ಜಿಲ್ಲಾ ಕ.ಸಾ.ಪ ಚುನಾವಣೆ-ಅಳ್ಳುಂಡಿ ಮತಯಾಚನೆ

ಸಿರವಾರ.ಏ.೦೩- ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಸಾಹಿತಿ ಹಾಗೂ ದೇವದುರ್ಗದ ರಂಗಣ್ಣ ಪಾಟೀಲ್ ಅಳ್ಳುಂಡಿಯವರನ್ನು ಬೆಂಬಲಿಸಲು ಸಾರ್ವಾನುಮತದಿಂದ ನಿರ್ಧಾರ ಕೈಗೊಳ್ಳಲಾಯಿತು.
ಪಟ್ಟಣದ ಈಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಕರೆದಿದ್ದ ಕನ್ನಡ ಸಾಹಿತ್ಯ ಪರಿಷತ್‌ನ ಅಜೀವ ಸದಸ್ಯರ ಸಭೆಯಲ್ಲಿ ಮಲ್ಲಿಕಾರ್ಜುನ ಹಳ್ಳೂರ್ ಮಾತನಾಡಿದರು. ಕಸಾಪ ಸೇವಾಕಾಂಕ್ಷಿ ರಂಗಣ್ಣ ಪಾಟೀಲ್ ಅಳ್ಳುಂಡಿ, ಶ್ಯಾಮರಾವ್ ಕುಲಕರ್ಣಿ, ಸುಭಾಸ್ ಪಾಟೀಲ್, ತಾಲೂಕು ಕಸಾಪ ಅಧ್ಯಕ್ಷ ಟಿ.ಬಸವರಾಜ, ಚುಕ್ಕಿ ಶಿವಕುಮಾರ್, ಜೆ.ದೇವರಾಜ ಪಾಟೀಲ್, ಶಿವಶರಣ ಲಕ್ಕಂದಿನ್ನಿ, ಜಂಬಣ್ಣ ನಿಲೋಗಲ್, ಪತ್ರಕರ್ತ ಮೋಹಿನುದ್ದೀನ್ ಕಾಟಮಳ್ಳಿ, ಬಸವರಾಜ ನಾಯಕ ಮಸ್ಕಿ, ವೈ.ಭೂಪನಗೌಡ, ನರಸಿಂಹರಾವ್ ಕುಲಕರ್ಣಿ,ಸೂಗಪ್ಪ ಹೂಗಾರ್, ಜಿ.ವೀರೇಶ ಸೇರಿದಂತೆ ಕಸಾಪ ಅಜೀವ ಸದಸ್ಯರು ಇದ್ದರು.