರಿಸರ ಸಂರಕ್ಷಣೆ ಐತಿಹಾಸಿಕ ಸ್ಥಳಗಳ ಸ್ವಚ್ಛತಾ ಕಾರ್ಯ ಪ್ರತಿವಾರ ನಡೆಸಬೇಕು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳುವುದರೊಂದಿಗೆ ಗೃಹರಕ್ಷಕರು ಜನಸ್ನೇಹಿಯಾಗಿ ಉತ್ತಮ ಕಾರ್ಯಗಳನ್ನು ಮಾಡುತ್ತಾ ಜನತೆಗೆ ಸೇವೆ ಸಲ್ಲಿಸಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಭೋದಕರಾದ ಹೆಚ್.ತಿಪ್ಪೇಸ್ವಾಮಿ, ಸಹಾಯಕ ಭೋದಕರಾದ ನಾಗರಾಜು, ಘಟಕದ ಅಧಿಕಾರಿಗಳಾದ ಸಿ.ಎನ್.ನಾಗರಾಜು, ಪ್ರಹ್ಲಾದ್, ವಿ.ಹೆಚ್.ತಿಪ್ಪೇಸ್ವಾಮಿ ಹಾಗೂ ಕಚೇರಿಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.