ಜಿಲ್ಲಾ ಖೋ-ಖೋ ಕ್ರೀಡೆಯಲ್ಲಿ ಫ್ರೆಂಡ್ಸ್ ಕ್ಲಬ್‍ಗೆ ಪ್ರಶಸ್ತಿ

ಸಂಜೆವಾಣಿ ವಾರ್ತೆ
ಚಾಮರಾಜನಗರ,ಮಾ.06- ಚಾಮರಾಜನಗರ ಜಿಲ್ಲಾಮಟ್ಟದ ಗ್ರಾಮೀಣ ಕ್ರೀಡಾ ಕೂಟದಲ್ಲಿ ವೆಂಕಟಯ್ಯನ ಛತ್ರ ಫ್ರೆಂಡ್ಸ್ ಕ್ಲಬ್ ತಂಡವು ಖೋ-ಖೋ ಹಾಗೂ ಹಗ್ಗ ಜಗ್ಗಾಟ ಕ್ರೀಡೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿದೆ.
ನಗರದ ಡಾ.ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಚಾಮರಾಜನಗರ ಜಿಲ್ಲಾಮಟ್ಟದ ಗ್ರಾಮೀಣ ಕ್ರೀಡಾಕೂಟದಲ್ಲಿ ವೆಂಕಟಯ್ಯನ ಛತ್ರದ ಫ್ರೆಂಡ್ಸ್ ಕ್ಲಬ್‍ತಂಡವು ಖೋಖೋ ಮತ್ತು ಹಗ್ಗ ಜಗ್ಗಾಟ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ವೆಂಕಟಯ್ಯನ ಛತ್ರ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಶಮಿತ್‍ಕುಮಾರ್ ಪ್ರಶಸ್ತಿ ಪ್ರಧಾನ ಮಾಡಿಪ್ರಶಸ್ತಿ ಪಡೆದ ಆಟಗಾರರನ್ನು ಅಭಿನಂದಿಸಿ ಮಾತನಾಡಿದ ಅವರು, ನಮ್ಮ ಗ್ರಾಮೀಣ ಪ್ರದೇಶದ ಯುವಕರು ಯಾವ ಕ್ರೀಡೆಯಲ್ಲೂ ಸಹ ಹಿಂದೆ ಇಲ್ಲ, ಇತ್ತೀಚಿನ ದಿನಗಳಲ್ಲಿ ಖೋ-ಖೋ, ಕಬ್ಬಡಿ, ವಾಲಿಬಾಲ್, ಕ್ರಿಕೆಟ್, ಸೇರಿದಂತೆ ಹಲವಾರು ಕ್ರೀಡೆಗಳಲ್ಲಿ ಎಲ್ಲರಿಗಿಂತ ಮುಂದೆ ಇದ್ದಾರೆ. ಅದರಂತೆ ಈ ಬಾರಿ ನಡೆದ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಖೋ-ಖೋ ಹಾಗೂ ಹಗ್ಗ ಜಗ್ಗಾಟ ಕ್ರೀಡೆಯಲ್ಲಿ ಜಯಶೀಲರಾಗಿ ಜಿಲ್ಲೆಗೆ ಮೊದಲ ಸ್ಥಾನ ತಂದಿರುವುದು ಹೆಮ್ಮೆಯ ವಿಷಯ.
ಕಳೆದ 20-25 ವರ್ಷಗಳಿಂದ ನಮ್ಮ ವೆಂಕಟಯ್ಯನ ಛತ್ರಗ್ರಾಮದ ಯುವಕರು ಖೋ-ಖೋ ಕ್ರೀಡೆಯಲ್ಲಿ ತನ್ನದೇ ಆದ ಸಾಧನೆಯನ್ನು ಮಾಡುತ್ತಿದ್ದಾರೆ, ಖೋ-ಖೋ ಕ್ರೀಡೆ ನಮ್ಮ ಗ್ರಾಮದ ತವರು ಕ್ರೀಡೆಯಾಗಿದೆ ಎಂದರು ಸಹ ತಪ್ಪಾಗುವುದಿಲ್ಲ. ಅದರಂತೆ ಇಲ್ಲಿನ ಯುವಕರು ಫ್ರೆಂಡ್ಸ್ ಕ್ಲಬ್ ಎಂದು ಒಂದು ಸಂಘಟನೆ ಮಾಡಿ ನಮ್ಮ ಸುತ್ತಮುತ್ತಲಿನ ಗ್ರಾಮದ ಯುವಕರನ್ನು ಒಳ್ಳೆಯ ಕ್ರೀಡಾ ಪಟುಗಳನ್ನಾಗಿ ತಯಾರು ಮಾಡುತ್ತಿದ್ದಾರೆ. ಈ ಕ್ಲಬ್‍ನಲ್ಲಿ ತರಬೇತಿ ಪಡೆದು ಕ್ರೀಡೆಯಲ್ಲಿ ಭಾಗವಹಿಸುತ್ತಿರುವ ಯುವಕರು ತಾಲೂಕು, ಜಿಲ್ಲೆ ಹಾಗೂ ರಾಜ್ಯವನ್ನು ಪ್ರತಿನಿಧಿಸುತ್ತಿರುವುದು ತುಂಬಾ ಸಂತಸತಂದಿದೆ ಎಂದು ಸಂತೋಷ ವ್ಯಕ್ತಪಡಿಸಿದರು.
ವಿಶೇಷವಾಗಿ ಈ ಬಾರಿ ಜಿಲ್ಲೆಯಲ್ಲಿ ಮೊಟ್ಟ ಮೊದಲ ಬಾರಿಗೆ ಆಯೋಜಿಸಿದ ಹಗ್ಗ ಜಗ್ಗಾಟ ಕ್ರೀಡೆಯಲು ಸಹ ಭಾಗವಹಿಸಿದ ನಮ್ಮ ಗ್ರಾಮದ ಯುವಕರು ಜಿಲ್ಲೆಯಲ್ಲೇ ಪ್ರಥಮ ಸ್ಥಾನ ತಂದಿರುವುದು ಫ್ರೆಂಡ್ಸ್ ಕ್ಲಬ್ ಸಾಧನೆ ಇನ್ನೊಂದು ಗರಿ ಎಂದು ಸಂತಸ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶ ಯುವಕರು ಹೆಚ್ಚು ಹೆಚ್ಚು ಕ್ರೀಡೆಗಳಲ್ಲಿ ಭಾಗವಹಿಸಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಸಾಧನೆಗಳನ್ನು ಮಾಡಿ ಎಂದು ಶುಭ ಹಾರೈಸಿದರು.
ನಂತರ ಪ್ರೌಢಶಾಲೆಯ ದೈಹಿಕ ಶಿಕ್ಷಕ ನಟರಾಜ್ ಮಾತನಾಡಿ, ಪ್ರತಿ ಹಳ್ಳಿಯಲ್ಲಿರುವ ಕ್ರೀಡಾಪಟುಗಳಿಗೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಭಾಗವಹಿಸುವ ಅವಕಾಶ ಸಿಗಬೇಕು ಎಂದರೆ ಇತರ ಗ್ರಾಮೀಣ ಕ್ರೀಡಾ ಕೂಟದಲ್ಲಿ ಪ್ರತಿಯೊಬ್ಬರೂ ಭಾಗವಹಿಸಬೇಕು. ಖೋ-ಖೋ, ಕಬ್ಬಡ್ಡಿ, ಹಗ್ಗ-ಜಗ್ಗಾಟ, ವಾಲಿಬಾಲ್, ತ್ರೋಬಾಲ್ ಹೀಗೆ ಹಲವು ಕ್ರೀಡೆಗಳು ನಮ್ಮ ಗ್ರಾಮೀಣ ಪ್ರದೇಶದ ಸೊಗಡನ್ನು ಎತ್ತಿ ಹಿಡಿಯುತ್ತವೆ.
ಈ ಮೂಲಕ ಗ್ರಾಮ ಮಟ್ಟದಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಪೆÇ್ರೀತ್ಸಾಹಿಸುವ ಕೆಲಸಗಳು ಪ್ರತಿಯೊಬ್ಬರೂ ಮಾಡಬೇಕುಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಫ್ರೆಂಡ್ಸ್‍ಕ್ಲಬ್‍ನ ಸದಸ್ಯರಾದ ಭುವನೇಶ್, ರಾಜು ಹೊಸೂರು, ಆನಂದ್, ಮಹದೇವ ಪ್ರಸಾದ್, ಮಣಿಕಂಠ, ಚಂದು, ದರ್ಶನ್, ಕೆಂಪರಾಜು, ವೆಂಕಟೇಶ, ಆದರ್ಶ, ನಿತಿನ್, ಮಹದೇವಸ್ವಾಮಿ, ಮಹೇಶ್, ಚಂದ್ರಶೇಖರ್, ನಾಗೇಂದ್ರ, ಮಧು ಸೇರಿದಂತೆ ಕ್ರೀಡಾಪಟುಗಳು ಹಾಜರಿದ್ದರು.